Breaking News

ಅಥಣಿ: ಪೊಲೀಸರ ಕೈಗೆ ಕೊನೆಗೂ ಸಿಕ್ಕಿಬಿದ್ದ ಟೈರ್ ಕಳ್ಳ

Spread the love

ಅಥಣಿ: ಪೊಲೀಸರ ಕೈಗೆ ಕೊನೆಗೂ ಸಿಕ್ಕಿಬಿದ್ದ ಟೈರ್ ಕಳ್ಳ

ಯುವ ಭಾರತ ಸುದ್ದಿ ಅಥಣಿ :
ಅಥಣಿ ಪಟ್ಟಣದ ಕಾಂಕ್ರೀಟ್ ಮಿಕ್ಸಿಂಗ್ ಘಟಕದಲ್ಲಿ ನಿಲ್ಲಿಸಲಾಗಿದ್ದ ಟಿಪ್ಪರ್ ವಾಹನದ 6 ಗಾಲಿಗಳನ್ನು (ಡಿಸ್ಕ್ ಸಮೇತ) ಕಳ್ಳತನ ಮಾಡಿ ಪರಾರಿಯಾಗಿದ್ದ, ಹಲವೆಡೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಅಥಣಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಅನಂತಪುರ ಗ್ರಾಮದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಆರೋಪಿ ಕುಮಾರ ದಶರಥ ಥೈಲರ್ ಎಂಬಾತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಒಂದು ತಿಂಗಳ ಹಿಂದೆ ಟಿಪ್ಪರ್‌ಗಳ ಟೈರ್ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿತನಿಂದ ಸುಮಾರು 2 ಲಕ್ಷ 40 ಸಾವಿರ ರೂಪಾಯಿ ಮೌಲ್ಯದ ಡಿಸ್ಕ್ ಸಮೇತ 6 ಟೈರ್‌ಗಳನ್ನು ಮತ್ತು ಕಳ್ಳತನಕ್ಕೆ ಬಳಸಿದ ಮಹಾರಾಷ್ಟ್ರ ರಾಜ್ಯದ ನೋಂದಣಿ ಸಂಖ್ಯೆ ಹೊಂದಿರುವ ಸುಮಾರು 2 ಲಕ್ಷ 50 ಸಾವಿರ ರೂಪಾಯಿ ಮೌಲ್ಯದ ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನವನ್ನು ಪಡೆದುಕೊಂಡಿದ್ದಾರೆ.

ಅಥಣಿ ಡಿವೈಎಸ್ಪಿ ಶ್ರೀಪಾದ್ ಜಲ್ಲೆ, ಸಿಪಿಐ ರವೀಂದ್ರ
ನಾಯ್ಕಡಿ ಮಾರ್ಗದರ್ಶನದಲ್ಲಿ ಅಥಣಿ ಪಿಎಸ್‌ಐ ಶಿವಶಂಕರ ಮಕರಿ, ಅಪರಾಧ ವಿಭಾಗದ ಪಿಎಸ್‌ಐ ರಾಕೇಶ ಬಗಲಿ, ಎಎಸ್‌ಐ ವಿ.ಜಿ ಅರೇ‌, ಸಿಬ್ಬಂದಿಯಾದ ಬಿ ಜೆ. ತಳವಾರ, ಬಿ ವಿ.ನಾಯಕ, ಎ ಎ ಈರ್ಕರ, ಜೆ. ಎಚ್ ಡಾಂಗೆ, ಎಂ. ಎ. ಪಾಟೀಲ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಅಥಣಿ ಪೊಲೀಸರ ಈ ಕಾರ್ಯ ಸಾಧನೆಗೆ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


Spread the love

About Yuva Bharatha

Check Also

ಅಥಣಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಭಾಗಿ ಅಗ್ನಿ ಅವಘಡ : ಲಕ್ಷಾಂತರ ಮೌಲ್ಯದ ಸಲಕರಣೆಗಳು ಬೆಂಕಿಗೆ ಆಹುತಿ

Spread the loveಅಥಣಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಭಾಗಿ ಅಗ್ನಿ ಅವಘಡ : ಲಕ್ಷಾಂತರ ಮೌಲ್ಯದ ಸಲಕರಣೆಗಳು ಬೆಂಕಿಗೆ ಆಹುತಿ …

Leave a Reply

Your email address will not be published. Required fields are marked *

18 − 12 =