Breaking News

”  ಕನ್ನಡಮ್ಮ” ಟೋಪಣ್ಣವರ ಅಗಲಿಕೆಗೆ..   ಮೂವತ್ತು ವರ್ಷ!!  

Spread the love

 

”  ಕನ್ನಡಮ್ಮ” ಟೋಪಣ್ಣವರ ಅಗಲಿಕೆಗೆ..

ಮೂವತ್ತು ವರ್ಷ!!

”  ಕನ್ನಡಮ್ಮ” ಟೋಪಣ್ಣವರ ಅಗಲಿಕೆಗೆ..   ಮೂವತ್ತು ವರ್ಷ!!

 

 

ಕನ್ನಡ ಹೋರಾಟಗಾರ,ಛಲಗಾರ,

ಬೆಳಗಾವಿಯ ಓಣಿ,ಓಣಿಗಳನ್ನು ಸುತ್ತಿ

ಯುವಕರಲ್ಲಿ ಕನ್ನಡದ ಕೆಚ್ಚನ್ನು

ಬಡಿದೆಬ್ಭಿಸಿದ ದಿ.ಎಮ್.ಎಸ್.

ಟೋಪಣ್ಣವರ ಹತ್ತಾರು ಕನ್ನಡ

ಸಂಘಟನೆಗಳು ಜನ್ಮ ತಾಳಲು

ಕಾರಣರಾದವರು.” ಕನ್ನಡಮ್ಮ”

ದಿನಪತ್ರಿಕೆಯ ಸಂಪಾದಕರಾಗಿ ಹಗಲಿರುಳು

ಎನ್ನದೇ ಪತ್ರಿಕೆಯ ಸರ್ವತೋಮುಖ

ಬೆಳವಣಿಗೆಗೆ ಬೆವರು ಸುರಿಸಿದವರು.

ನಾನು 1978 ರಲ್ಲಿ ಬೆಳಗಾವಿಗೆ

ಬರಲು ಕಾರಣರಾದ ಅವರು 180 ರೂ.

ಸಂಬಳ ಕೊಟ್ಟವರು.ಮಾಸಿಕ ಊಟದ

ಖಾನಾವಳಿಗೆ 65 ರೂ.17 ರೂ.ಶೆಟ್ಟಿಗಲ್ಲಿ

ರೂಮಿನ ಬಾಡಿಗೆ ಕೊಡುತ್ತಿದ್ದೆ.ಮೂರೇ

ತಿಂಗಳು ಕೆಲಸ ಮಾಡಿ ರಾಮದುರ್ಗಕ್ಕೆ

ವಾಪಸ್.ಅಲ್ಲಿಂದಲೇ ಪತ್ರಿಕೆಗೆ ವರದಿ.ಮಾಸಿಕ 30 ರೂ.ಗೌರವಧನ.

1980 ರ ಜೂನ್ 27 ಕ್ಕೆ ಮತ್ತೆ

ಬೆಳಗಾವಿಗೆ.ಈ ಬಾರಿ 365 ರೂ.ಪಗಾರ.ಆದರೆ ಪತ್ರಿಕೋದ್ಯಮ

ಸೈದ್ಧಾಂತಿಕ ಭಿನ್ನಾಭಿಪ್ರಾಯದಿಂದ

1981 ರ ಮೇ 10 ಕ್ಕೆ ,ಕೇವಲ 11 ತಿಂಗಳ ನಂತರ,ಅವರ ಪತ್ರಿಕೆ ಬಿಟ್ಟು ಮೇ 15 ಕ್ಕೆ ನಾಡೋಜ ದಿನಪತ್ರಿಕೆ ಸೇರಿ 8 ವರ್ಷಗಳ ಕಾಲ ಅಲ್ಲಿದ್ದೆ.

ಆದರೆ ನನ್ನ ಕನ್ನಡ ಪರ ಹೋರಾಟಗಳಲ್ಲಿ ಟೋಪಣ್ಣವರ ಸಾಥ್ ನೀಡುತ್ತಲೇ ಬಂದರು.ಯುವಕರೊಂದಿಗೆ ಯುವಕರಾಗಿ ಹೆಜ್ಜೆ ಇಡುತ್ತಲೇ ಸಾಗಿದರು.

ದೂರದರ್ಶನದಲ್ಲಿ ಕನ್ನಡ ವಾರ್ತೆ ಪ್ರಸಾರಕ್ಕೆ ಒತ್ತಾಯಿಸಿ ನಡೆದ ಹೋರಾಟ

ಇರಬಹುದು.1990 ರಲ್ಲಿ ನಡೆದ ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಕನ್ನಡ ಅಭ್ಯರ್ಥಿಗಳನ್ನು ಆರಿಸಿ ತರಲು ನಡೆಸಿದ ಸಂಘಟಿತ ಹೋರಾಟವಾಗಿರಬಹುದು.ದಿವಂಗತರ ಪಾತ್ರ ಅತ್ಯಂತ ಮಹತ್ವದಾಗಿತ್ತು.

ಬೆಳಗಾವಿಯಿಂದ ಬೆಂಗಳೂರಿಗೆ ಹೋಗುವ ಮಾರ್ಗದಲ್ಲಿ ಚಿತ್ರದುರ್ಗದ ಬಳಿ ಸಂಭವಿಸಿದ ರಸ್ತೆ ಅಪಘಾತದಕ್ಕೆ ಬಲಿಯಾದ ಅವರ ನೆನಪು ಗಡಿ ಭಾಗದ ಕನ್ನಡಿಗರಿಗೆ ಸದಾ ಹಸಿರು.

ಅಶೋಕ ಚಂದರಗಿ. ಬೆಳಗಾವಿ


Spread the love

About Yuva Bharatha

Check Also

ಅಕ್ಕಾ ಅಂದ್ರೆ ಅವರೇ ಅಂತ ಯಾಕೆ ತಿಳ್ಕೊತೀರಿ, ಪೆಗ್ ಅಂದ್ರೆ ಎನರ್ಜಿ ಡ್ರಿಂಕ್-ಮಾಜಿ ಶಾಸಕ ಸಂಜಯ ಪಾಟೀಲ.!

Spread the loveನಾನು ಭಾಷಣದಲ್ಲಿ ಹೆಬ್ಬಾಳಕರ ಹೆಸರನ್ನೆ ತಗೊಂಡಿಲ್ಲ. -ಮಾಜಿ ಶಾಸಕ ಸಂಜಯ ಪಾಟೀಲ.! ಯುವಭಾರತ ಸುದ್ದಿ ಬೆಳಗಾವಿ: ನಾನು …

Leave a Reply

Your email address will not be published. Required fields are marked *

seven − 4 =