Breaking News

ಸಚಿವ ಖಾತೆ ಹಂಚಿಕೆ

Spread the love

ಸಚಿವ ಖಾತೆ ಹಂಚಿಕೆ

ಬೆಂಗಳೂರು:
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದ ಸಚಿವರಿಗೆ ಭಾನುವಾರ ರಾತ್ರಿ ಖಾತೆ ಹಂಚಿಕೆ ಮಾಡಲಾಗಿದೆ.

ಸಾರಿಗೆ ಖಾತೆ ಹಂಚಿಕೆ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ರಾಮಲಿಂಗಾರೆಡ್ಡಿ ಅವರಿಗೆ ಸಾರಿಗೆ ಖಾತೆಯ ಜೊತೆಗೆ ಹೆಚ್ಚುವರಿಯಾಗಿ ಮುಜರಾಯಿ ಖಾತೆಯನ್ನೂ ನೀಡಲಾಗಿದೆ.

ಯಾರಿಗೆ, ಯಾವ ಖಾತೆ?

ಸಿದ್ದರಾಮಯ್ಯ (ಮುಖ್ಯಮಂತ್ರಿ); ಹಣಕಾಸು, ಆಡಳಿತ ಸುಧಾರಣೆ, ಗುಪ್ತಚರ, ವಾರ್ತಾ ಇಲಾಖೆ ಮತ್ತು ಹಂಚಿಕೆಯಾಗದೆ ಉಳಿಿರುವ ಖಾತೆಗಳು

ಡಿ.ಕೆ. ಶಿವಕುಮಾರ್ (ಉಪ ಮುಖ್ಯಮಂತ್ರಿ); ಜಲಸಂಪನ್ಮೂಲ, ಬೆಂಗಳೂರು ನಗರ ಅಭಿವೃದ್ಧಿ

ಜಿ. ಪರಮೇಶ್ವರ; ಗೃಹ (ಗುಪ್ತಚರ ಹೊರತುಪಡಿಸಿ)

ಎಚ್‌.ಕೆ. ಪಾಟೀಲ್‌; ಕಾನೂನು ಮತ್ತು ಸಂಸದೀಯ ವ್ಯವಹಾರ, ಪ್ರವಾಸೋದ್ಯಮ

ಕೆ.ಎಚ್‌. ಮುನಿಯಪ್ಪ; ಆಹಾರ ಮತ್ತು ನಾಗರಿಕ ಪೂರೈಕೆ, ಗ್ರಾಹಕ ವ್ಯವಹಾರ

ಕೆ.ಜೆ. ಜಾರ್ಜ್‌; ಇಂಧನ

ಎಂ.ಬಿ ಪಾಟೀಲ್‌; ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ,

ರಾಮಲಿಂಗಾರೆಡ್ಡಿ; ಸಾರಿಗೆ, ಮುಜರಾಯಿ

ಸತೀಶ್‌ ಜಾರಕಿಹೊಳಿ; ಲೋಕೋಪಯೋಗಿ

ಪ್ರಿಯಾಂಕ್‌ ಖರ್ಗೆ; ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌

ಜಮೀರ್‌ ಅಹ್ಮದ್‌ ಖಾನ್‌; ವಸತಿ, ವಕ್ಫ್‌ ಮತ್ತು ಅಲ್ಪಸಂಖ್ಯಾತ

ಕೃಷ್ಣ ಬೈರೇಗೌಡ; ಕಂದಾಯ (ಮುಜರಾಯಿ ಹೊರತುಪಡಿಸಿ)

