Breaking News

ಪಿ,ಎಸ್,ಐ,ಹುದ್ದೆಗೆ ಆಯ್ಕೆಯಾದ ಕಿರಣ ಪಾಟೀಲಗೆ ಗ್ರಾಮಸ್ಥರಿಂದ ಅದ್ದೂರಿ ಸನ್ಮಾನ!!

Spread the love

ಪಿ,ಎಸ್,ಐ,ಹುದ್ದೆಗೆ ಆಯ್ಕೆಯಾದ ಕಿರಣ ಪಾಟೀಲಗೆ ಗ್ರಾಮಸ್ಥರಿಂದ ಅದ್ದೂರಿ ಸನ್ಮಾನ.!!

ತಾತನ ಆಸೆ ನೇರವೆರಿಸಿದ ಮೊಮ್ಮಗ, ಗ್ರಾಮಸ್ಥರಿಗೆ ಕಿರಣ ಕುಟುಂಬದವರಿಂದ ಅಭಿನಂದನೆ ಸಲ್ಲಿಕೆ.

ಯುವ ಭಾರತ ಸುದ್ದಿ ಗೋಕಾಕ್

ಸಾದಕರನ್ನು ನೋಡಿ ಪಾಲಕರು ತಮ್ಮ ಮಕ್ಕಳನ್ನು ಬೆಳೆಸಬೇಕಾಗಿದೆ,ಶಿಕ್ಷಣ ಮಕ್ಕಳಿಗೆ ಜೀವನದ ಮೌಲ್ಯವನ್ನು ಕೂಡ ನೀಡುತ್ತದೆ ಎಂದು ಗೋಕಾಕ ತಾಲೂಕಿನ ಶಿವಾಪೂರ (ಕೊ) ಗ್ರಾಮದಲ್ಲಿ ನಡೆದ 127 ರ್ಯಾಂಕ ಪಡೆದು ಪಿ,ಎಸ್,ಐ,ಹುದ್ದೆಯನ್ನು ಅಲಂಕರಿಸಿ ಕಿರಣ ಬಸಗೌಡ ಪಾಟೀಲ ಇವರಿಗೆ ಶಿವಾಪುರ ಗ್ರಾಮಸ್ಥರಿಂದ ಎರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಗೋಕಾಕ ಶಿಕ್ಷಣಾಧಿಕಾರಿಗಳಾದ ಜಿ,ಬಿ,ಬಳಗಾರ ಇವರು ಸತ್ಕಾರ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿ  ಕಿರಣ ಪಾಟೀಲ ಇವರು ಸಾದಕರಾಗಿ ಹೊರಹೊಮ್ಮಿದ್ದಾರೆ.ಸಾದಕರನ್ನು ನೋಡಿ ಮಗು ಬೆಳೆದರೆ ನಾನು ಕೂಡ ಹೀಗೆ ಆಗಬೇಕೆಂಬ ಭಾವನೆ ಬರುತ್ತದೆ. ಸರಕಾರಿ ಕೆಲಸ ಪಡೆಯುವ ಮುಂಚೆ ಆ ವ್ಯಕ್ತಿ ತನ್ನ ಕುಟುಂಬಕ್ಕೆ ಮಾತ್ರ ಸಿಮಿತವಾಗಿರುತ್ತಾನೆ,ಆದರೆ ಯಾವಾಗ ಆ ವ್ಯಕ್ತಿ ಸರಕಾರಿ ನೌಕರಿ ಪಡೆಯುತ್ತಾನೋ ಆ ಕ್ಷಣದಿಂದ ಅವರು ಪ್ರತಿ ಜನರಿಗೂ ಸಂಬಂದಿತನಾಗುತ್ತೇನೆ, ಅದರಂತೆ ಇವತ್ತು ಕಿರಣ ಬಸಗೌಡ ಪಾಟೀಲ ಇವತ್ತಿನಿಂದ ಸರಕಾರಕ್ಕೆ ಸಂಬಂದಪಟ್ಟವರು, ಅದಲ್ಲದೆ ಇವತ್ತು ನಡೆದ ಈ ಸಮಾರಂಭವು ಮತ್ತೆ ಕೆಲವು ದಿನಗಳ ನಂತರ ಕಿರಣ ಪಾಟೀಲ ದೇಶದ ಅತ್ಯುನ್ನತ ಹುದ್ದೆ ಅಲಂಕರಿಸಿ ಬಂದು ಈ ವೇದಿಕೆ ,ಜನರೊಂದಿಗೆ ಸೇರಲಿ ಎಂದು ಹಾರೈಸಿದರು,

