ಸವದತ್ತಿ ತಹಶಿಲ್ದಾರ ವಿರುದ್ಧ ಕಾನೂನು ಕ್ರಮ ಆಗ್ರಹ- ಶ್ರೀ ರಾಮ ಸೇನೆ..!!
ಯುವ ಭಾರತ ಸುದ್ದಿ ಬೈಲಹೊಂಗಲ: ಸವದತ್ತಿ ತಹಶಿಲ್ದಾರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಶ್ರೀ ರಾಮ ಸೇನೆ ಕಾರ್ನಾಟಕ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.
ಶುಕ್ರವಾರವಾರದಂದು ಸವದತ್ತಿ ತಹಶಿಲ್ದಾರ ಅಧಿಕಾರ ದುರುಪಯೋಗ ಮಾಡಿಕೊಂಡು ಸೇಕ್ಷನ್ 107 ನೋಟಿಸನಲ್ಲಿ ಮಾನಹಾನಿ, ಅಸಂವಿಧಾನಿಕ ಪದ ಬಳಸಿದ್ದು ತಕ್ಷಣ ಕ್ಷಮೆ ಕೇಳುವಂತೆ ಆಗ್ರಹಿಸಿದರು.
ದಿ. 3 ರಂದು ಶ್ರೀ ರಾಮ ಸೇನೆಯ ಯರಗಟ್ಟಿ ತಾಲೂಕು ಅಧ್ಯಕ್ಷ ಸುರೇಶ ಭಜಂತ್ರಿ ಹಾಗೂ ಇತರೆ ಕಾರ್ಯಕರ್ತರಿಗೆ ನೋಟಿಸ್ ನೀಡಿದ್ದು ಅದರಲ್ಲಿ ಸಂಘಟನೆಯ ಕಾರ್ಯಕರ್ತರ ತೆಜೋವಧೆ ಮಾಡುವ, ಮಾನಹಾನಿ ಮಾಡುವ, ಅಸಂವಿಧಾನಿಕ ಪದಗಳನ್ನು ಪ್ರಯೋಗಿಸಿದ್ದು ಅತ್ಯಂತ ಖಂಡನಾರ್ಹ. ಅಧಿಕಾರದ ಮದದಿಂದ ನಮ್ಮ ಸಂಘಟನೆ, ಕಾರ್ಯಕರ್ತರಿಗೆ ತೆಜೋವಧೆ ಮಾಡಲು, ಅಸಂಭಂಧ ಅಪವಾದ, ಆರೋಪ ಮಾಡಲು ಮುಂದಾಗಿರುವದು ಖೇದಕರ ಸಂಗತಿ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಶ್ರೀ ರಾಮ ಸೇನೆಯ ರಾಜ್ಯ ಪ್ರಧಾನ ಕಾರ್ಯಾಧ್ಯಕ್ಷ ಗಂಗಾಧರಜೀ ಕುಲಕರ್ಣಿ, ಜಿಲ್ಲಾ ಕಾರ್ಯಾಧ್ಯಕ್ಷ ವಿನಯ ಅಂಗ್ರೋಳ್ಳಿ, ಗೋಕಾ ತಾಲೂಕಾಧ್ಯಕ್ಷ ರವಿ ಪೂಜಾರಿ, ಯರಗಟ್ಟಿ ತಾಲೂಕಾಧ್ಯಕ್ಷ ಸುರೇಶ ಭಜಂತ್ರಿ, ಜಗದೀಶ್ ಹೊಸಮನಿ, ಮನೋಹರ ಪಾಟೀಲ, ಗಂಗಪ್ಪ ಬಾರ್ಕಿ, ಸಚೀನ ಯಂಗಿ, ಸುನೀಲ ಬೂದಿಗೊಪ್ಪ, ಬಸವರಾಜ ಕಮತಗಿ ಸೇರಿದಂತೆ ಕಾರ್ಯಕರ್ತರು ಇದ್ದರು.