Breaking News

“ರೈತರ ಮನೆ ಬಾಗಿಲಿಗೆ ಕಂದಾಯ ಇಲಾಖೆಯ ಯೋಜನೆ”ಕ್ಕೆ ಚಾಲನೆ-ಶಾಸಕ ರಮೇಶ ಜಾರಕಿಹೊಳಿ!!

Spread the love

“ರೈತರ ಮನೆ ಬಾಗಿಲಿಗೆ ಕಂದಾಯ ಇಲಾಖೆಯ ಯೋಜನೆ”ಕ್ಕೆ ಚಾಲನೆ-ಶಾಸಕ ರಮೇಶ ಜಾರಕಿಹೊಳಿ!!

ಗೋಕಾಕ: ಕೇಂದ್ರ ಹಾಗೂ ಬಿಜೆಪಿ ರಾಜ್ಯ ಸರಕಾರಗಳು ರೈತರ ಉದ್ಧಾರಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರೈತ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಅವರು, ಶನಿವಾರದಂದು ತಾಲೂಕಿನ ಶಿವಾಪೂರ(ಕೊ) ಗ್ರಾಮದಲ್ಲಿ “ರೈತರ ಮನೆ ಬಾಗಿಲಿಗೆ ಕಂದಾಯ ಇಲಾಖೆಯ ಯೋಜನೆ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪತ್ರಕರ್ತರೊಂದಿಗೆ ಮಾತನಾಡಿದರು.
“ರೈತರ ಮನೆ ಬಾಗಿಲಿಗೆ ಕಂದಾಯ ಇಲಾಖೆಯ ಯೋಜನೆ” ರಾಜ್ಯ ಸರಕಾರದ ಬಹುನಿರೀಕ್ಷಿತ ಜನಪರ ಯೋಜನೆಯಾಗಿದೆ. ಇದರಲ್ಲಿ ಪಹಣಿ, ಆರ್‌ಟಿಸಿ, ಜಾತಿ-ಆದಾಯ ಸೇರಿದಂತೆ ಕಂದಾಯ ಇಲಾಖೆಯ ವಿವಿಧ ದಾಖಲಾತಿಗಳನ್ನು ಒಂದೇ ಸೂರಿನಡಿ ಉಚಿತವಾಗಿ ಕಲ್ಪಿಸುವ ಯೋಜನೆ ಇದಾಗಿದ್ದು, ಇದರ ಸದುಪಯೋಗವನ್ನ ಪ್ರತಿಯೊಬ್ಬ ಗ್ರಾಮಸ್ಥರು ಪಡೆದುಕೊಳ್ಳಬೇಕು ಎಂದು ಶಾಸಕ ರಮೇಶ ಜಾರಕಿಹೊಳಿ ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ, ಕಂದಾಯ ಇಲಾಖೆ ಅಧಿಕಾರಿಗಳು, ಗ್ರಾಮಸ್ಥರು, ಜನಪ್ರತಿನಿಧಿಗಳು ಇತರರು ಉಪಸ್ಥಿತರಿದ್ದರು.


Spread the love

About Yuva Bharatha

Check Also

ಭಗೀರಥರ ಜೀವನವು ಭಕ್ತಿ, ಬದ್ಧತೆ, ಸಾಧನೆ ಮತ್ತು ಶ್ರದ್ಧೆಯಿಂದ ಕೂಡಿದ್ದು ನಾವೆಲ್ಲರೂ ತಪ್ಪದೇ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.- ಡಾ.ಮೋಹನ ಭಸ್ಮೆ.!

Spread the loveಭಗೀರಥರ ಜೀವನವು ಭಕ್ತಿ, ಬದ್ಧತೆ, ಸಾಧನೆ ಮತ್ತು ಶ್ರದ್ಧೆಯಿಂದ ಕೂಡಿದ್ದು ನಾವೆಲ್ಲರೂ ತಪ್ಪದೇ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.- …

Leave a Reply

Your email address will not be published. Required fields are marked *

seventeen − 11 =