Breaking News

Yuva Bharatha

ಹುಣಶ್ಯಾಳ ಪಿಜಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಕಂಚಿನ ಪುತ್ಥಳಿ ಅನಾವರಣಗೊಳಿಸಿದ ಬಾಲಚಂದ್ರ ಜಾರಕಿಹೊಳಿ

ಹುಣಶ್ಯಾಳ ಪಿಜಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಕಂಚಿನ ಪುತ್ಥಳಿ ಅನಾವರಣಗೊಳಿಸಿದ ಬಾಲಚಂದ್ರ ಜಾರಕಿಹೊಳಿ ಯುವ ಭಾರತ ಸುದ್ದಿ ಮೂಡಲಗಿ :                  ಕೆಲವರು ಹುಟ್ಟುವಾಗ ಮನುಷ್ಯರಾಗಿರುತ್ತಾರೆ. ನಂತರ ಅವರು ಮಾಡಿರುವ ಸಮಾಜಮುಖಿ ಕಾರ್ಯಗಳಿಂದ ಸಾವಿನ ನಂತರ ದೇವರಾಗುತ್ತಾರೆ. ಅಂತಹವರ ಸಾಲಿನಲ್ಲಿ ಸ್ವಾತಂತ್ರ್ಯ ಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟ ಸಂಗೊಳ್ಳಿ ರಾಯಣ್ಣನು ಸೇರುತ್ತಾನೆ ಎಂದು ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ …

Read More »

ಅಥಣಿ: ಪೊಲೀಸರ ಕೈಗೆ ಕೊನೆಗೂ ಸಿಕ್ಕಿಬಿದ್ದ ಟೈರ್ ಕಳ್ಳ

ಅಥಣಿ: ಪೊಲೀಸರ ಕೈಗೆ ಕೊನೆಗೂ ಸಿಕ್ಕಿಬಿದ್ದ ಟೈರ್ ಕಳ್ಳ ಯುವ ಭಾರತ ಸುದ್ದಿ ಅಥಣಿ : ಅಥಣಿ ಪಟ್ಟಣದ ಕಾಂಕ್ರೀಟ್ ಮಿಕ್ಸಿಂಗ್ ಘಟಕದಲ್ಲಿ ನಿಲ್ಲಿಸಲಾಗಿದ್ದ ಟಿಪ್ಪರ್ ವಾಹನದ 6 ಗಾಲಿಗಳನ್ನು (ಡಿಸ್ಕ್ ಸಮೇತ) ಕಳ್ಳತನ ಮಾಡಿ ಪರಾರಿಯಾಗಿದ್ದ, ಹಲವೆಡೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಅಥಣಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅನಂತಪುರ ಗ್ರಾಮದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಆರೋಪಿ ಕುಮಾರ ದಶರಥ ಥೈಲರ್ ಎಂಬಾತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಒಂದು ತಿಂಗಳ …

Read More »

ಕೆ.ಎಲ್.ಇ. ಸ್ವಾಯತ್ತ ವಿಶ್ವವಿದ್ಯಾಲಯದಿಂದ ಎನ್.ಎಸ್.ಎಸ್. ಕೋಶ ರಾಷ್ಟ್ರೀಯ ಏಕೀಕರಣ ಶಿಬಿರದ ಸಮಾರೋಪ

