ಗೋಕಾಕ: ತಾಲೂಕಿನ ಬೆಟಗೇರಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸನ್೨೦೧೯-೨೦ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಮಹಾಸಭೆ ಬುಧವಾರ ಡಿ.೨ ರಂದು ಸಂಘದ ಕಾರ್ಯಾಲಯದಲ್ಲಿ ನಡೆಯಿತು.
ಸಂಘದ ಮುಖ್ಯಕಾರ್ಯನಿರ್ವಾಹಕ ಅಡಿವೆಪ್ಪ ಮುರಗೋಡ ವಾರ್ಷಿಕ ವರದಿ ಮಂಡಿಸಿ ಮಾತನಾಡಿದ ಅವರು, ಸಂಘವು ಸನ್೨೦೧೯-೨೦ನೇ ಸಾಲಿನಲ್ಲಿ ಸಂಘವು ೧೧.೬೯.೯೦೩೭೩ರೂ ಒಟ್ಟು ದುಡಿಯುವ ಬಂಡವಾಳ ಹೊಂದಿ, ಈಗ ೨೧,೭೬೩೯೭ರೂ ನಿವ್ವಳ ಲಾಭ ಗಳಿಸಿದೆ. ಸಂಘದ ಶೇರು ಸದಸ್ಯರಿಗೆ ಶೇ೧೦ ರಷ್ಟು ಡಿವ್ಹಿಡೆಂಡ್ ವಿತರಿಸಲಾಗುವದು ಎಂದು ತಿಳಿಸಿದರು.
ಸಂಘದ ಶೇರ ಸದಸ್ಯರು, ಗ್ರಾಹಕರು, ನಾಗರಿಕರ ಜೊತೆ ಆಡಳಿತ ಮಂಡಳಿ ಸದಸ್ಯರು ಸಂಘದ ಸಮಗ್ರ ಪ್ರಗತಿ, ಸಂಘದಿAದ ದೊರಕುವ ವಿವಿಧ ಸಾಲ, ಸೌಲಭ್ಯಗಳ ಕುರಿತು ಚರ್ಚಿಸಿದರು. ಸಂಘದ ಅಧ್ಯಕ್ಷ ಚಂದ್ರಶೇಖರ ನೀಲಣ್ಣವರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದರು.
ಈ ವೇಳೆ ಸಂಘದ ಆಡಳಿತ ಮಂಡಳಿ ಸದಸ್ಯರು, ಶೇರ ಸದಸ್ಯರು, ಗ್ರಾಹಕರು, ಸಂಘದ ಸಿಬ್ಬಂದಿ ವರ್ಗ, ಇತರರು ಇದ್ದರು. ಎ.ಎಮ್.ಮುರಗೋಡ ಸ್ವಾಗತಿಸಿದರು. ಮುತ್ತೆಪ್ಪ ದೇಯಣ್ಣವರ ನಿರೂಪಿಸಿದರು, ಮಹಾದೇವ ಕೋಣಿ ವಂದಿಸಿದರು.
