ಗೋಕಾಕ: ಪಂಚಾಯತ್ ರಾಜ್ಯ ಇಲಾಖೆಯ ಗ್ರಾಮ ಪಂಚಾಯತಿ ಕಾರ್ಯದರ್ಶಿಯಾಗಿ, ಪಿಡಿಒ ಆಗಿ ಗೋಕಾಕ ತಾಲೂಕಿನ ಉದಗಟ್ಟಿ ಗ್ರಾಮ ಪಂಚಾಯತಿಯಲ್ಲಿ ಸತತ ೨೦ ವರ್ಷ ಸೇರಿ ಒಟ್ಟು ೩೬ ವರ್ಷಗಳÀ ಕಾಲ ಸಾರ್ಥಕ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಬಸಯ್ಯ ಸಿದ್ದಯ್ಯ ವಡೇರ ಅವರ ಸೇವಾ ನಿರತ ದಿನಗಳು ಶ್ಲಾಘಿನೀಯವಾಗಿವೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಎಸ್‌ವೈಸಿ ಸಂಸ್ಥೆಯ ಪಿಯುಸಿ ಕಾಲೇಜ್‌ನ ಆಂಗ್ಲ ಭಾಷೆ ಉಪನ್ಯಾಸಕ ಬಸವರಾಜ ಕುರಬೇಟ ಹೇಳಿದರು.
ತಾಲೂಕಿನ ಬೆಟಗೇರಿ ಗ್ರಾಮದ ಪಿಡಿಒ ಬಸಯ್ಯ ವಡೇರ ಅವರು ಸೇವೆಯಿಂದ ನಿವೃತ್ತಿ ಹೊಂದಿದ ಪ್ರಯುಕ್ತ ಸ್ಥಳೀಯ ಬಸಯ್ಯ ವಡೇರ ಅವರ ನಿವಾಸದಲ್ಲಿ ಮಂಗಳವಾರ ಡಿ.೧ರಂದು ಹಮ್ಮಿಕೊಂಡ ಸೇವಾ ನಿವೃತ್ತಿ ಅಭಿನಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಕರ್ತವ್ಯ ನಿರತ ಸೇವೆಯಲ್ಲಿದ್ದ ವೇಳೆ ಬಸಯ್ಯ ವಡೇರ ಅವರು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ವಲಯದಲ್ಲಿ ಶ್ರಮಿಸಿದ ಕಾರ್ಯ ಅವಿಸ್ಮರಣೀಯವಾಗಿದೆ ಎಂದರು.
ಇಲ್ಲಿಯ ವಿವಿಧ ಸಂಘ, ಸಂಸ್ಥೆಗಳ ಪರವಾಗಿ ಬಸಯ್ಯ ವಡೇರ ದಂಪತಿಗೆ ೨೦ ಗ್ರಾಂ ಚಿನ್ನದ ಆಭರಣ, ನೆನಪಿನ ಕಾಣಿಕೆ ನೀಡಿ, ಶಾಲು ಹೊದಿಸಿ ಸನ್ಮಾನಿಸಿದರು. ಬಸಯ್ಯ ವಡೇರ ಸನ್ಮಾನ ಸ್ವೀಕರಿಸಿ ತಮ್ಮ ೩೬ ವರ್ಷಗಳ ಸೇವಾನುಭವದ ಕುರಿತು ಮಾತನಾಡಿದರು.
ಗ್ರಾಪಂ ಮಾಜಿ ಅಧ್ಯಕ್ಷ ಲಕ್ಷö್ಮಣ ಚಂದರಗಿ, ವಿ.ಬಿ.ಮಠಪತಿ, ಸತ್ತೆಪ್ಪ ಮಾಳೇದ, ವಿ.ಎನ್.ಪಟ್ಟಿಹಾಳ, ಎನ್.ಕೆ.ಪೂಜೇರಿ, ಮಹಾದೇವ ಹೊರಟ್ಟಿ, ಮಾರುತಿ ಚಂದರಗಿ, ವಿಠಲ ಕೋಣಿ, ವಿಠಲ ನೇಮಗೌಡ್ರ, ಪ್ರಕಾಶ ಗುಡದಾರ, ಬನಪ್ಪ ಚಂದರಗಿ, ಲಕ್ಕಣ್ಣ ಚಂದರಗಿ, ಚಂದ್ರಶೇಖರ ಹೂಗಾರ, ಜಿ.ಎಚ್.ಚಿಗದಿನ್ನಿ ಸೇರಿದಂತೆ ಸ್ಥಳೀಯ ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು ಇದ್ದರು.
Check Also
ಮಧ್ಯಪ್ರದೇಶನಲ್ಲಿ ಮೃತಪಟ್ಟಿದ್ದವರ ಗೋಕಾಕದಲ್ಲಿ ಅಂತ್ಯಸ0ಸ್ಕಾರ!
Spread the loveಮಧ್ಯಪ್ರದೇಶನಲ್ಲಿ ಮೃತಪಟ್ಟಿದ್ದವರ ಗೋಕಾಕದಲ್ಲಿ ಅಂತ್ಯಸ0ಸ್ಕಾರ! ಯುವ ಭಾರತ ಸುದ್ದಿ ಗೋಕಾಕ: ಪ್ರಯಾಗರಾಜನ ಕುಂಭಮೇಳದಲ್ಲಿ ಭಾಗವಹಿಸಿ ಮರಳಿ ಬರುತ್ತಿರುವಾಗ …