ಕೆ.ಎಲ್.ಇ. ಸ್ವಾಯತ್ತ ವಿಶ್ವವಿದ್ಯಾಲಯದಿಂದ ಎನ್.ಎಸ್.ಎಸ್. ಕೋಶ ರಾಷ್ಟ್ರೀಯ ಏಕೀಕರಣ ಶಿಬಿರದ ಸಮಾರೋಪ ಯುವ ಭಾರತ ಸುದ್ದಿ ಬೆಳಗಾವಿ : ಕೆ.ಎಲ್.ಇ. ಸ್ವಾಯತ್ತ ವಿಶ್ವವಿದ್ಯಾಲಯ ಕರ್ನಾಟಕ ರಾಜ್ಯ ರಾಷ್ಟೀಯ ಸೇವಾ ಯೋಜನೆ ಕೋಶದ ಸಹಯೋಗದಲ್ಲಿ ಹಾಗೂ ರಾಷ್ಟೀಯ ಸೇವಾ ಯೋಜನೆ, ಪ್ರಾದೇಶಿಕ ನಿರ್ದೇಶನಾಲಯ, ಭಾರತ ಸರ್ಕಾರದ ಬೆಂಬಲದೊಂದಿಗೆ ರಾಷ್ಟ್ರೀಯ ಏಕೀಕರಣ ಶಿಬಿರವನ್ನು ಕೆ.ಎಲ್.ಇ, ಜೆ.ಎನ್.ಎಮ್.ಸಿ ಆವರಣದಲ್ಲಿ ಏಕೀಕರಣದ ಮೂಲಕ ಸುಸ್ಥಿರ ಅಭಿವೃದ್ದಿಯ ಕಡೆಗೆ ಸಣ್ಣ ಬದಲಾವಣೆಗಳು ಎಂಬ ಶೀರ್ಷಿಕೆಯೊಂದಿಗೆ ಜ.17 ರಿಂದ …

Read More »

ಗೋಕಾಕ : ವೀರರಾಣಿ ಚನ್ನಮ್ಮನಾಟಕ ಉದ್ಘಾಟನೆ

ಗೋಕಾಕ : ವೀರರಾಣಿ ಚನ್ನಮ್ಮನಾಟಕ ಉದ್ಘಾಟನೆ ಯುವ ಭಾರತ ಸುದ್ದಿ ಗೋಕಾಕ :                      ಭಾರತ ಸ್ವಾತಂತ್ರ‍್ಯ ಸಂಗ್ರಾಮದ ಪ್ರಥಮ ಹೋರಾಟಗಾರ್ತಿ ವೀರರಾಣಿ ಕಿತ್ತೂರ ಚನ್ನಮ್ಮನವರ ಇತಿಹಾಸವನ್ನು ಇಂದಿನ ಯುವ ಪೀಳಿಗೆಗೆ ತಿಳಿಸುವ ಕಾರ್ಯ ಮಾಡಬೇಕಾಗಿದೆ ಎಂದು ಸಂಸದ ಈರಣ್ಣ ಕಡಾಡಿ ಹೇಳಿದರು . ರವಿವಾರದಂದು ಸಾಯಂಕಾಲ ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಇಲ್ಲಿನ ಶ್ರೀ ಸಿದ್ದೇಶ್ವರ ಸಾಮರಸ್ಯ …

Read More »

ಸುಭಾಷ್ ಚಂದ್ರ ಬೋಸ್ ಒಬ್ಬ ರಾಷ್ಟ್ರವಾದಿಗಳಾಗಿದ್ದರು: ಶಂಕರಗೌಡ ಬಿರಾದಾರ್

ಸುಭಾಷ್ ಚಂದ್ರ ಬೋಸ್ ಒಬ್ಬ ರಾಷ್ಟ್ರವಾದಿಗಳಾಗಿದ್ದರು: ಶಂಕರಗೌಡ ಬಿರಾದಾರ್ ಯುವ ಭಾರತ ಸುದ್ದಿ ಬಸವನಬಾಗೇವಾಡಿ :      ನೇತಾಜಿ ಸುಭಾಷ್ ಚಂದ್ರ ಬೋಸ್ ಒಬ್ಬ ಭಾರತೀಯ ರಾಷ್ಟ್ರೀಯತಾವಾದಿಯಾಗಿದ್ದು ಭಾರತ ಕಡೆಗೆ ಅವರ ದೇಶಭಕ್ತಿಯು ಅನೇಕ ಭಾರತೀಯರ ಹೃದಯದಲ್ಲಿ ಒಂದು ಗುರುತು ಬಿಟ್ಟಿದೆ ನೇತಾಜಿಯವರು ಸ್ವಾತಂತ್ರ್ಯಗೋಸ್ಕರ ಆಜಾದ ಹಿಂದೆ ಪೌಜ್ ಎಂಬ ಸೈನ್ಯವನ್ನು ಕಟ್ಟಿದ ಧೀಮಂತ ನಾಯಕ ಎಂದು ರಾಷ್ಟ್ರೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷರಾದ ಶಂಕರಗೌಡ ಬಿರಾದಾರ್ ಅವರು …

