Breaking News

ಜಯ ಕರ್ನಾಟಕ ಸಂಘಟನೆ ವತಿಯಿಂದ ಅರಭಾವಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗೆ ಮನವಿ

Spread the love

ಜಯ ಕರ್ನಾಟಕ ಸಂಘಟನೆ ವತಿಯಿಂದ ಅರಭಾವಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗೆ ಮನವಿ

ಯುವ ಭಾರತ ಸುದ್ದಿ ಘಟಪ್ರಭಾ:
ಅರಭಾವಿ ಪಟ್ಟಣದ 12ನೇ ವಾರ್ಡ್ ವ್ಯಾಪ್ತಿಯಲ್ಲಿ ಬರುವ ರಸ್ತೆಗಳು ಹದಗೆಟ್ಟು ಹೋಗಿದ್ದು, ನೀರಿನ ಸೌಕರ್ಯ ಸಹ ಕೂಡ ಸರಿಯಾಗಿ ಇರುವುದಿಲ್ಲ ಆದುದರಿಂದ ಅಲ್ಲಿಯ ಜನರಿಗೆ ತುಂಬಾ ತೊಂದರೆಯಾಗುತ್ತಿದ್ದು, ತಕ್ಷಣ ಅಧಿಕಾರಿಗಳು ಈ ಬಗ್ಗೆ ಪರೀಶೀಲಿಸಿ ರಸ್ತೆ ಮತ್ತು ನೀರಿನ ಮೂಲ ಸೌಕರ್ಯ ಒದಗಿಸಬೇಕೆಂದು ಜಯ ಕರ್ನಾಟಕ ಸಂಘಟನೆ ವತಿಯಿಂದ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳಿಗೆ ಶನಿವಾರ ಮನವಿ ಸಲ್ಲಿಸಲಾಯಿತು.
ಸಮಸ್ಯೆಗಳನ್ನು ಕೂಡಲೇ ಬಗೆಹರಿಸದಿದ್ದರೆ ಜಯ ಕರ್ನಾಟಕ ಸಂಘಟನೆ ವತಿಯಿಂದ ಬೃಹತ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರು ಮಲಿಕಜಾನ ಮೀ ತಲವಾರ, ತಾಲೂಕ ಅಧ್ಯಕ್ಷರು ಅಜೀಜ ಮೊಕಾಶಿ, ಬಾಳೇಶ ಪೂಜೇರಿ, ಅರಭಾವಿ ಘಟಕ ಅಧ್ಯಕ್ಷರು ರಸೂಲ ಮಕಾಂದರ, ಸಲೀಮ ಮುಲ್ಲಾ, ಇಮ್ರಾನ ಡಾಂಗೆ, ಶಬ್ಬೀರ ಮುಲ್ಲಾ, ಜಾವಿದ್ ಸೀಗಡಿ, ಅಬ್ದುಲ್ ಮಜಿದ್ ಸಿಗಡಿ, ಸುಭಾನಿ ಮುಲ್ತಾನಿ, ಅಬ್ದುಲ್ ಸಿಗಡಿ, ರಮೇಜಾ ಮಕಾಂದರ, ಮೈಮುನ ಶಿಗಡಿ, ಘಟಕ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

2 × 5 =