ಗೋ ಹತ್ಯೆಯನ್ನು ತಡೆಯುವ ನಿಟ್ಟಿನಲ್ಲಿ ಕಾಯ್ದೆ ಜಾರಿಯಾದರೂ ಯಾವುದೇ ಪ್ರಯೋಜನವಿಲ್ಲ- ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್!!
ಗೋಕಾಕ: ಗೋ ಹತ್ಯೆ ಕಾಯ್ದೆ ಜಾರಿಗೆ ತಂದಿರುವ ಬಿಜೆಪಿ ಸರಕಾರ ಗೋವುಗಳ ಹತ್ಯೆ ಮಾಡುವವರ ವಿರುದ್ಧ ಕಠೀಣ ಕ್ರಮಕೈಗೊಳ್ಳುವಲ್ಲಿ ಸರಕಾರ ವಿಫಲವಾಗಿದೆ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ಸರಕಾರದ ವಿರುದ್ಧ ಗುಡುಗಿದರು.
ಅವರು ತಾಲೂಕಿನ ಹೂಲಿಕಟ್ಟಿ ಗ್ರಾಮದ ಶ್ರೀ ದುರ್ಗಾಮಾತಾ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಗೋ ಹತ್ಯೆಯನ್ನು ತಡೆಯುವ ನಿಟ್ಟಿನಲ್ಲಿ ಕಾಯ್ದೆ ಜಾರಿಯಾದರೂ ಯಾವುದೇ ಪ್ರಯೋಜನವಿಲ್ಲ. ಹಿಂದು ಯುವಕರು ಖಸಾಯಿ ಖಾನೆಗೆ ಸಾಗಿಸಲ್ಪುಡುತ್ತಿರುವ ಗೋವುಗಳನ್ನು ಪೋಲಿಸರಿಗೆ ಒಪ್ಪಿಸಿ ಗೋ ಶಾಲೆಗಳಿಗೆ ಬಿಡುವ ಮಹತ್ಕಾರ್ಯ ಮಾಡುತ್ತಿದ್ದಾರೆ ಆದರೆ ಅಂತಹ ಗೋ ಪ್ರೇಮಿಗಳನ್ನು ಹತ್ಯೆ ಮಾಡಲಾಗುತ್ತಿದ್ದರು ಸರಕಾರ ಕೈಕಟ್ಟಿ ಕುಳಿತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅರಸಿಕೇರೆ ಕಾಳಿಮಠದ ಹೃಷಿಕೇಶ್ವರ ಸ್ವಾಮಿಜಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಹಿಂದುಗಳ ಧ್ವನಿ ಅಡಗಿಸುತ್ತೆವೆ ಎಂಬುವದು ಮುರ್ಖತನ, ಹಿಂದುಗಳ ಮೇಲೆ ದಾಖಲಾಗುವ ಪ್ರತಿಯೊಂದು ಕೇಸುಗಳು ಒಂದೊAದು ಮೆಟ್ಟಿಲಿನಂತೆ. ಕಬೀರದಾಸರು ಹೇಳಿದ್ದಾರೆ ಧ್ವನಿವರ್ಧಕ ಬಳಸಿ ದೇವರನ್ನು ಕರೇದರೆ ದೇವರು ಕಿವುಡನೇ ಎಂದು ಪ್ರಶ್ನಿಸಿದ ಅವರು, ಮಸೀದಿಗಳಲ್ಲಿರುವ ಧ್ವನಿವರ್ಧಕಗಳನ್ನು ಪೋಲಿಸ್ ಇಲಾಖೆ ತೆರವುಗೊಳಿಸಬೇಕು. ಇಲ್ಲವಾದಲ್ಲಿ ನಮ್ಮ ಎಲ್ಲ ದೇವಾಲಯಗಳಲ್ಲೂ ಸಹ ದಿನಕ್ಕೆ ಒಂದು ಬಾರಿ ಸುಪ್ರಭಾತ, ಮಹಾಮಂಗಳಾರುತಿ, ಸಂದ್ಯಾಕಾಲದ ಆರತಿ ಹಾಗೂ ರಾತ್ರಿ ಶಯನಾರತಿ ಕಾರ್ಯಕ್ರಮಕ್ಕೆ ಧ್ವನಿವರ್ಧಕವನ್ನು ಬಳಸಿಕೊಳ್ಳುತ್ತೆವೆ ಎಂದರು.
ಈ ಸಂದರ್ಭದಲ್ಲಿ ಶ್ರೀ.ಕುಮಾರದೇವರು, ಶ್ರೀ.ಶೇಖರ ಗುರೂಜಿ. ಶ್ರೀ.ವೀರುಪಾಕ್ಷದೇವರು, ಶ್ರೀ.ಸಿದ್ಧಲಿಂಗಯ್ಯ ಮಹಾರಾಜರು, ಶ್ರೀ.ಬಸವಾನಂದ ಅಜ್ಜನವರು, ಶ್ರೀ.ಚಿದಾನಂದ ಸ್ವಾಮಿಜಿ, ಶ್ರೀ,ಮೌನೇಶ ಆಚಾರ್ಯ, ಶ್ರೀ.ಶ್ರೀನಿವಾಸ ಆಚಾರ್ಯ, ಶ್ರೀ.ಶಿವರಾಜ ಶಾಸ್ತಿçಗಳು, ಕಾಂಗ್ರೇಸ್ ಮುಖಂಡ ಅಶೋಕ ಪೂಜಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.