Read More »

7೦೦ ಕೋಟಿ ವೆಚ್ಚದಲ್ಲಿ ಲಂಡನ್ನಿನ ಥೀಮ್ಸ್ ನದಿಯಂತೆ ಚಿಕ್ಕೋಳ್ಳಿಯಿಂದ ಲೋಳಸೂರ ಫೂಲ್ ವರೆಗೆ ರಕ್ಷಣಾ ಗೊಡೆ ನಿರ್ಮಾಣ- ಶಾಸಕ ರಮೇಶ ಜಾರಕಿಹೊಳಿ.!

7೦೦ ಕೋಟಿ ವೆಚ್ಚದಲ್ಲಿ ಲಂಡನ್ನಿನ ಥೀಮ್ಸ್ ನದಿಯಂತೆ ಚಿಕ್ಕೋಳ್ಳಿಯಿಂದ ಲೋಳಸೂರ ಫೂಲ್ ವರೆಗೆ ರಕ್ಷಣಾ ಗೊಡೆ ನಿರ್ಮಾಣ- ಶಾಸಕ ರಮೇಶ ಜಾರಕಿಹೊಳಿ.! ಗೋಕಾಕ: ಗೋಕಾಕ ಗ್ರಾಮೀಣ ಹಾಗೂ ನಗರದಲ್ಲಿ ಹಲವಾರು ಯೋಜನೆಗಳ ಅನುಷ್ಠಾನದೊಂದಿಗೆ ಜನತೆಗೆ ಮೂಲಭೂತ ಸೌಲಭ್ಯ ಕಲ್ಪಿಸಿ ನಗರದ ಸೌಂಧರ್ಯಕರಣಕ್ಕು ಶ್ರಮಿಸುತ್ತಿರುವದಾಗಿ ಶಾಸಕ ರಮೇಶ ಜಾರಕಿಹೊಳಿ ತಿಳಿಸಿದರು. ಅವರು, ಸೋಮವಾರದಂದು ನಗರದ ಸಣ್ಣ ಹನುಮಂತ ದೇವರ ದೇಸ್ಥಾನದ ಹತ್ತಿರ ನಗರಸಭೆಯಿಂದ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ ೩೦ ಕೋಟಿ …

Read More »

ಮನಿಹಾಳದಲ್ಲಿ 27 ಕುರಿ ಸಾವು

ಮನಿಹಾಳದಲ್ಲಿ 27 ಕುರಿ ಸಾವು ಯುವ ಭಾರತ ಸುದ್ದಿ ಬೆಳಗಾವಿ : ರಾಮದುರ್ಗ ತಾಲೂಕಿನ ಮನಿಹಾಳ ಗ್ರಾಮದಲ್ಲಿ ನೂರು ಕುರಿಗಳ ಪೈಕಿ 27 ಕುರಿಗಳು ಮೃತಪಟ್ಟಿವೆ. ವಿಠ್ಠಲ ಸನದಿ ಎಂಬುವರಿಗೆ ಸೇರಿದ ಕುರಿಗಳಾಗಿವೆ. ಒಟ್ಟು 100 ಕುರಿಗಳಲ್ಲಿ 27 ಕುರಿಗಳು ಮೃತಪಟ್ಟಿವೆ. ಕುರಿಗಳ ಸಾವಿಗೆ ಕಾರಣ ಏನು ಎಂಬುದು ತಿಳಿದಿಲ್ಲ. ಪಶುಪಾಲನಾ ಇಲಾಖೆ ವರದಿ ಬಳಿಕ ಇವುಗಳ ಸಾವಿಗೆ ಕಾರಣವೇನು ಎನ್ನುವುದು ಗೊತ್ತಾಗಲಿದೆ.

Read More »

ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರಕಾರವೇ ಅಧಿಕಾರಕ್ಕೆ ಬರಲಿದೆ.- ಶಾಸಕ ರಮೇಶ ಜಾರಕಿಹೊಳಿ.!

ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರಕಾರವೇ ಅಧಿಕಾರಕ್ಕೆ ಬರಲಿದೆ.- ಶಾಸಕ ರಮೇಶ ಜಾರಕಿಹೊಳಿ.! ಗೋಕಾಕ: ಪ್ರಧಾನಿ ನರೇಂದ್ರ ಮೋದಿಯವರ ಕರೆ ಮೇರೆಗೆ ಜಿಲ್ಲಾಧ್ಯಂತ ಮುಸ್ಲಿಂ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಅಭಿವೃದ್ಧಿಗೂ ಶ್ರಮಿಸಲಾಗುವದು ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು. ಅವರು, ನಗರದ ಗಾಂಧಿ ಮೈದಾನದಲ್ಲಿ ನಡೆದ ವ್ಯಾಪಾರಸ್ಥರು ಹಮ್ಮಿಕೊಂಡ ಸತ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಪಾಕಿಸ್ತಾನ ದೇಶದ ಮುಸಲ್ಮಾನರು ಆ ದೇಶದ ವ್ಯವಸ್ಥೆಗೆ ನೊಂದು ಭಾರತ ದೇಶದ ವಿಶ್ವಾಸವಿಟ್ಟು ನಮ್ಮ …

Read More »

ಕಾನೂನಿಗೆ ಸಂಬಂಧಿಸಿದ ಕನ್ನಡ ನಿಘಂಟು ತಯಾರಿಸಲು ಸಿಎಂ ಸೂಚನೆ

ಕಾನೂನಿಗೆ ಸಂಬಂಧಿಸಿದ ಕನ್ನಡ ನಿಘಂಟು ತಯಾರಿಸಲು ಸಿಎಂ ಸೂಚನೆ ಯುವ ಭಾರತ ಸುದ್ದಿ ಬೆಂಗಳೂರು: ನ್ಯಾಯಾಂಗ ಹಾಗೂ ಕಾನೂನಿಗೆ ಸಂಬಂಧಿಸಿದ ಎಲ್ಲ ಪಾರಿಭಾಷಿಕ ಪದಗಳನ್ನು ಒಳಗೊಂಡ ಕನ್ನಡ‌ ನಿಘಂಟು ರೂಪಿಸುವುದು ಹಾಗೂ ನ್ಯಾಯಾಲಯಗಳ ತೀರ್ಪುಗಳನ್ನು ಕನ್ನಡಕ್ಕೆ ತರ್ಜುಮೆ ಮಾಡುವ ಕೆಲಸ ಆರಂಭಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೂಚಿಸಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಕನ್ನಡದಲ್ಲಿ ತೀರ್ಮಾನ …

Read More »

ಬೇಡಿಕೆ ಈಡೇರಿಕೆಗಾಗಿ ಜನವರಿ 24ರಂದು ಸಾರಿಗೆ ಸಿಬ್ಬಂದಿ ಧರಣಿ : ಬಸ್‌ ಸಂಚಾರದಲ್ಲಿ ವ್ಯತ್ಯಯದ ಸಾಧ್ಯತೆ

ಬೇಡಿಕೆ ಈಡೇರಿಕೆಗಾಗಿ ಜನವರಿ 24ರಂದು ಸಾರಿಗೆ ಸಿಬ್ಬಂದಿ ಧರಣಿ : ಬಸ್‌ ಸಂಚಾರದಲ್ಲಿ ವ್ಯತ್ಯಯದ ಸಾಧ್ಯತೆ ಯುವ ಭಾರತ ಸುದ್ದಿ ಬೆಂಗಳೂರು : ವೇತನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಸರ್ಕಾರದ ವಿರುದ್ಧ ಜನವರಿ ೨೪ರಂದು ಸಾರಿಗೆ ನೌಕರರು ನಗರದಲ್ಲಿ ಬೃಹತ್ ಧರಣಿ ಸತ್ಯಾಗ್ರಹ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಅಂದು ರಾಜ್ಯಾದ್ಯಂತ ಬಸ್ ಸಂಚಾರ ವ್ಯತ್ಯಯ ಆಗುವ ಸಾಧ್ಯತೆಯಿದೆ. ರಾಜ್ಯ ಸರ್ಕಾರವು ೬ ವರ್ಷಗಳು ಕಳೆದರೂ ವೇತನ ಹೆಚ್ಚಳ …

Read More »