Breaking News

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಬೆಳಗಾವಿಗೆ ಭೇಟಿ..!!

Spread the love

 

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಬೆಳಗಾವಿಗೆ ಭೇಟಿ..!!

 

 

 

 

 

 

 

ಯುವ. ಭಾರತ ಸುದ್ದಿ  ಬೆಳಗಾವಿ: ಮಂಗಳವಾರ ದಿ. 25 ರಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಬೆಳಗಾವಿಗೆ ಭೇಟಿ ನೀಡಲಿದ್ದಾರೆಂದು ಬೆಂಗಳೂರಿನ ವಿಧಾನಸಭೆಯ ಮೂಲಗಳು ತಿಳಿಸಿವೆ.

ಮಂಗಳವಾರ ಬೆಳಗಾವಿ ನಗರಕ್ಕೆ ಭೇಟಿ ನೀಡಲಿರುವ ಸಿಎಂ ಯಡಿಯೂರಪ್ಪನವರು,ಬೆಳಗಾವಿಯ ಸುವರ್ಣ ವಿಧಾನಸೌಧದ ಸೆಂಟ್ರೆಲ್ ಹಾಲ್ ನಲ್ಲಿ ಬೆಳಗಾವಿ,ಹಾಗೂ ಧಾರವಾಡ ಜಿಲ್ಲೆಗಳ,ಪ್ರವಾಹ ಪರಿಹಾರ,ಮತ್ತು ಕೋವಿಡ್ ನಿಯಂತ್ರಣದ ಕುರಿತು ಪ್ರಗತಿ ಪರಶೀಲನೆ ನಡೆಸಲಿದ್ದಾರೆಂದು ತಿಳಿದು ಬಂದಿದೆ.

ಧಾರವಾಡ- ಮತ್ತು ಬೆಳಗಾವಿ ಎರಡೂ ಜಿಲ್ಲೆಗಳ ಪ್ರಗತಿ ಪರಶೀಲನಾ ಸಭೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲೇ ನಡೆಯಲಿದೆ ಎಂದು ನಂಬಲರ್ಹ ಮೂಲಗಳು ತಿಳಿಸಿದ್ದು,ಈ ಕುರಿತು ಸರ್ಕಾರದಿಂದ ಅಧಿಕೃತ ಮಾಹಿತಿ ಬರುವದಷ್ಟೇ ಬಾಕಿ ಇದೆ

ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ಇದ್ದು ಬಹಳ ದಿನಗಳ ನಂತರ ಮುಖ್ಯಮಂತ್ರಿ ಯಡಿಯೂರಪ್ಪ ಬೆಳಗಾವಿಗೆ ಬರುತ್ತಿರುವದು ವಿಶೇಷವಾಗಿದೆ.

ಕೋವೀಡ್ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನವರು ಬೆಂಗಳೂರು ಬಿಟ್ಟು ಬೇರೆ ಜಿಲ್ಲೆಗಳಿಗೆ ಭೇಟಿ ನೀಡಿರಲಿಲ್ಲ ಸುದೀರ್ಘ ಅವಧಿಯ ಬಳಿಕ ಸಿಎಂ ರಾಜ್ಯದ ಎರಡನೇಯ ರಾಜಧಾನಿ,ಕುಂದಾನಗರಿ ಬೆಳಗಾವಿಗೆ ಭೇಟಿ ನೀಡಿ ಎರಡು ಜಿಲ್ಲೆಗಳ ಪ್ರಗತಿ ಪರಶೀಲನೆ ನಡೆಸುತ್ತಿರುವದು ಮಹತ್ವದ ಸಂಗತಿಯಾಗಿದೆ.


Spread the love

About Yuva Bharatha

Check Also

೭ನೇ ಬಾರಿಗೆ ಆಯ್ಕೆ ಮಾಡಿ ತಮ್ಮ ಸೇವೆ ಮಾಡಲು ಸಹಕರಿಸಿದ ಗೋಕಾಕ ಮತಕ್ಷೇತ್ರದ ಜನತೆಗೆ ನಾವು ಕೃತಜ್ಞರಾಗಿದ್ದೇವೆ-ಯುವ ಧುರೀಣ ಅಮರನಾಥ ಜಾರಕಿಹೊಳಿ.!

Spread the love೭ನೇ ಬಾರಿಗೆ ಆಯ್ಕೆ ಮಾಡಿ ತಮ್ಮ ಸೇವೆ ಮಾಡಲು ಸಹಕರಿಸಿದ ಗೋಕಾಕ ಮತಕ್ಷೇತ್ರದ ಜನತೆಗೆ ನಾವು ಕೃತಜ್ಞರಾಗಿದ್ದೇವೆ-ಯುವ …

Leave a Reply

Your email address will not be published. Required fields are marked *

4 + four =