ಮೂಡಲಗಿ: ಕುಲಗೋಡ ಸಂಕಲ್ಪ ಪೌಂಡೇಶನ್ ವಿದ್ಯಾರ್ಥಿಗಳು ಎಸ್.ಡಿ.ಎ, ಎಫ್.ಡಿ.ಎ, ಪಿ.ಎಸ್.ಐ, ಕೆ.ಎ.ಎಸ್, ಐಎಎಸ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುತ್ತಿರುವದರಿಂದ ಸ್ಪರ್ಧಾರ್ಥಿಗಳಿಗೆ ಅನುಕೂಲವಾಗಲೆಂದು ಉಚಿತವಾಗಿ ಸುಮಾರ ಹತ್ತು ಸಾವಿರ ಮೌಲ್ಯಗಳ ಸ್ಪರ್ಧಾತ್ಮಕ ಪರೀಕ್ಷ ಪುಸ್ತಕಗಳನ್ನು ಕುಲಗೋಡ ಠಾಣೆ ಪಿ.ಎಸ್.ಐ ಎಚ್.ಕೆ ನರಳೆ ಅವರು ವಿತರಿಸಿದರು.
ದುಷ್ಟರನು ಶಿಕ್ಷಿಸುವ ಶಿಷ್ಟರನು ಪರಿಪಾಲಿಸುವುದೊಂದೆ ಕರ್ತವ್ಯವಲ್ಲ. ಅದರ ಜೊತೆ ಮಾನವೀಯತೆ ಕಾಳಜಿ ತೋರಿಸುವುದು ನಿಜವಾದ ದೇವರ ಕೆಲಸವೆಂದು ಭಾವಿಸಿದ್ದ ನೇರಳೆ ಅವರು ಬಿದ್ದವರನು ಎಬ್ಬಿಸುವ, ಅಂಬೆಗಾಲಿನವರನು ನಡೆದಾಡಿಸುವ ಸ್ಪೂರ್ತಿದಾಯಕ ಶಕ್ತಿಯಾಗಿ, ಯುವಕರು ತಮ್ಮಂತೆ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಉತ್ತಮ ಸಾಧಕರಾಗಬೇಕೆಂದು ಸಂಕಲ್ಪಿಸಿ, ಕನ್ನಡ ಇಂಗ್ಲೀಷ ಭಾಷೆಯ ಅತ್ಯುತ್ತಮ ಕೃತಿಗಳನ್ನು ಸ್ಥಳೀಯ ಸಂಕಲ್ಪ ಪೌಂಡೇಶನ್‍ಗೆ ಉಚಿತವಾಗಿ ಪುಸ್ತಕ ನೀಡಿ ಪಿಎಸ್‍ಐ ಎಚ್.ಕೆ.ನೇರಳೆ ಅವರ ಪುಸ್ತಕ ಕೊಡುಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
ಸಂದರ್ಭದಲ್ಲಿ ಚೇತನ ಯಕ್ಸಂಬಿ. ಹಣಮಂತ ಮಡಿವಾಳರ. ಶಂಕರ ಹಾದಿಮನಿ. ಮಲ್ಲೇಶ ಮುರಕಟ್ನಾಳ. ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.