Breaking News

ಜೈನ ಮುನಿ ಭೀಕರ ಹತ್ಯೆ ಖಂಡಿಸಿ ಬೃಹತ್ ಮೌನ ಮೆರವಣಿಗೆ

Spread the love

ಜೈನ ಮುನಿ ಭೀಕರ ಹತ್ಯೆ ಖಂಡಿಸಿ ಬೃಹತ್ ಮೌನ ಮೆರವಣಿಗೆ

ಬೆಳಗಾವಿ :
ಚಿಕ್ಕೋಡಿ ತಾಲೂಕು ಹಿರೇಕೋಡಿ ನಂದಿ ಪರ್ವತ ಜೈನಮುನಿ ಕಾಮ ಕುಮಾರ ನಂದಿ ಮಹಾರಾಜರನ್ನು ಕತ್ತರಿಸಿ ಭೀಕರವಾಗಿ ಕೊಲೆಗೈದ ಘಟನೆ ಖಂಡಿಸಿ ಸೋಮವಾರ ಚಿಕ್ಕೋಡಿಯಲ್ಲಿ ಜೈನ ಬಾಂಧವರು ಬೃಹತ್ ಪ್ರಮಾಣದಲ್ಲಿ ಸೇರಿ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ನಿಪ್ಪಾಣಿ, ಅಥಣಿ, ಕಾಗವಾಡ, ಚಿಕ್ಕೋಡಿ, ಹುಕ್ಕೇರಿ, ಕುಡಚಿ, ರಾಯಬಾಗ ಹಾಗೂ ನೆರೆಯ ಮಹಾರಾಷ್ಟ್ರದ ಜೈನ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಜೈನ ಮುನಿಗಳ ಸಾವಿಗೆ ಮರುಕ ವ್ಯಕ್ತಪಡಿಸಿದರು.

ಚಿಕ್ಕೋಡಿಯ ಆರ್ .ಡಿ. ಕಾಲೇಜ್ ಮೈದಾನದಲ್ಲಿ ಸೇರಿದ ಜನ ಬಸ್ ನಿಲ್ದಾಣ, ಮಹಾವೀರ ಸರ್ಕಲ್ ಮೂಲಕ ಮಿನಿ ವಿಧಾನಸೌಧಕ್ಕೆ ತೆರಳಿ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.

ವರೂರಿನ ಧರ್ಮಸೇನ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಹತ್ಯೆ ಮಾಡಿರುವ ಘಟನೆ ಖಂಡನೀಯ. ಇದೊಂದು ಹೇಯ ಕೃತ್ಯ. ಜೈನ ಮುನಿಗಳಿಗೆ ಮಾತ್ರವಲ್ಲ. ಸಮಾಜದ ಇತರ ಸ್ವಾಮಿಗಳ ಮೇಲೂ ಇಂತಹ ಘಟನೆ ಮರುಕಳಿಸಬಾರದು. ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.

ನಾಂದಣಿ ಜಿನಸೇನಾ ಭಟ್ಟಾಚಾರ್ಯ ಸ್ವಾಮೀಜಿ, ಕೊಲ್ಲಾಪುರದ ಲಕ್ಷ್ಮಿ ಸೇನಾ ಭಟ್ಟಾಚಾರ್ಯ ಸ್ವಾಮೀಜಿ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಮಾಜಿ ಶಾಸಕ ವೀರ ಕುಮಾರ ಪಾಟೀಲ, ಮೋಹನ ಶಾಹ, ವರ್ಧಮಾನ ಸದಲಗೆ, ಸಂಜಯ ಪಾಟೀಲ, ಉತ್ತಮ ಪಾಟೀಲ ಸೇರಿದಂತೆ ಸಾವಿರಾರು ಜೈನ ಬಾಂಧವರು ಭಾಗವಹಿಸಿದ್ದರು.

ಬೈಲಹೊಂಗಲ: ಹತ್ಯೆ ಖಂಡಿಸಿ ಬೃಹತ್ ಪ್ರತಿಭಟನೆ

ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಖಂಡಿಸಿ ಬೈಲಹೊಂಗಲ ತಾಲ್ಲೂಕು ಜೈನ ಸಮಾಜ ಬಾಂಧವರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಉಪವಿಭಾಗಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಸೋಮವಾರ ಮನವಿ ಸಲ್ಲಿಸಿದರು.

