ಸಿಪಿಐ ಶ್ರೀಶೈಲ ಬ್ಯಾಕೂಡ
ಡಿವೈಎಸ್‌ಪಿ ಪ್ರಭು ಡಿ ಟಿ
ಯುವ ಭಾರತ ಸುದ್ದಿ, ಗೋಕಾಕ್: ಪ್ರವಾಹ ಹಾಗೂ ಕರೋನಾ ಸಂಕಷ್ಟದ ಸಮಯದಲ್ಲಿ ಜನರಿಗೆ ಉತ್ತಮವಾದ ಸೇವೆಯನ್ನು ನೀಡಿದ ದಕ್ಷ ಅಧಿಕಾರಿ ಡಿವೈಎಸ್‌ಪಿ ಪ್ರಭು ಡಿ ಟಿ ಹಾಗೂ ಸಿಪಿಐ ಶ್ರೀಶೈಲ ಬ್ಯಾಕೂಡ ಅವರು ಮುಖ್ಯಮಂತ್ರಿಗಳ ಚಿನ್ನದ ಪದಕ ಭಾಜನರಾಗಿದ್ದಾರೆ.
ಹಿಂದೆAದೂ ಕಂಡರಿಯದ ಜಲ ಪ್ರವಾಹದಲ್ಲಿ ಜನರ ಸುರಕ್ಷತೆಗಾಗಿ ಹಗಲಿರುಳು ಶ್ರಮಿಸಿ, ಕರೋನಾ ಸಂಕಷ್ಟದ ಸಮಯದಲ್ಲಿ ತಮ್ಮ ಕರ್ತವ್ಯದ ಜೊತೆ ಜೊತೆಗೆ ನಿರ್ಗತಿಕರಿಗೆ ಸ್ಥಳೀಯ ಯುವಕರ ಸಹಾಯದೊಂದಿಗೆ ಆಹಾರ ಸಾಮಗ್ರಿಗಳನ್ನು ನೀಡಿ, ಜನರಿಗೆ ಕರೋನಾ ಬಗ್ಗೆ ಜಾಗೃತಿ ಮೂಢಿಸಿ ಮನೆಯಿಂದ ಹೊರ ಬರದಂತೆ ಎಲ್ಲೆಡೆ ಸಂಚರಿಸಿ ಜಾಗೃತಿ ಮೂಢಿಸಿದ್ದ ದಕ್ಷ ಅಧಿಕಾರಿ ಡಿವೈಎಸ್‌ಪಿ ಪ್ರಭು ಡಿ ಟಿ ಪ್ರಭು ಅವರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ಒಲಿದು ಬಂದಿದೆ. ಸದ್ಯ ಡಿವೈಎಸ್‌ಪಿ ಪ್ರಭು ಡಿ ಟಿ ಪ್ರಭು ಚಿಕ್ಕಮಗಲೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಈ ಹಿಂದೆ ಗೋಕಾಕ ಶಹರ ಪೋಲಿಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ದಕ್ಷ ಅಧಿಕಾರಿ ಶ್ರೀಶೈಲ ಬ್ಯಾಕೂಡ ಅವರು ಮಹಾಲಿಂಗಪೂರ-ಮುಧೋಳನಲ್ಲಿ ಜಲ ಪ್ರವಾಹದ ಎದುರಾದ ಸಂದರ್ಭದಲ್ಲಿ ಜನರ ಸುರಕ್ಷತೆಗಾಗಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಹಗಲಿರುಳು ಶ್ರಮಿಸಿ, ಮುಖ್ಯಮಂತ್ರಿಗಳ ಚಿನ್ನದ ಪದಕ ಒಲಿದು ಬಂದಿದೆ. ಈ ದಕ್ಷ ಅಧಿಕಾರಿಗಳಿಗೆ ಗೌರವ ಒದಗಿ ಬಂದಿರುವದಕ್ಕೆ ಗೋಕಾವಿ ಜನತೆ ಅಭಿನಂದಿಸಿದ್ದಾರೆ.