ಅರ್ಹ ಫಲಾನುಭವಿಗಳಿಗೆ ಲಾಪ್ ಟಾಪ್ ವಿತರಿಸಿದ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ.!
Yuva Bharatha
September 3, 2020
Uncategorized
1,264 Views
ಅರ್ಹ ಫಲಾನುಭವಿಗಳಿಗೆ ಲಾಪ್ ಟಾಪ್ ವಿತರಿಸಿದ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ.!
ಯುವ ಭಾರತ ಸುದ್ದಿ, ಗೋಕಾಕ್: ಇಲ್ಲಿಯ ನಗರಸಭೆ ಎಸ್ ಎಫ್ ಸಿ 7.25% ಮತ್ತು 24.10% ಅನುದಾನದಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಇತರೆ ಬಡ ಜನಾಂಗದ ಎಮ್ ಬಿ ಬಿ ಎಸ್ ಹಾಗೂ ಬಿಇ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಲಾಪ್ ಟಾಪ್ ಗಳನ್ನು ಹಾಗೂ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ವಿತರಿಸಿದರು. ನಗರದ ಸಚಿವ ರಮೇಶ ಜಾರಕಿಹೊಳಿ ಅವರ ಗೃಹ ಕಚೇರಿಯ ಆವರಣದಲ್ಲಿ ಗುರುವಾರದಂದು ನಡೆದ ಸರಳ ಸಮಾರಂಭದಲ್ಲಿ ಅರ್ಹ ಫಲಾನು ಭವಿಗಳಿಗೆ ವಿತರಿಸಲಾಯಿತು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯರುಗಳಾದ ಅಬ್ಬಾಸ ದೇಸಾಯಿ, ದುರ್ಗಪ್ಪ ಶಾಸ್ತ್ರಿಗೊಲ್ಲರ, ಡಾ. ಜಮಾದಾರ, ಬಸವರಾಜ ಆರೇನ್ನವರ ಬಿಜೆಪಿ ನಗರಾಧ್ಯಕ್ಷ ಭೀಮಶಿ ಭರಮನ್ನವರ ಸೇರಿದಂತೆ ಇತರರು ಇದ್ದರು.