Breaking News

ರಸ್ತೆ ಅಗಲಿಕರಣ ಕಾಮಗಾರಿಗೆ ಚಾಲನೆ ನೀಡಿದ- ಅಮರನಾಥ ಜಾರಕಿಹೊಳಿ.!

Spread the love

ರಸ್ತೆ ಅಗಲಿಕರಣ ಕಾಮಗಾರಿಗೆ ಚಾಲನೆ ನೀಡಿದ- ಅಮರನಾಥ ಜಾರಕಿಹೊಳಿ.!

ಯುವ  ಭಾರತ ಸುದ್ದಿ ಗೋಕಾಕ: ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ ಕೊಳವಿ ಸಕ್ಕರೆ ಕಾರಾಖಾನೆಯಿಂದ ಮಾಲದಿನ್ನಿ ಕ್ರಾಸ ವರೆಗೆ 14.40 ಕೋಟಿ ರೂ ವೆಚ್ಚದಲ್ಲಿ ರಸ್ತೆ ಅಗಲಿಕರಣ ಹಾಗೂ ಅಭಿವೃದ್ಧಿ ಮತ್ತು ಅಕ್ಕತಂಗೇರಹಾಳ ಕ್ರಾಸದಿಂದ ಹೊಸೂರು, ಹುಲಿಕಟ್ಟಿ ಹಾಗೂ ಮಮದಾಪೂರ ಕ್ರಾಸ ನಡೆವೆ ಬಾಕಿ ಉಳಿದ ರಸ್ತೆ ಅಗಲಿಕರಣ ಮತ್ತು ಅಭಿವೃದ್ಧಿಯ 8.1೦ ಲಕ್ಷ ರೂಗಳ ಕಾಮಗಾರಿಗಳಿಗೆ ಗುರುವಾರದಂದು ಮಾಲದಿನ್ನಿ ಕ್ರಾಸ ಹತ್ತಿರ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಕೆಎಂಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ, ಜಿಪಂ ಮಾಜಿ ಸದಸ್ಯರಾದ ಟಿ.ಆರ್.ಕಾಗಲ, ಮಡೆಪ್ಪ ತೋಳಿನವರ, ಮುಖಂಡರಾದ ಭೀಮಗೌಡ ಪೋಲಿಸಗೌಡರ, ಸುರೇಶ್ ಸನದಿ, ಹನುಮಂತ ದುರ್ಗಣ್ಣವರ, ರಮೇಶ ಭಂಡಿ, ಲಕ್ಕಪ್ಪ ಮಾಳಗಿ, ವಿಠ್ಠಲ ಗುಂಡಿ, ರಂಗಪ್ಪ ನಂದಿ, ಅವನಪ್ಪ ಭಂಡಿ, ಕೃಷ್ಣಪ್ಪ ಜೋಗ್ಯಾಗೋಳ, ಉದ್ದಪ್ಪ ಖಿಲಾರಿ, ಲಕ್ಷö್ಮಣ ಜಿಂಗಿ, ಮುತ್ತೆಪ್ಪ ಬಿರನಗಡ್ಡಿ, ಮಹಾದೇವ ಭಂಡಿ, ಕರೇಪ್ಪ ಕೊಳವಿ, ರಾಮಸಿದ್ಧ ಮಜ್ಜಗಿ ಸೇರಿದಂತೆ ಅನೇಕರು ಇದ್ದರು.


Spread the love

About Yuva Bharatha

Check Also

ಶ್ರೀ ಉಜ್ಜಯಿನಿ ಸದ್ಧರ್ಮ ಪೀಠದ ಪ್ರಸ್ತುತ ಪರಮ ಪೀಠಾಚಾರ್ಯರಾದ ಶ್ರೀ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರರ ಸಾನ್ನಿಧ್ಯದಲ್ಲಿ ಜಾತ್ರಾ ಮಹೋತ್ಸವ

Spread the loveಸಾಮಾಜಿಕ ಸೌಹಾರ್ದತೆ ಸಾರುವ ಶ್ರೀ ಉಜ್ಜಯಿನಿ ಮರುಳಸಿದ್ಧೇಶ್ವರ ಜಾತ್ರಾ ಮಹೋತ್ಸವ.! ಶ್ರೀ ಉಜ್ಜಯಿನಿ ಸದ್ಧರ್ಮ ಪೀಠದ ಪ್ರಸ್ತುತ …

Leave a Reply

Your email address will not be published. Required fields are marked *

fifteen + twenty =