Breaking News

ಶ್ರೀರಾಮನ ಭವ್ಯ ಮಂದಿರದ ನಿರ್ಮಾಣದೊಂದಿಗೆ ಭಾರತೀಯರ ಕನsಸು ನನಸಾಗುತ್ತಿದೆ. ಮುರುಘರಾಜೇಂದ್ರ ಶ್ರೀ.!

Spread the love


ಗೋಕಾಕ: ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಮಂದಿರದ ನಿರ್ಮಾಣದೊಂದಿಗೆ ಶತ ಶತಮಾನಗಳ ಭಾರತೀಯರ ಕನಸು ನನಸಾಗುತ್ತಿರುವುದರ ಜೊತೆಯಲ್ಲೆ, ‘ರಾಮ ರಾಜ್ಯದ’ ಪರಿಕಲ್ಪನೆ ಸಾಕಾರಗೊಳ್ಳಬೇಕೆಂದು ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ ಹೇಳಿದರು.
ಅವರು, ನಗರದ ಪತ್ತಾರ ಕಾಂಪ್ಲೇಕ್ಸನಲ್ಲಿ ಶ್ರೀ ರಾಮ ಜನ್ಮಭೂಮಿ ಟ್ರಸ್ಟನ ‘ಅಯೋಧ್ಯೆ ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ’ ಕಛೇರಿಗೆ ಚಾಲನೆ ನೀಡಿ, ಆಶೀರ್ವಚನ ನೀಡಿ ಮಾತನಾಡಿದರು. ಅಯೋಧ್ಯೆಯಲ್ಲಿನ ಶ್ರೀರಾಮಮಂದಿರದ ನಿರ್ಮಾಣದೊಂದಿಗೆ ಪ್ರತಿಯೊಬ್ಬರು ಶ್ರೀರಾಮನ ಆದರ್ಶಗಳ ಪಾಲನೆಯ ಮೂಲಕ ಸ್ವಯಂ ‘ರಾಮ’ನೇ ಆಗಬೇಕು. ಆ ಮೂಲಕ ದುರ್ಗುಣಗಳಿಂದ ದೂರವಾಗಿ ಸದ್ಗುಣಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ರಾಮ ರಾಜ್ಯದ ಪರಿಕಲ್ಪನೆ ಸಾಕಾರಗೊಳ್ಳುತ್ತದೆಂದು ನುಡಿದರು.
ಆರ್‌ಎಸ್‌ಎಸ್ ಪ್ರಮುಖ ಎಮ್ ಡಿ ಚುನಮರಿ ಮಾತನಾಡಿ, ಶ್ರೀರಾಮನ ಮಂದಿರವನ್ನು ಹಣ ಉಳ್ಳವರು ಏಕಾಂಗಿಯಾಗಿ ಕಟ್ಟಿ ಬಿಡಬಹುದು. ಆದರೆ, ಅದು ಶ್ರೀರಾಮ ಮಂದಿರವಾಗಿರಲಾರದು. ಈ ಹಿನ್ನೆಲೆಯಲ್ಲಿ ಶ್ರೀ ರಾಮ ಮಂದಿರ ನಮ್ಮ ನಿಮ್ಮೆಲ್ಲರ ಮಂದಿರವಾಗಿ ರಾರಾಜಿಸಬೇಕಾಗಿರುವುದರಿಂದ ಮಂದಿರ ನಿರ್ಮಾಣದಲ್ಲಿ ನಾವೆಲ್ಲರು ಕೈಜೋಡಿಸಬೇಕಾಗಿದೆ. ಈ ಹಂತದಲ್ಲಿ ಕನಿಷ್ಠ ಪಕ್ಷ ೧೦ ರೂ.ಗಳಿಂದ ನೆರವನ್ನು ಸಮಾನವಾಗಿ ಪ್ರೀತಿ ಪೂರ್ವಕವಾಗಿ ಸ್ವೀಕರಿಸಲಾಗುತ್ತದೆಂದು ತಿಳಿಸಿದರು.
ಈಗಾಗಲೇ ಆರ್‌ಎಸ್‌ಎಸ್ ಸ್ವಯಂ ಸೇವಕರು ಹಾಗೂ ನಗರಸಭೆಯ ಸದಸ್ಯರೊಂದಿಗೆ ಚರ್ಚೆ ನಡೆಸಲಾಗುತ್ತಿದೆ. ಎರಡು ದಿನಗಳಲ್ಲಿ ಪಟ್ಟಣದಲ್ಲಿ ಶ್ರೀರಾಮ ಮಂದಿರಕ್ಕೆ ನಿಧಿ ಸಂಗ್ರಹಿಸಲು ಅವಧಿಯನ್ನು ನಿಗಧಿಗೊಳಿಸಿದ್ದು, ಸಂಗ್ರಹಗೊAಡ ನಿಧಿಯನ್ನು ನೇರವಾಗಿಶ್ರೀ ರಾಮ ಜನ್ಮಭೂಮಿ ಟ್ರಸ್ಟನ ಬ್ಯಾಂಕ್ ಖಾತೆಯ ಮೂಲಕ ತಲುಪಿಸುವ ವ್ಯವಸ್ಥೆ ಕೈಗೊಂಡಿರುವದಾಗಿ ತಿಳಿಸಿದರು.
ವೇದಿಕೆಯ ಮೇಲೆ ಬಟಕೂರ್ಕಿಯ ಶ್ರೀ ಬಸವಲಿಂಗ ಸ್ವಾಮಿಜಿ, ಪತಂಜಲಿ ಯೋಗ ಪೀಠದ ಶ್ರೀ ಬ್ರಹ್ಮಾನಂದ ಸ್ವಾಮಿಜಿ, ವಿಶ್ವ ಹಿಂದು ಪರಿಷದ್ ಬೆಳಗಾವಿ ವಿಭಾಗ ಕಾರ್ಯದರ್ಶಿ ನಾರಾಯಣ ಮಠಾಧಿಕಾರಿ, ಆರ್ ವೈ ಹಾರುಗೇರಿ ಇದ್ದರು.
ವಿಜಯ ಖಾರೆಪಟನ ಸ್ವಾಗತಿಸಿದರು, ನಾರಾಯಣ ಭಟ್ ವಂದಿಸಿದರು.


Spread the love

About Yuva Bharatha

Check Also

1೦೦ಕೋಟಿ ರೂಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ರಮೇಶ ಜಾರಕಿಹೊಳಿ.!

Spread the love1೦೦ಕೋಟಿ ರೂಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ರಮೇಶ ಜಾರಕಿಹೊಳಿ.! ಗೋಕಾಕ: ನಮ್ಮ ಅಧಿಕಾರವಧಿಯಲ್ಲಿ …

Leave a Reply

Your email address will not be published. Required fields are marked *

ten − two =