ದಿನೇಶ್‌ ಗುಂಡೂರಾವ್‌; ಆರೋಗ್ಯ ಮತ್ತು ಕುಟುಂಬ ಕಲ್ಯಾಣ

ಎನ್‌. ಚಲುವರಾಯಸ್ವಾಮಿ; ಕೃಷಿ

ಕೆ. ವೆಂಕಟೇಶ್‌; ಪಶು ಸಂಗೋಪನೆ ಮತ್ತು ರೇಷ್ಮೆ

ಡಾ. ಎಚ್‌.ಸಿ. ಮಹದೇವಪ್ಪ; ಸಮಾಜ ಕಲ್ಯಾಣ

ಈಶ್ವರ್‌ ಖಂಡ್ರೆ; ಅರಣ್ಯ, ಜೈವಿಕ ಮತ್ತು ಪರಿಸರ

ಕೆ.ಎನ್‌. ರಾಜಣ್ಣ; ಸಹಕಾರ

ಶರಣಬಸಪ್ಪ ದರ್ಶನಾಪುರ್‌; ಸಣ್ಣ ಕೈಗಾರಿಕೆ, ಸಾರ್ವಜನಿಕ ಸ್ವಾಮ್ಯದ ಕೈಗಾರಿಕೆ

ಶಿವಾನಂದ ಪಾಟೀಲ್‌; ಜವಳಿ, ಸಕ್ಕರೆ, ಕೃಷಿ ಮಾರುಕಟ್ಟೆ

ಆರ್‌.ಬಿ. ತಿಮ್ಮಾಪುರ; ಅಬಕಾರಿ

ಎಸ್‌.ಎಸ್‌. ಮಲ್ಲಿಕಾರ್ಜುನ್‌; ಗಣಿ, ಭೂವಿಜ್ಞಾನ ಮತ್ತು ತೋಟಗಾರಿಕೆ

ಶಿವರಾಜ ಎಸ್‌ ತಂಗಡಗಿ; ಹಿಂದುಳಿದ ವರ್ಗ ಮತ್ತು ಕನ್ನಡ ಮತ್ತು ಸಂಸ್ಕತಿ

ಶರಣ್‌ ಪ್ರಕಾಶ್‌ ಪಾಟೀಲ್‌; ವೈದ್ಯಕೀಯ ಶಿಕ್ಷಣ, ಕೌಶಲ ಅಭಿವೃದ್ಧಿ

ಮಂಕಾಳ ವೈದ್ಯ; ಮೀನುಗಾರಿಕೆ, ಬಂದರು ಮತ್ತು ಒಳ ಸಾರಿಗೆ

ಲಕ್ಷ್ಮೀ ಹೆಬ್ಬಾಳಕರ; ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನ, ಹಿರಿಯರ ಕಲ್ಯಾಣ

ರಹೀಂ ಖಾನ್‌; ಪೌರಾಡಳಿತ, ಹಜ್‌

ಡಿ. ಸುಧಾಕರ್‌; ಸಾಂಖ್ಯಿಕ ಮತ್ತು ಯೋಜನೆ

ಸಂತೋಷ್‌ ಲಾಡ್‌; ಕಾರ್ಮಿಕ

ಎನ್‌.ಎಸ್‌. ಬೋಸರಾಜು; ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ

ಬೈರತಿ ಸುರೇಶ್‌; ನಗರಾಭಿವೃದ್ಧಿ ಮತ್ತು ನಗರ ಯೋಜನೆ (ಬೆಂಗಳೂರು ಅಭಿವೃದ್ಧಿ, ಬಿಬಿಎಂಪಿ, ಬಿಡಿಎ, ಬಿಡಬ್ಲ್ಯೂಎಸ್‌ಎಸ್‌ಬಿ, ಬಿಎಂಆರ್‌ಡಿಎ, ಬಿಎಂಆರ್‌ಸಿಎಲ್‌ ಹೊರತುಪಡಿಸಿ)

ಮಧು ಬಂಗಾರಪ್ಪ; ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

ಡಾ ಎಂ.ಸಿ. ಸುಧಾಕರ್‌; ಉನ್ನತ ಶಿಕ್ಷಣ

ಬಿ. ನಾಗೇಂದ್ರ; ಯುವಜನ ಸೇವೆ, ಕ್ರೀಡೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ


Spread the love

About Yuva Bharatha

Check Also

ಬಿಜೆಪಿ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳ ವಿಚಾರದಲ್ಲಿ ಖಚಿತ ತೀರ್ಮಾನ ಮಾಡ್ತೀವಿ: ಸಿದ್ದರಾಮಯ್ಯ

Spread the love ಬಿಜೆಪಿ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳ ವಿಚಾರದಲ್ಲಿ ಖಚಿತ ತೀರ್ಮಾನ ಮಾಡ್ತೀವಿ: ಸಿದ್ದರಾಮಯ್ಯ …

Leave a Reply

Your email address will not be published. Required fields are marked *

eighteen − 11 =