ಭೂ ಕುಸಿತ ಉಂಟಾಗಿ ಮನೆ ಕುಸಿದು ಹೋಗಿದೆ..||
ಸಿಲುಕಿಕೊಂಡಿದ್ದ ನಾಲ್ವರನ್ನು ರಕ್ಷಿಸಲಾಗಿದೆ..!!

ಯುವ ಭಾರತ ಸುದ್ದಿ ಬೆಳಗಾವಿ : ನಗರದ ಗೊಂದಳಿ ಗಲ್ಲಿಯಲ್ಲಿ ಶನಿವಾರ ರಾತ್ರಿ 8. 25 ಭೂ ಕುಸಿತ ಉಂಟಾಗಿ ಮನೆಯೊಂದು ಕುಸಿದು ಹೋಗಿದೆ. ಮನೆಯಲ್ಲಿ ಸಿಲುಕಿಕೊಂಡಿದ್ದ ನಾಲ್ವರನ್ನು ರಕ್ಷಿಸಲಾಗಿದೆ.
ಈಗ ಸ್ವಲ್ಪ ಹೊತ್ತಿನ ಮುಂಚೆ ಘಟನೆ ನಡೆದಿದೆ. ಇದ್ದಕ್ಕಿದ್ದಂತೆ ಭೂ ಕುಸಿತ ಉಂಟಾಗಿ ಮನೆ ಮತ್ತು ಎದುರುಗಡೆ ಇದ್ದ ಇಸ್ತ್ರಿ ಅಂಗಡಿ ಕುಸಿದು ಹೋಗಿದೆ. ಮನೆಯೊಳಗೆ ನಾಲ್ವರು ಸಿಕ್ಕಿಕೊಂಡಿದ್ದರು.
ತಕ್ಷಣ ತುರ್ತು ರಕ್ಷಣಾ ತಂಡ, ಅಗ್ನಿಶಾಮಕ ದಳ, ಹೆಸ್ಕಾಂ ಸಿಬ್ಬಂದಿ, ಪೊಲೀಸರು ಆಗಮಿಸಿ ಸಿಲುಕಿಕೊಂಡವರನ್ನು ರಕ್ಷಿಸಿದ್ದಾರೆ. ಆದರೆ ಅಪಾರ ಆಸ್ತಿಪಾಸ್ತಿ ಮಣ್ಣೊಳಗೆ ಹುದುಗಿಹೋಗಿದೆ. ಕಾರ್ಯಾಚರಣೆ ಇನ್ನೂ ಮುಂದುವರಿದಿದೆ.
YuvaBharataha Latest Kannada News