ಇನ್ನು ಹಕವಾರು ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಕಿರಣ ಪಾಟೀಲ ಇವರು ನಾನೇನು ದೊಡ್ಡ ಹುದ್ದೆಗೆ ಹೊಗೊದಿಲ್ಲ,ಇಷ್ಟಕ್ಕೆ ನನಗೆ ಇಷ್ಟು ದೊಡ್ಡ ಮಟ್ಟಿಗೆ ತೋರಿದ ಅಭಿಮಾನವನ್ನು ನಾನೆಂದು ಮರೆಯುವುದಿಲ್ಲ,ನನಗೆ ಐ,ಎ,ಎಸ್,ಪಾಸ ಮಾಡಿ ಉನ್ನತ ಹುದ್ದೆಗೆ ಸೇರಿ ದೇಶ ಸೇವೆ ಮಾಡಲು ಇಚ್ಚಿಸಿದ್ದೆ,ಆದರೆ ಕೊರೊನಾ ಸಮಯದಲ್ಲಿ ನನ್ನ ತಂದೆ ಅಪಘಾತವಾಗಿದ್ದ ಕಾರಣ ದೆಹಲಿಯಿಂದ ಮರಳಿ ಬಂದು ಪಿ,ಎಸ್,ಐ,ಪರೀಕ್ಷೆ ಬರೆದು ಇವತ್ತು ತಮ್ಮೆಲ್ಲರ ಮುಂದೆ ನಿಂತಿದ್ದೇನೆ ಹೇಳುತ್ತಿರುವಾಗ ಕಿರಣ ಪಾಟೀಲ ಉದ್ವೇಗಕ್ಕೆ ಒಳಗಾಗಿ ಕಣ್ಣಿರಿಡುತ್ತಾ ತನ್ನ ಈ ಯಶಸ್ಸಿಗೆ ಕಾರಣರಾದ ತನ್ನ ಕುಟುಂಬದವರನ್ನು ನೆನೆದರು, ಇದು ನನ್ನ ತಾತನ ಆಸೆಯಾಗಿತ್ತು ಯಾಕೆಂದರೆ ಅವರು ಮೊದಲು ಅವರ ಮಗನನ್ನು ಪೋಲಿಸ ಇಲಾಖೆಗೆ ಸೇರಿಸುವ ಆಸೆ ಹೊಂದಿದ್ದರು ಅದು ಆಗದೆ ಇರುವುದಕ್ಕೆ ನನ್ನ ಕುಟುಂಬದವರ ಆಶಿರ್ವಾದ ಅವರು ನೀಡಿದ ಸಹಕಾರ ಇವತ್ತಿನ ಸನ್ಮಾನಕ್ಜೆ ಕಾರಣವಾಗಿದೆ ಎಂದು ಹೇಳುತ್ತಾ ಮತ್ತಷ್ಟು ಒದಿ ನಾನು ಐಎಎಸ್,ಪಾಸ ಆಗುತ್ತೇನೆ ಅದಕ್ಕೆ ನಿಮ್ಮೆಲ್ಲರ ಆಶಿರ್ವಾದ ಇರಲಿ ಎಂದು ಗ್ರಾಮಸ್ಥರಿಗೆ ಅಭಿನಂದನೆ ಸಲ್ಲಿಸಿ ಈಗಿನ ಯುವಕರು ತಮ್ಮ ತಂದೆ ತಾಯಿ ಋಣ ತಿರಿಸಬೇಕಾದರೆ ಅವರ ಮಾರ್ಗದಲ್ಲಿ ನಡೆಯಬೇಕೆಂದು ಯುವಕರಿಗೆ ಕಿವಿಮಾತು ಹೇಳಿದರು.

ಈ ಕಾರ್ಯಕ್ರಮದಲ್ಲಿ ಕಿರಣ ತಂದೆ ಬಸನಗೌಡ,ಪಾಟೀಲ,ಜಿ ಬಿ ಬಳಿಗಾರ,ಬಿ ಪಿ ಕಬಾಡಗಿ,ಶ್ರೀ ಆನಂದ ಗುರುಗಳು ,ಬಾಳನಾಯ್ಕಿ ನಾಯಕ, ರಾಚಯ್ಯ ಮಠಪತಿ,ಶಿವಾನಗೌಡ ಬಿ ಪಾಟೀಲ,ಆಯ್ ಎಮ್ ತಿಗಡಿ,ಎಮ್ ವಾಯ ಬಡಿಗೇರಅ ಡಿವೆಪ್ಪಾ ಪಾಟೀಲ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ನಾಗರಿಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಕಿರಣ ಪಾಟೀಲಗೆ ಶುಭ ಹಾರೈಸಿದರು.


Spread the love

About Yuva Bharatha

Check Also

ಪತ್ರಿಕೋದ್ಯಮದ ಬೆಳವಣಿಗೆಯಲ್ಲಿ ಪತ್ರಿಕಾ ವಿತರಕರ ಪಾತ್ರ ಬಹಳ ದೊಡ್ಡದು.- ರಮೇಶ ಜಾರಕಿಹೊಳಿ.!

Spread the loveಪತ್ರಿಕೋದ್ಯಮದ ಬೆಳವಣಿಗೆಯಲ್ಲಿ ಪತ್ರಿಕಾ ವಿತರಕರ ಪಾತ್ರ ಬಹಳ ದೊಡ್ಡದು.- ರಮೇಶ ಜಾರಕಿಹೊಳಿ.! ಗೋಕಾಕ: ಪತ್ರಿಕೆಗಳನ್ನು ಮನೆಗಳಿಗೆ ಸರಿಯಾದ …

Leave a Reply

Your email address will not be published. Required fields are marked *

four × 3 =