ಮಾಧ್ಯಮಗಳ ಮುಂದೆ ಸಮಸ್ಯೆ ತೊಡಿಕೊಂಡವರ ವಿರುದ್ಧ ಎಫ್ಐಆರ್ ದಾಖಲಿಸುತ್ತೆನೆ ತಹಶೀಲ್ದಾರ್..!!
ಯುವ ಭಾರತ ಸುದ್ದಿ ಅಥಣಿ: ತಾಲ್ಲೂಕಿನ ನೆರೆ ಸಂತ್ರಸ್ತರು ಮಾಧ್ಯಮಗಳ ಮುಂದೆ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಕ್ಕೆ ಅಥಣಿ ತಹಶೀಲ್ದಾರ್ ದುಂಡಪ್ಪ ಕೋಮಾರ ಕೇಸ್ ದಾಖಲಿಸುತ್ತೆನೆ ಎಂದು ಅವಾಜ್ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ತಾಲ್ಲೂಕಿನ ಹುಲಗಬಾಳ ಗ್ರಾಮದ ಮಾಂಗ ವಸತಿ ಕೆಲವು ಸಂತ್ರಸ್ತರರು ಮಾಧ್ಯಮ ಮುಂದೆ ಕಳೆದ ವರ್ಷದ ನೆರೆ ಪರಿಹಾರ ದೊರಕಿಲ್ಲ.
ಶಾಶ್ವತ ಪರಿಹಾರ ದೊರೆಯುಂತೆ ಮಾಡಬೇಕು. ತುರ್ತಾಗಿ ದನ ಕರುಗಳಿಗೆ ಮೇವು, ವಸತಿ , ಸೇತುವೆ ವ್ಯವಸ್ಥೆ ಮಾಡಬೇಕು ಎಂದು ಮಾಧ್ಯಮಗಳ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದ್ದರು.
ಮೂಲಗಳ ಮಾಹಿತಿ ಪ್ರಕಾರ ವರದಿಯನ್ನು ಸಿಎಂ ಯಡಿಯೂರಪ್ಪನವರು ಗಮನಿಸಿ ಜಿಲ್ಲಾಧಿಕಾರಿಗೆ ಕರೆ ಮಾಡಿ ಅಲ್ಲಿ ಮೂಲಭೂತ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದರು.
ಇದರಿಂದ ಅಥಣಿ ತಹಶೀಲ್ದಾರ್ ಗ್ರಾಮಸ್ಥರ ವಿರುದ್ಧ ಹರಿಹಾಯ್ದಿದ್ದಾರೆ. ಮಾಧ್ಯಮಗಳ ಮುಂದೆ ಸಮಸ್ಯೆ ತೊಡಿಕೊಂಡವರ ವಿರುದ್ಧ ಎಫ್ಐಆರ್ ದಾಖಲಿಸುತ್ತೆನೆ ಎಂದು ಹೇಳಿದ್ದಾರೆ.
ಸಧ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಬೆನ್ನಲ್ಲೇ ತಾಲೂಕಿನಲ್ಲಿ ಚರ್ಚೆಗೆ ಗ್ರಾಸವಾಗಿದೆ.