Breaking News

ಶ್ರೀಕ್ಷೇತ್ರ ಸೊಗಲಕ್ಕೆ ತೆರಳುವ ಹದಗೆಟ್ಟ ಮುಖ್ಯ ರಸ್ತೆ

Spread the love

ಶ್ರೀಕ್ಷೇತ್ರ ಸೊಗಲಕ್ಕೆ ತೆರಳುವ ಹದಗೆಟ್ಟ ಮುಖ್ಯ ರಸ್ತೆ

ಮುರಗೋಡ:
ಮುರಗೋಡ ಹೊಸ ಬಸ್ ನಿಲ್ದಾಣ ಕ್ರಾಸ್‌ನಿಂದ ಸಮೀಪದ ಶ್ರೀ ಕ್ಷೇತ್ರ ಸೊಗಲಕ್ಕೆ ತೆರಳುವ ಎಂಟು ಕಿ. ಮೀ. ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಆಗಾಗ ಸುರಿದ ಮಳೆ ಹೊಡೆತಕ್ಕೆ ಕಿತ್ತು ಕಿನಾರಿಯಾಗಿ ತೆಗ್ಗು ಗುಂಡಿಗಳೇ ಗೋಚರಿಸುತ್ತಿದ್ದು, ಸಂಪೂರ್ಣ ಹಾಳಾಗಿ ಸಂಚಾರಕ್ಕೆ ತೀವ್ರ ತರದ ತೊಂದರೆಯಾಗಿದೆ.
ಈ ರಸ್ತೆಯನ್ನು ಮರು ನಿರ್ಮಾಣ ಕಾಮಗಾರಿಗೆಂದೇ ಸಾಕಷ್ಟು ಹಣ
ಮಂಜೂರಾಗಿತ್ತು. ಆದರೆ ಗುತ್ತಿಗೆದಾರರು ರಸ್ತೆ ಅರ್ಧಂಬರ್ಧ
(ಅಪೂರ್ಣ) ಕಳಪೆ ಕಾಮಗಾರಿ ಮಾಡಿ ಕೈತೊಳೆದುಕೊಂಡಿದ್ದಾರೆ
ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಗ್ರಾಮದ ಬಸ್ ನಿಲ್ದಾಣ
ಪಕ್ಕದಲ್ಲೇ ಪ್ರಮುಖ ರಸ್ತೆಯನ್ನು ಉದ್ದೇಶ
ಪೂರ್ವಕವಾಗಿಯೇ ನಿರ್ಮಾಣ ಮಾಡದೆ ನಿರ್ಲಕ್ಷಿಸಲಾಗಿದೆ ಎಂದು
ಸಾರ್ವಜನಿಕರು ಕಿಡಿ ಕಾರುತ್ತಿರುವುದು ಸಾಮಾನ್ಯವಾಗಿದೆ. ಈ ಬಗ್ಗೆ
ಸಂಬಂಧಪಟ್ಟ ಮೇಲಾಧಿಕಾರಿಗಳು, ಶಾಸಕರು ಕಿಂಚಿತ್ತು ಕಾಳಜಿ
ವಹಿಸುತ್ತಿಲ್ಲದ್ದರಿಂದ ಕಂಗೆಡುವಂತಾಗಿದೆ.
ಹೊಲ ಗದ್ದೆಗೆ ತೆರಳುವ ರೈತರ ಎತ್ತು ಚಕ್ಕಡಿ, ನಾನಾ ವಾಹನ
ಸವಾರರು ಸಂಚರಿಸುವಾಗ ಆಯ ತಪ್ಪಿ ಜರ್ರನೆ ಜಾರಿ ಬಿದ್ದು
ಉರುಳಾಡುವಂತಾಗಿದೆ. ಈ ಬಗ್ಗೆ ಸಂಬಂಧಿಸಿದವರೆಗೆ ಎಷ್ಟು ಮನವಿ ಮಾಡಿದ್ದರೂ ಯಾರೂ ಕಣ್ತೆರೆದು ನೋಡುತ್ತಿಲ್ಲದ್ದರಿಂದ
ಸಾರ್ವಜನಿಕರು ಕೆಂಡಾಮಂಡಲವಾಗಿದ್ದಾರೆ.
ಆದ್ದರಿಂದ ಜನಹಿತ ಹಾಗೂ ಸುಗಮ ಸಂಚಾರಕ್ಕಾಗಿ ಸಂಬಂಧಿಸಿದ
ಅಧಿಕಾರಿಗಳು, ಜನಪ್ರತಿನಿಧಿಗಳು ಇನ್ನಾದರು
ಎಚ್ಚೆತ್ತುಕೊಂಡು ಮುತುವರ್ಜಿ ವಹಿಸಿ ತ್ವರಿತ ಗತಿಯಲ್ಲಿ
ದುರಸ್ಥಿಗೊಳಿಸಬೇಕೆಂದು ಯುವ ಮುಖಂಡ ಶಿವಾನಂದ
ದಳವಾಯಿ, ಸಾಮಾಜಿಕ ಮುಖಂಡ ಶಂಕರ ಕಾರಿ, ಬಿಜೆಪಿ ಮುಖಂಡ
ಕಾರ್ತಿಕ ಪಡೆಣ್ಣವರ, ಚಂದ್ರು ಕಿಲಾರಿ, ಪ್ರಕಾಶರಾಜ ಹಟ್ಟಿಹೊಳಿ,
ಕಾರ್ತಿಕ ಪಾಟೀಲ, ಫಕೀರಗೌಡ ಮುದಿಗೌಡvರ, ಮಮಲ್ಲಿಕಾರ್ಜುನ
ತಟ್ಟಿಮನಿ, ರಾಜಶೇಖರ ಕೋಲಕಾರ, ಪ್ರದೀಪ ಕಂಬಾರ, ಶಿವು ಹಡಪದ, ಧರೆಪ್ಪ ಹಡಪದ, ಲೋಕೇಶ ಧರ್ಮಶಾಲಿ, ಅಬ್ಬು
ಪೆಂಡಾರಿ ಸೇರಿದಂತೆ ಮತ್ತಿತರರು ಆಗ್ರಹಿಸಿದ್ದಾರೆ.
ದುರಸ್ತಿಗೊಳಿಸಲು ನಿರ್ಲಕ್ಷಿಸಿದರೆ ಉಗ್ರ ಹೋರಾಟ ಅನಿವಾರ್ಯ
ಎಂದು ಎಚ್ಚರಿಸಿದ್ದಾರೆ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

5 + thirteen =