Breaking News

Yuva Bharatha

ಸೇನಾಪದಕ ಪಡೆದ ಯೋಧ ನಾಗೇಂದ್ರ ಉದ್ಯಾಗೋಳಗೆ ಸನ್ಮಾನ.!

ಯುವ ಭಾರತ ಸುದ್ದಿ, ಗೋಕಾಕ್: ಕಾಶ್ಮೀರ ಗಡಿಯಲ್ಲಿ ನುಸುಳೀಕೊಂಡಿದ್ದ ಭಯೋತ್ಪಾದಕರನ್ನು ಪ್ರಾಣದ ಹಂಗು ತೊರೆದು ಗುಂಡಿಕ್ಕಿಕೊAದು ದೇಶಪ್ರೇಮ ಮೆರೆದಿದ್ದ ವಡೇರಹಟ್ಟಿ ಗ್ರಾಮದ ಯೋಧ ನಾಗೇಂದ್ರ ಉದ್ಯಾಗೋಳನಿಗೆ ಭೂಸೇನೆಯ ಲೆಪ್ಟಿನಂಟ ಜನರಲ್ ಆಲುಖ್ಯ ಅವರು ನವದೇಹಲಿಯ ಸೇನಾಭವನದಲ್ಲಿ ನಡೆದ ಸಮಾರಂಭದಲ್ಲಿ ಸೇನಾಪದಕ ನೀಡಿ (ಮೆಡಲ್) ಗೌರವಿಸಿದ್ದರು. ದೇಶಕ್ಕೆ ಹೆಮ್ಮೆ ತಂದ ಈ ಯೋಧನನ್ನು ವಡೇರಹಟ್ಟಿ ಗ್ರಾಮದ ವಾಲ್ಮೀಕಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಗೋಕಾಕ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ರಾಜೇಶ್ವರಿ ವಡೆಯರ …

Read More »

ಕನ್ನಡ ನಾಡು ಅತ್ಯಂತ ವಿಶಾಲವಾದುದು- ಸರ್ವಾಧ್ಯಕ್ಷ ಡಾ. ಸಿ ಕೆ ನಾವಲಗಿ.!

ಗೋಕಾಕ: ಕನ್ನಡ ನಾಡು ಅತ್ಯಂತ ವಿಶಾಲವಾದುದು. ಅದು ಕಾವೇರಿಯಿಂದ ಗೋದಾವರಿವರೆಗೆ ಹಬ್ಬಿ ನಿಂತಿದೆ ಎಂದು ಗೋಕಾಕ ತಾಲೂಕಾ ೫ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಸಿ.ಕೆ.ನಾವಲಗಿ ಹೇಳಿದರು. ಅವರು, ಶನಿವಾರದಂದು ಇಲ್ಲಿಯ ನ್ಯೂ ಇಂಗ್ಲೀಷ ಸ್ಕೂಲ ಆವರಣದಲ್ಲಿ ಜರುಗಿದ ೫ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರಂಭದ ಸರ್ವಾಧ್ಯಕ್ಷ ವಹಿಸಿ ಅವರು ಮಾತನಾಡಿದರು ಮುಂಬೈ, ಪುಣೆ, ನಾಸಿಕ್ ಸೇರಿದಂತೆ ಮಹಾರಾಷ್ಟ್ರದ ಶೇಕಡಾ ೪೦% ಪ್ರತಿಷತ ಪ್ರದೇಶಗಳು ಕರ್ನಾಟಕ್ಕೆ ಸೇರುಬೇಕು. ಪ್ರಾಥಮಿಕ …

Read More »

ಸಾಹಿತ್ಯ ಸಮ್ಮೇಳನ ಮೆರವಣಿಗೆಗೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಚಾಲನೆ.!

ಗೋಕಾಕ: ಕರದಂಟಿನ ನಾಡಲ್ಲಿ ಕನ್ನಡ ಕಂಪು ಹರಡಿದೆ. ನಗರದಲ್ಲಿ ಎಲ್ಲಿ ನೋಡಿದಲ್ಲಿ ಕನ್ನಡ ಬಾವುಟಗಳ ಹಾರಾಟದ ಜೊತೆಗೆ ಕನ್ನಡಾಭಿಮಾನಿಗಳ ಹರ್ಷ, ಉತ್ಸಾಹ ಮನ ಮುಟ್ಟಿತ್ತು. ಎಲ್ಲೆಡೆ ಸಾಹಿತ್ಯ ಸಮ್ಮೇಳನಕ್ಕೆ ಸ್ವಾಗತ ಕೋರುವ ಕಟೌಟಗಳು ಮುಖ್ಯ ರಸ್ತೆಗಳಲ್ಲಿ ರಾರಾಜಿಸುತ್ತಿದ್ದವು. ಎಲ್ಲಲ್ಲೂ ಕನ್ನಡಮಯ ವಾತಾವರಣ ಸೃಷ್ಠಿಯಾಗಿತ್ತು. ಇಲ್ಲಿಯ ಕನ್ನಡ ಸಾಹಿತ್ಯ ಪರಿಷತ್ತು ಗೋಕಾಕ ವತಿಯಿಂದ ೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ರಾಷ್ಟ್ರ ಧ್ವಜಾರೋಹಣವನ್ನು ವಿಠ್ಠಲ ಹಟ್ಟಿ ನೇರವೇರಿಸಿದರು. ನಾಡ ಧ್ವಜಾರೋಹಣವನ್ನು ಕಸಾಪ ಜಿಲ್ಲಾಧ್ಯಕ್ಷೆ …

