ಗೋಕಾಕ: ಮಾಜಿ ಸಚಿವ ಹಾಗೂ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರ ಸತತ ಪ್ರಯತ್ನದಿಂದಾಗಿ ಗೋಕಾಕ ನಗರಕ್ಕೆ ಕೋವಿಡ್ ಸೋಂಕಿತರ ಪರೀಕ್ಷೆ ಪ್ರಯೋಗಾಲಯ ಮಂಜೂರಾಗಿದೆ ಎಂದು ಶಾಸಕರ ಆಪ್ತ ಸಹಾಯಕ ಭೀಮಗೌಡ ಪೋಲಿಸಗೌಡ್ರ ಹೇಳಿದರು.
ಈ ಕುರಿತು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ರಾಷ್ಟಿçÃಯ ಆರೋಗ್ಯ ಅಭಿಯಾನ ಇಲಾಖೆಯಿಂದ ಗೋಕಾಕ ಸರ‍್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರ ಪರೀಕ್ಷೆಗಾಗಿ ನೂತನ ಆರ್‌ಟಿಪಿಸಿಆರ್ ಮತ್ತು ಆರ್‌ಎಸ್‌ಬಿ ಮೂರು ಪ್ರಯೋಗಾಲಯ ಮಂಜೂರಾಗಿದ್ದು, ಇವು ಶೀಘ್ರವೇ ಕರ‍್ಯನರ‍್ವಹಿಸಲಿವೆ ಎಂದರು.
ಬೆಳಗಾವಿ ದೊಡ್ಡ ಜಿಲ್ಲೆ ಹಾಗೂ ಹೆಚ್ಚಿನ ಜನ ಸಂಖ್ಯೆ ಹೊಂದಿರುವ ಹಿನ್ನಲೆ ಕೋವಿಡ್ ಸೋಂಕಿತರ ವರದಿ ಬರಲು ತುಂಬಾ ವಿಳಂಬವಾಗುತ್ತಿದ್ದು, ಗೋಕಾಕ ನಗರಕ್ಕೆ ಸರಕಾರದಿಂದ ಪ್ರಯೋಗಾಲಯ ಮಂಜೂರಾಗಿದ್ದು, ಸೋಂಕಿತರ ವರದಿ ಬಹು ಬೇಗ ಸಿಗಲಿದ್ದು, ಅವರಿಗೆ ಸೂಕ್ತ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.
