ಬೆಳಗಾವಿ ಗ್ರಾಮೀಣದಲ್ಲಿ ರಮೇಶ ಸಾಹುಕಾರ್ ಭರ್ಜರಿ ಪ್ರಚಾರ!!

ಯುವ ಭಾರತ ಸುದ್ದಿ ಬೆಳಗಾವಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅತಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುವುದರ ಜೊತೆಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ಎಲ್ಲರೂ ಪ್ರತಿಜ್ಞೆ ಮಾಡಬೇಕು ಎಂದು ಗೋಕಾಕ ಶಾಸಕರಾದ ರಮೇಶ ಜಾರಕಿಹೊಳಿ ಹೇಳಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಬೆಳಗುಂದಿ ರಸ್ತೆಯಲ್ಲಿರುವ ಕಲ್ಲೇಹೋಳ ಕ್ರಾಸನಲ್ಲಿಯ ಶ್ರೀ ದುರ್ಗಾಮಾತಾ ಮಂಗಲ ಕಾರ್ಯಾಲಯದಲ್ಲಿ ಬುಧವಾರ ನಡೆದ ಹಿಂಡಲಗಾ, ಉಚಗಾಂವ ಹಾಗೂ ಯಳ್ಳೂರು ಜಿಪಂ ಕ್ಷೇತ್ರಗಳ ಗ್ರಾಮ ಪಂಚಾಯತ್ ಸದಸ್ಯರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಪ್ರತಿಯೊಂದು ಹಳ್ಳಿಗಳಲ್ಲೂ ಜಾರಕಿಹೊಳಿ ಕುಟುಂಬದ ಅಭಿಮಾಣಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅದರಲ್ಲೂ ಪಶ್ಚಿಮ ಭಾಗ ಜಾರಕಿಹೊಳಿ ಕುಟುಂಬ ಇದ್ದಂತೆ. ಇಲ್ಲಿ ಮರಾಠಾ ಸಮುದಾಯದ ಜನರು ಅಭಿಮಾನ ಇಟ್ಟುಕೊಂಡಿದ್ದಾರೆ. ಈ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಪ್ರಚಾರ ನಡೆಸಲಾಗುತ್ತಿದೆ. ಬಿಜೆಪಿಯ ಮಹಾಂತೇಶ ಕವಟಗಿಮಠ ಹೆಚ್ಚಿನ ಮತಗಳ ಅಂತರದಿAದ ಗೆಲ್ಲಲಿದ್ದಾರೆ ಎಂದು ರಮೇಶ ಜಾರಕಿಹೊಳಿ ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಅತಿ ಹೆಚ್ಚು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಗ್ರಾಮಗಳ ಅಭಿವೃದ್ಧಿ ಕೈಗೊಳ್ಳುವ ಬಗ್ಗೆ ಸಂಕಲ್ಪ ಮಾಡಿದ್ದೇನೆ. ಇನ್ನು ಮುಂದಿನ ದಿನಗಳಲ್ಲಿ ಗೆಲುವು ಸಆಧಿಸಿದ ಅಭ್ಯರ್ಥಿ ಈ ಭಾಗದ ಅಭಿವೃದ್ಧಿ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದ್ದಾರೆ. ಹೀಗಾಗಿ ತಾವೆಲ್ಲರೂ ಅಭಿವೃದ್ಧಿಗಾಗಿ ಮತ ಹಾಕಬೇಕು ಎಂದು ಹೇಳಿದರು.
ಹಿಂಡಲಗಾ ಗ್ರಾಪಂ ಮಾಝಿ ಅಧ್ಯಕ್ಷ ರಾಮಚಂದ್ರ ಮನ್ನೋಳಕರ ಮಾತನಾಡಿ, ರಮೇಶ ಜಾರಕಿಹೊಳಿ ಅವರು ಯಾಔಉದೇ ಜಾತಿ ಧರ್ಮ ನೋಡದೇ ಕೆಲಸ ಮಾಡುತ್ತಾರೆ. ಜನರ ಅಭಿವೃದ್ಧಿಅವರ ಧ್ಯೇಯ. ಇಂಥ ನಾಯಕರ ಕೈ ಬಲಪಡಿಸಬೇಕು. ಮತ್ತೆ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ನಮ್ಮ ಸೇವೆ ಮಾಡಲಿ ಎಂದು ಹಾರೈಸಿದರು.
ಹಿಂಡಲಗಾ ಗ್ರಾಪಂ ಅಧ್ಯಕ್ಷ ನಾಗೇಶ ಮನ್ನೋಳಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಜೆಪಿ ಮುಖಂಡ ಕಿರಣ ಜಾಧವ, ಮಾಜಿ ಶಾಸಕ ಮನೋಹರ ಕಡೋಲಕರ, ಮುಖಂಡರಾದ ವಿನಯ ಕದಂ, ಪೃಥ್ವಿ ಸಿಂಗ್, ನಾರಾಯಣ ಜಂಗರುಚೆ, ಸುಭಾಷ ಹದಗಲ್, ಪುಂಡಲೀಕ ಪಾವಶೆ, ಅಪ್ಪಾ ಜಾಧವ, ಪರುಶರಾಮ ಯಳ್ಳೂರಕರ ಸೇರಿದಂತೆ ಚುನಾಯಿತ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
YuvaBharataha Latest Kannada News