Read More »

ಕನ್ನಡ ಮೃದುವಾದ ಭಾಷೆ. ಕನ್ನಡ ನೆಲದಲ್ಲಿ ಹುಟ್ಟಿರುವದು ನಮ್ಮ ಸೌಭಾಗ್ಯ – ಸಚಿವ ರಮೇಶ ಜಾರಕಿಹೊಳಿ

ಗೋಕಾಕ: ಕನ್ನಡ ಭಾಷೆ ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಕನ್ನಡ ಮೃದುವಾದ ಭಾಷೆ. ಹೀಗಾಗಿ ಕನ್ನಡ ಭಾಷೆಯನ್ನು ಅಮೇರಿಕ, ಲಂಡನ್ ದೇಶಗಳ ವಿದೇಶಿಗರು ಅಪ್ಪಿಕೊಳ್ಳುತ್ತಾರೆ. ಕನ್ನಡ ನೆಲದಲ್ಲಿ ಹುಟ್ಟಿರುವದು ನಮ್ಮ ಸೌಭಾಗ್ಯ ಎಂದು ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ಅವರು, ನಗರದ ಎನ್‌ಇಎಸ್ ಶಾಲೆಯ ಆವರಣದಲ್ಲಿ ಹಮ್ಮಿಕೊಂಡ ಗೋಕಾಕ ತಾಲೂಕ ೫ನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂಬೈ ಕರ್ನಾಟಕದಲ್ಲಿ ಗಡಿಭಾಗಗಳಾದ …

Read More »

ಸದಾ ರೈತಪರ ನಾಯಕ ಸಿಎಂ ಬಿ ಎಸ್ ಯಡಿಯೂರಪ್ಪ- ಸಚಿವ ರಮೇಶ ಜಾರಕಿಹೊಳಿ.!

ಯುವ ಭಾರತ ಸುದ್ದಿ,  ಗೋಕಾಕ್: ಸದಾ ರೈತ ಪರ, ಜನಪರ ಕಾಳಜಿ ತೋರುತ್ತಾ ಬರುತ್ತಿರುವ ಹಾಗೂ ಸಮಾಜದ ಸರ್ವ ಜನಾಂಗದ ಅಭಿವೃದ್ಧಿಗೆ ತಮ್ಮನ್ನು ತಾವು ಅರ್ಪಿಸಿಕೊಂಡಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ನೂರು ವರ್ಷ ಸುಖವಾಗಿ ಬಾಳಲಿ ಎಂದು ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ಅವರು, ನಗರದ ತಮ್ಮ ಕಾರ್ಯಾಲಯದಲ್ಲಿ ಭಾರತೀಯ ಜನತಾ ಪಾರ್ಟಿ ಗೋಕಾಕ ನಗರ ಹಾಗೂ ಗ್ರಾಮೀಣ ಮಂಡಲದ ವತಿಯಿಂದ …

Read More »

ಕನ್ನಡ ಸಾಹಿತ್ಯ ಸಮ್ಮೇಳನ ಆಹ್ವಾನಿಸದ ಕಾರಣ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ.!

  ಕನ್ನಡ ಸಾಹಿತ್ಯ ಸಮ್ಮೇಳನ ಆಹ್ವಾನಿಸದ ಕಾರಣ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ.! ಗೋಕಾಕ ತಾಲೂಕ ೫ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಈ ಹಿಂದೆ ಹಿರಿಯ ಸಾಹಿತಿ ಹಾಗೂ ನಿಕಟಪೂರ್ವ ಸಮ್ಮೇಳನ ಅಧ್ಯಕ್ಷ ಮಹಾಲಿಂಗ ಮಂಗಿ ಹಾಗೂ ಸಂಗಡಿಗರು, ಕನ್ನಡ ಹೋರಾಟಗಾರರಾದ ಕೆಂಪಣ್ಣ ಚೌಕಾಶಿ, ರೇಹಮಾನ ಮೋಕಾಶಿ, ಅಯೂಬ ಪೀರಜಾದೆ, ಪ್ರಶಾಂತ ಅರಳಿಕಟ್ಟಿ ಅವರು ತಾಲೂಕ ಕನ್ನಡ ಸಾಹಿತ್ಯ ಪರಿಷತ ಮತ್ತು ಸ್ವಾಗತ ಸಮಿತಿ ವಿರುದ್ಧ ಹರಿಹಾಯ್ದಿದ್ದರು. ಈಗ ಶಿಕ್ಷಣ …

Read More »

ಸಾಹಿತ್ಯ ಸಮ್ಮೇಳನಕ್ಕೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸುವುದಾಗಿ ಕನ್ನಡಪರ ಸಂಘಟನೆಗಳ ಎಚ್ಚರಿಕೆ- ರಾಜ್ಯಾಧ್ಯಕ್ಷ ಕೆಂಪಣ್ಣ ಚೌಕಾಶಿ..!!

