ಬಿಲಕುಂದಿ ಗ್ರಾಮದ ಸಿದ್ಧಾರೂಢ ಜಾತ್ರಾ ಮಹೋತ್ಸವಕ್ಕೆ ಗಣ್ಯರಿಂದ ಚಾಲನೆ!!

ಗೋಕಾಕ: ತಾಲೂಕಿನ ಬಿಲಕುಂದಿ ಗ್ರಾಮದ ಸಿದ್ಧಾರೂಢ ಜಾತ್ರಾ ಮಹೋತ್ಸವ ಅತಿ ವಿಜೃಂಭಣೆಯಿAದ ಜರುಗಿತು.
ಬೆಳಿಗ್ಗೆ ಶ್ರೀ ಸಿದ್ಧಾರೂಢರ ಮೂರ್ತಿಗೆ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ ಜರುಗಿ, ೧೧ಗಂಟೆಗೆ ಸುಮಂಗಲಿಯರಿAದ ಪೂರ್ಣಕುಂಭ ಮೇಳದೊಂದಿಗೆ ಗ್ರಾಮದಲ್ಲಿ ಮೆರವಣಿಗೆ ನಡೆದು ಮಧ್ಯಾಹ್ನ ಮಹಾಪ್ರಸಾದಕ್ಕೆ ಗಣ್ಯರು ಚಾಲನೆ ನೀಡಿದರು.
ಜಾತ್ರಾಮಹೋತ್ಸವದ ದಿವ್ಯ ಸಾನಿಧ್ಯ ವಹಿಸಿದ್ದ ಸುಣಧೋಳಿಯ ಜಡಿಸಿದ್ಧೇಶ್ವರ ಮಠದ ಶ್ರೀ ಅಭಿನವ ಶಿವಾನಂದ ಸ್ವಾಮಿಜಿಯವರು ಆಶಿರ್ವಚನ ನೀಡಿದರು.
ಶ್ರೀ ಅನ್ನದಾನೇಶ್ವರ ಸ್ವಾಮಿಜಿ, ಯುವನಾಯಕ ಸರ್ವೋತ್ತಮ ಜಾರಕಿಹೊಳಿ, ಮಾಜಿ ಜಿಪಂ ಸದಸ್ಯ ವಿಠ್ಠಲ ಸವದತ್ತಿ ಸೇರಿದಂತೆ ಜನಪ್ರತಿನಿಧಿಗಳು, ಬಿಲಕುಂದಿ ಗ್ರಾಮದ ಹಿರಿಯರು ಭಾಗವಹಿಸಿದ್ದರು.
YuvaBharataha Latest Kannada News