ಮಲಪ್ರಭಾ ನದಿಯಲ್ಲಿ ಹೆಚ್ಚಿದ ಒಳಹರಿವು..
ಬಾದಾಮಿ-ಹೊಳೆ ಆಲೂರ ರಸ್ತೆ ಸಂಪರ್ಕ ಸೇತುವೆ ಮುಳುಗಡೆ.!
ಬಾಗಲಕೋಟೆ: ಮಹಾರಾಷ್ಟ್ರ, ಬೆಳಗಾವಿ ಹಾಗೂ ಧಾರವಾಡದಲ್ಲಿ ಭಾರೀ ಮಳೆ ಆಗುತ್ತಿರುವ ಹಿನ್ನಲೆಯಲ್ಲಿ ಬೆಣ್ಣಿ ಹಳ್ಳದ ನೀರು ಮಲಪ್ರಭಾ ನದಿಗೆ ಸೇರಿ ಒಳಹರಿವು ಹೆಚ್ಚಳವಾಗಿದ್ದು, ಬಾಗಲಕೋಟೆಯ ಬಾದಾಮಿ-ಹೊಳೆಆಲೂರ ಸಂಪರ್ಕ ಸೇತುವೆಯ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ.
ಮಲಪ್ರಭಾ ನದಿಯಲ್ಲಿ ಹೆಚ್ಚಿದ ಒಳಹರಿವಿನಿಂದ ಬಾದಾಮಿ ಮತ್ತು ಹೊಳೆ ಆಲೂರಿನ ಜನ ರೈಲ್ವೆ ಸೇತುವೆ ಮೂಲಕ ಸಂಚಾರ ಮಾಡಬೇಕಾಗಿದೆ. ಇದರಿಂದ ಬಾದಾಮಿ ತಾಲೂಕಿನ ನೀರಲಗಿ, ಜಕನೂರ, ತಮ್ಮನಾಳ ಗ್ರಾಮದ ಜನ ಹೈರಾಣಾಗಿದ್ದಾರೆ. ನದಿಯ ತೀರದಲ್ಲಿದ್ದ ಬಸವೇಶ್ವರ ದೇಗುಲ ಜಲಾವೃತವಾಗಿದೆ. ಮಲಪ್ರಭಾ ನದಿಯ ಪ್ರವಾಹದಿಂದ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.