ಸಾಹಿತ್ಯ ಸಮ್ಮೇಳನಕ್ಕೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸುವುದಾಗಿ ಕನ್ನಡಪರ ಸಂಘಟನೆಗಳ ಎಚ್ಚರಿಕೆ- ರಾಜ್ಯಾಧ್ಯಕ್ಷ ಕೆಂಪಣ್ಣ ಚೌಕಾಶಿ..!! ಯುವ ಭಾರತ ಸುದ್ದಿ, ಗೋಕಾಕ್ :  27 ರಂದು ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಗೋಕಾಕ ಗ್ರಾಮೀಣ ಭಾಗದ ಕನ್ನಡ ಪರ ಸಂಘಟನೆಗಳು ಘಟಪ್ರಭಾ ನಗರದಲ್ಲಿ ಗುರುವಾರ ಸಂಜೆ ಸಭೆ ಸೇರಿ ತೀವ್ರ ವಿರೊಧ ವ್ಯಕ್ತ ಪಡಿಸಿದ್ದರು. ಈ ಸಭೆಯನ್ನು ಉದ್ದೇಶಿಸಿ ಮಾತಾನಾಡಿದ ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಕೆಂಪಣ್ಣ ಚೌಕಾಶಿ ಅವರು …

Read More »

ಮನೆ ಮನೆಗೆ ಗಂಗೆ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ.!

ಗೋಕಾಕ: ಪೈಪಲೈನ್ ಮೂಲಕ ೧೨೪೨ ಮನೆಗಳಿಗೆ ಕುಡಿಯುವ ನೀರಿನ ಸೌಕರ್ಯ ತಲುಪಲಿದ್ದು, ಈ ಯೋಜನೆಗಾಗಿ ಒಂದು ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಇತ್ತೀಚೆಗೆ ತಾಲೂಕಿನ ಕೌಜಲಗಿಯಲ್ಲಿ ಜರುಗಿದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನೆರವೇರಿಸಿ ಮಾತನಾಡಿದ ಅವರು, ಮನೆ ಮನೆಗೆ ಗಂಗೆ ಎಂಬ ವಿನೂತನ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದ್ದು, ಇದನ್ನು ಗ್ರಾಮಸ್ಥರು ಸದುಪಯೋಗಪಡಿಸಿಕೊಳ್ಳುವಂತೆ ಕೋರಿದರು. ಈಗಾಗಲೇ ಜಲಜೀವನ ಮಿಷನ್ …

Read More »

ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಜಿಲ್ಲಾ ಪ್ರವಾಸ.!

ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಜಿಲ್ಲಾ ಪ್ರವಾಸ.!   ಯುವ ಭಾರತ ಸುದ್ದಿ, ಗೋಕಾಕ್: ಜಲ ಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಫೆ.೨೭ ರಿಂದ ಮಾ.೨ ರ ವರಗೆ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಫೆ.೨೭ ರಂದು ೧೦ ಗಂಟೆಗೆ ನಗರದ ಎನ್‌ಇಎಸ್ ಶಾಲಾ ಆವರಣದಲ್ಲಿ ನಡೆಯಲಿರುವ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು, ಸಂಜೆ ನಗರದಲ್ಲಿ ವಾಸ್ತವ್ಯ ಮಾಡಲಿದ್ದಾರೆ. …

Read More »

ಕೇಂದ್ರ ಸರಕಾರದ ವಿರುದ್ಧ ಕಾಂಗ್ರೇಸ್ ಪ್ರತಿಭಟನೆ.!

ಗೋಕಾಕ: ಕಳೆದ ಮೂರು ತಿಂಗಳಿನಿAದ ಕೃಷಿ ವಿರೋಧಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವAತೆ ಆಗ್ರಹಿಸಿ ದೆಹಲಿಯ ಗಡಿಗಳಲ್ಲಿ ಕೂಳಿತಿರುವ ರೈತರ ಬಗ್ಗೆ ತಾತ್ತಸಾರ ಭಾವನೆ ತಾಳಿರುವ ಮತ್ತು ದಿನನಿತ್ಯ ಏರಿಕೆಯಾಗುತ್ತಿರುವ ತೈಲಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಯ ಬಗ್ಗೆ ಕಾಳಜಿ ಮಾಡದಿರುವ ಕೇಂದ್ರ ಸರಕಾರದ ನೀತಿಯನ್ನು ವಿರೋಧಿಸಿ ನಗರದಲ್ಲಿ ಗೋಕಾಕ ಮತ್ತು ಅರಭಾವಿ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು. ಬುಧವಾರದಂದು ನಗರದ ಸಂಗೋಳ್ಳಿ ರಾಯಣ್ಣ ವೃತ್ತದಿಂದ …

Read More »