ಕಳೆದ ವರ್ಷದ ನೆರೆ ಹಾನಿಯ ಪರಿಹಾರ ಶೀಘ್ರವೇ ವಿತರಿಸುವಂತೆ ರೈತ ಸಂಘ ಆಗ್ರಹ.!
ಯುವ ಭಾರತ ಸುದ್ದಿ ಗೋಕಾಕ್: ಕಳೆದ ವರ್ಷದ ನೆರೆ ಪ್ರವಾಹದ ಹಾನಿಯನ್ನು ನೆರೆ ಸಂತ್ರಸ್ತರಿಗೆ ಪರಿಹಾರವನ್ನು ಶೀಘ್ರವಾಗಿ ವಿತರಿಸಲುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಮನವಿ ಸಲ್ಲಿಸಿದರು.
ಪ್ರಸಕ್ತ ವರ್ಷ ನೆರೆ ಹಾವಳಿಗೆ ಒಳಗಾದ ಬೆಳೆ ಮತ್ತು ಮನೆಗಳ ಸರ್ವೆ ಶೀಘ್ರವಾಗಿ ಸರಿಯಾದ ರೀತಿಯಲ್ಲಿ ಮಾಡಿ, ಸಂತ್ರಸ್ತರಿಗೆ ಪರಿಹಾರ ಒದಗಿಸಬೇಕು. ತಾಲೂಕಿನಾಧ್ಯಂತ ಪಡಿತರ ಚೀಟಿಯ ಸಮಸ್ಯೆ ತೆಲೆದೊರಿದ್ದು, ತಕ್ಷಣ ಹೊಸ ಪಡಿತರ ಚೀಟಿಯನ್ನು ವಿತರಿಸಬೇಕು. ಎಲ್ಲ ಸೌಲಭ್ಯಗಳಿಗೆ ಆಧಾರ್ ಕಾರ್ಡ ಅವಶ್ಯವಿದ್ದು, ಪ್ರತಿ ಗ್ರಾಮ ಪಂಚಾಯತಿಗಳಲ್ಲಿ ಆಧಾರ್ ಒದಗಿಸಬೇಕು. ಹಾಗೂ ಕೈತನಾಳ ಮತ್ತು ತವಗ ಗ್ರಾಮಗಳಲ್ಲಿ ಸ್ಮಶಾನ ಭೂಮಿಯನ್ನು ಗುರುತಿಸಿ ಶವ ಸಂಸ್ಕಾರಕ್ಕೆ ಅನುವು ಮಾಡಿಕೊಂಡುವAತೆ ಮನವಿಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಮಂಜುನಾಥ ಪೂಜೇರಿ, ಗೋಪಾಲ ಕೂಕನೂರ, ಭರಮು ಖೆಮಲಾಪೂರೆ, ಯಲ್ಲಪ್ಪ ತಿಗಡಿ, ಸಿದ್ರಾಮ ಪೂಜೇರಿ, ಅಡಿವೆಪ್ಪ ಅಲ್ಲಪ್ಪನವರ, ರಾಮಣ್ಣ ಕಣಗಾರ, ಪ್ರಕಾಶ ಭೋವಿ, ಗಂಗೂಬಾಯಿ ಜನಕಟ್ಟಿ, ಸತ್ತೆವ್ವ ಪೂಜೇರಿ ಸೇರಿದಂತೆ ಅನೇಕರು ಇದ್ದರು.