ಜೂ, ಅಂತ್ಯದ ವರೆಗೆ ಸರಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ- ರಮೇಶ ಜಾರಕಿಹೊಳಿ!!
ಯುವ ಭಾರತ ಸುದ್ದಿ, ಗೋಕಾಕ: ರಾಜ್ಯದಲ್ಲಿ ಜಾರಿಯಲ್ಲಿರುವ ಸೆಮಿ ಲಾಕಡೌನ ತೆರವುವಾದರೂ ಸಹ ಜೂ, ಅಂತ್ಯದ ವರೆಗೆ ಸರಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಕ್ರಮ ಕೈಗೋಳಿ ಎಂದು ಮಾಜಿ ಸಚಿವ ಶಾಸಕ ರಮೇಶ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚಿಸಿದರು.
ಶನಿವಾರದಂದು ನಗರ ತಮ್ಮ ಕಛೇರಿಯಲ್ಲಿ ಕರೆದಿದ್ದ ತಾಲೂಕಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಕೊರೋನಾ ಸೋಂಕಿನ ಪ್ರಮಾಣ ಇಳಿಮುಖವಾಗಿದ್ದರೂ ಸಹ ಲಾಕಡೌನ ತೆರವುಗೊಂಡ ನಂತರ ಸರ‍್ವಜನಿಕ ಸ್ಥಳಗಳಲ್ಲಿ ಜನರು ಮಾಸ್ಕ ಹಾಕದೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ತಿರುಗಾಡುವದು ಜಾಸ್ತಿಯಾಗುತ್ತದೆ ಅಂತಹ ಸ್ಥಳಗಳಲ್ಲಿ ಪೊಲೀಸ ಹಾಗೂ ನಗರಸಭೆ ಅಧಿಕಾರಿಗಳು ಜಂಟಿಯಾಗಿ ಕರ‍್ಯಪ್ರವೃತ್ತರಾಗಿ ಇದನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ಹಾಗೂ ನಗರ ಮಟ್ಟದಲ್ಲಿ ಜರಗುವ ಸಭೆ ಸಮಾರಂಭ, ಮದುವೆ, ಜಾತ್ರೆ, ಅಂತ್ಯಸಂಸ್ಕಾರದಲ್ಲಿ ಜನರು ಸಾಮಾಜಿಕ ಅಂತರ ಹಾಗೂ ಮಾಸ್ಕ ಧರಿಸದೆ ಭಾಗವಹಿಸುತ್ತಾರೆ ಅಂತಹ ಸಂರ‍್ಭದಲ್ಲಿ ಅಧಿಕಾರಿಗಳು ಮುತುರ‍್ಜಿಯಿಂದ ಕರ‍್ಯ ನರ‍್ವಹಿಸಿ ಕಾನೂನು ಉಲ್ಲಂಘನೆ ಮಾಡಿದವರ ಮೇಲೆ ಪೊಲೀಸ ಇಲಾಖೆ ಸಹಯೋಗದಲ್ಲಿ ಕಠಿಣ ಕ್ರಮ ಜರುಗಿಸಬೇಕು ಎಂದು ಸೂಚಿಸಿದರು.
ಲಾಕಡೌನ ತೆರವುವಾದ ತಕ್ಷಣ ಎಲ್ಲರೂ ಗುಂಪು ಗುಂಪಾಗಿ ಸೇರಿ ಮತ್ತೆ ಕೊರೋನಾ ಹರಡುವ ಸಂಭವ ವಿರುವುದರಿಂದ ಹಂತ, ಹಂತವಾಗಿ ಲಾಕಡೌನ ಸಡಲಿಕೆ ಬಗ್ಗೆ ಅಧಿಕಾರಿಗಳು ಸ್ಥಳೀಯ ಮಟ್ಟದಲ್ಲಿ ಸಭೆ ನಡೆಯಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಈಗಾಗಲೇ ಮೊದಲ ಹಂತದಲ್ಲಿ ೫೬ ಸಾವಿರ ಜನರು ಮೊದಲ ಲಸಿಕೆಯನ್ನು ಹಾಕಿಸಿಕೊಂಡಿದ್ದು, ಎರಡನೇ ಹಂತದಲ್ಲಿ ಕೇವಲ ೧೫ಜನರು ಎರಡನೇ ಲಸಿಕೆಯನ್ನು ಹಾಕಿಸಕೊಂಡಿದ್ದಾರೆ. ಇನ್ನೂಳಿದ ಜನರು ಯಾವುದೇ ಭಯಪಡದೆ ಬೇಗ ಎರಡನೇ ಲಸಿಕೆಯನ್ನು ಹಾಕಿಸಿಕೊಳ್ಳಬೇಕೆಂದು ಶಾಸಕರು ಇದೇ ಸಂರ‍್ಭದಲ್ಲಿ ಮನವಿ ಮಾಡಿಕೊಂಡರು.
ಲಾಕಡೌನ ತೆರವುವಾದ ಕೂಡಲೇ ಪೊಲೀಸ, ಆರೋಗ್ಯ ಇಲಾಖೆ ಸೇರಿದಂತೆ ಇನ್ನೂಳಿದ ಇಲಾಖೆಯ ಅಧಿಕಾರಿಗಳು ಕೊರೋನಾ ಸೋಂಕು ಹರಡದಂತೆ ಎನೆಲ್ಲಾ ಕ್ರಮಗಳನ್ನು ತಗೆದುಕೊಳ್ಳಲು ಸಾಧ್ಯವಿದೆಯೋ ಅದನ್ನೇಲ್ಲಾ ಕೈಗೊಳ್ಳಬೇಕು ಎಂದು ಶಾಸಕರು ಕೊರೋನಾ ಕರ‍್ಯಗಳನ್ನು ಹೊರತು ಪಡೆಸಿ ಇಲಾಖಾ ಮಟ್ಟದಲ್ಲಿ ಕೈಗೊಳ್ಳುವ ಅಭಿವೃದ್ಧಿ ಕರ‍್ಯಗಳ ಬಗ್ಗೆಯೂ ಸಹ ಗಮನ ಹರಿಸಿ ಅವುಗಳನ್ನು ಸಹ ಅಚ್ಚುಕಟ್ಟಾಗಿ ಮಾಡಬೇಕು ಎಲ್ಲಾ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ, ಪ್ರೋಬೆಷನರಿ ಎ ಸಿ ಅಭಿಷೇಕ್ ವ್ಹಿ, ಪೌರಾಯುಕ್ತ ಶಿವಾನಂದ ಹಿರೇಮಠ, ಸಿಪಿಐ ಗೋಪಾಲ ರಾಠೋಡ, ತಾಲೂಕಾ ವೈದ್ಯಾಧಿಕಾರಿ ಡಾ.ಎಂ.ಎಸ್. ಕೊಪ್ಪದ, ಮುಖ್ಯ ವೈದ್ಯಾಧಿಕಾರಿ ಡಾ.ರವೀಂದ್ರ ಅಂಟಿನ, ಪಿಎಸ್‌ಐಗಳಾದ ಕೆ.ವಾಲಿಕರ, ನಾಗರಾಜ ಖಿಲಾರೆ, ಪಿಡಿಒ ಪಿ.ವ್ಹಿ ಪಾಟೀಲ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.