ಪಟ್ಟಣದ ಇಂಚಲ ಕ್ರಾಸ್ ರೈತ ಭವನದನಲ್ಲಿ ಸೇರಿದ ಸಮಾಜದವರು ಬಸ್ ನಿಲ್ದಾಣ, ರಾಯಣ್ಣ ವೃತ್ತ ಮಾರ್ಗವಾಗಿ ಉಪವಿಭಾಗಾಧಿಕಾರಿಗಳ ಕಚೇರಿಗೆ ತೆರಳಿದರು. ರಾಯಣ್ಣ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ಹೊರ ಹಾಕಿದರು. ಮುನಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಅವರು ಅಲ್ಪಾವಧಿಯಲ್ಲೇ ಆಶ್ರಮವನ್ನು ಉತ್ತಮವಾಗಿ ಬೆಳೆಸಿದ್ದಾರೆ. ಇನ್ನಷ್ಟು ಎತ್ತರಕ್ಕೆ ಬೆಳೆಸುವ ಮಹದಾಸೆ ಹೊಂದಿದ್ದರು. ಅಹಿಂಸಾ ಮಾರ್ಗದಲ್ಲಿ ನಡೆಯುವ ಜೈನ ಸಮುದಾಯದ ಮುನಿಗಳನ್ನು ಕ್ರೂರವಾಗಿ ಕೊಲೆ ಗೈದಿರುವುದು ಖಂಡನೀಯ. ಮುಂದೆ ಇಂತ ಘಟನೆಗಳು ನಡೆಯದಂತೆ ಸರ್ಕಾರ ಎಚ್ಚರವಹಿಸಬೇಕು. ಹತ್ಯೆ ಕೋರರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.

ಜೈನ ಸಮಾಜ ತಾಲ್ಲೂಕು ಘಟಕ ಅಧ್ಯಕ್ಷ ಅನುಪ್ಪ ಇಂಚಲ, ಉಪಾಧ್ಯಕ್ಷ ಡಾ.ಸುರೇಂದ್ರ ಕಲಘಟಗಿ, ಉದಯ ಬೆಳಗಾವಿ, ಧನರಾಜ ಭಂಡಾರಿ, ಶಾಲಾಚಂದ ಗೋಗಡ, ಬಸವರಾಜ ದೋತರದ, ಸಂತೋಷ ಭಾಂವಿ, ಅನಿಲ ಮ್ಯಾಕಲಮರ್ಡಿ, ಸುದರ್ಶನ ಉಪಾಧ್ಯೆ, ಜಿನಪ್ಪ ಮಲ್ಲಾಡಿ, ದೇವಾಲಾಪೂರ ಗ್ರಾಮದ ಶ್ರಾವಕ, ಶ್ರಾವಕಿಯರು, ಮ್ಯಾಕಲಮರ್ಡಿ, ಬುಡರಕಟ್ಟಿ, ಹಣಬರಟ್ಟಿ, ಇಂಚಲ, ಬಡ್ಲಿ, ಹಣ್ಣಿಕೇರಿ, ಅಮಟೂರ, ಪಟ್ಟಿಹಾಳ ಕೆ.ಬಿ., ಅಸುಂಡಿ, ಕಲಬಾಂವಿ, ತಿಗಡಿ, ಸಂಪಗಾಂವ, ಶ್ರೀಮಹಾವೀರ ಜೈನ ಅಲ್ಪ ಸಂಖ್ಯಾತರ ಅಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳು ಇದ್ದರು.


Spread the love

About Yuva Bharatha

Check Also

ಬಿಜೆಪಿ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳ ವಿಚಾರದಲ್ಲಿ ಖಚಿತ ತೀರ್ಮಾನ ಮಾಡ್ತೀವಿ: ಸಿದ್ದರಾಮಯ್ಯ

Spread the love ಬಿಜೆಪಿ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳ ವಿಚಾರದಲ್ಲಿ ಖಚಿತ ತೀರ್ಮಾನ ಮಾಡ್ತೀವಿ: ಸಿದ್ದರಾಮಯ್ಯ …

Leave a Reply

Your email address will not be published. Required fields are marked *

7 + 4 =