ಗೋಕಾಕ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಸಂಘ ಪರಿವಾರದವರ ವತಿಯಿಂದ 150 ಕಡು ಬಡವರ ಕುಟುಂಬಗಳಿಗೆ ರೆಷನ ಕಿಟ್ ವಿತರಣೆ.!!
ಯುವ ಭಾರತ ಸುದ್ದಿ, ಗೋಕಾಕ: ಕೋವಿಡ್ ನಿರ್ವಹಣೆಯ ಲಾಕ್‍ಡೌನ್ ಸಂದರ್ಭದಲ್ಲಿ ದುಡಿಯುವ ವರ್ಗಗಳವರು ಒಂದೊತ್ತು ಅನ್ನಕ್ಕೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಬಡವರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಸಂಘ ಪರಿವಾರದವರು ಮಾಡಿದ್ದಾರೆ.
ಹೌದು ಸಂಕಷ್ಟದಲ್ಲಿ ಸಮಯದಲ್ಲಿ ಸಹಾಯ ಮಾಡಲು ಸ್ವಯಂ ಸೇವಕರು ಸದಾ ಸಿದ್ದರಾಗಿರುತ್ತಾರೆ. ಅದೇ ರೀತಿ ಕೋವಿಡ ಎರಡನೆ ಇಂದು ಲಾಕ್ ಡೌನ ಆದ ಪರಿಣಾಮ ಬಡ ಜನರು ತುಂಬಾ ಕಷ್ಟ ಪಡುತ್ತಿದ್ದಾರೆ, ಇಂತಹ 150 ಕುಟುಂಬಗಳನ್ನು ಗುರುತಿಸಿ ರಾಷ್ಟ್ರೀಯ ಸ್ವಯಂ ಸೇವಕರು ರೇಷನ ಕಿಟ್ ಗಳನ್ನು ವಿತರಿಸಿದ್ದಾರೆ.
ಅದೇ ರೀತಿ ಕೋವಿಡ ದಿಂದ ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳ ದಿನ ನಿತ್ಯ ಊಟದ ವ್ಯವಸ್ಥೆ ಜೊತೆಗೆ ಕನ್ನೇರಿ ಮಠದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧಿಯನ್ನು ಕೂಡಾ ಉಚಿತವಾಗಿ ವಿತರಿಸಿ, ಇಂತಹ ಸಂಕಷ್ಟ ಸಮಯದಲ್ಲಿ ತಮ್ಮ ಜೀವವನ್ನು ಲೆಕ್ಕಿಸದೆ ಸಮಾಜದ ಸೇವೆಯಲ್ಲಿ ನಿರತರಾಗಿ ಮಾನವೀಯತೆ ಮೆರೆದಿದ್ದಾರೆ.