Breaking News

ಬಡ ಜನತೆಗೆ ಅನ್ನದಾತ ಪ್ರಭು ಬಂಡಿಗಣಿ ದಾನೇಶ್ವರ ಶ್ರೀಗಳು!!

Spread the love

ಬಡ ಜನತೆಗೆ ಅನ್ನದಾತ ಪ್ರಭು ಬಂಡಿಗಣಿ ದಾನೇಶ್ವರ ಶ್ರೀಗಳು!!

 

ಯುವ ಭಾರತ ಸುದ್ದಿ ಗೋಕಾಕ:ಕೊರೋನಾ ಲಾಕ್ ಡೌನ್ ಹಿನ್ನಲೆಯಲ್ಲಿ ಅನಾಥರು, ನಿರ್ಗತಿಕರು, ವಲಸೆ ಕಾರ್ಮಿಕರು ತುತ್ತು ಅನ್ನಕ್ಕೂ ಹಸಿವಿನಿಂದ ಪರದಾಡುವಂತಹ ಪರಿಸ್ಥಿತಿ ನಿರ್ಮಾನವಾಗಿದೆ. ಹೀಗಾಗಿ ಗೋಕಾಕ ಎ ಪಿ ಏಮ್ ಸಿ ಹತ್ತಿರ ಹೊರವಲಯದಲ್ಲಿರುವ, ಹಾಗೂ ಘಟಪ್ರಭಾ ಪಿ ಜಿ ಮಲ್ಲಾಪುರ,ಅಂಕಲಗಿ ಹತ್ತಿರವಿರುವ ದಾಸನಟ್ಟಿ ಸೇರಿದಂತೆ ಅನೇಕ ಊರುಗಳಲ್ಲಿರುವ ಅಲೆಮಾರಿ,ಬುಡಕಟ್ಟು ಜನಾಂಗದವರ ಹಸಿವನ್ನು ನಿಗಿಸುವ ಸಲುವಾಗಿ ಬಾಗಲಕೋಟ ಜಿಲ್ಲೆಯ ರಬಕವಿ, ಬನಹಟ್ಟಿ ತಾಲೂಕಿನ ಸುಕ್ಷೇತ್ರ ಬಂಡಿಗಣಿಯ ದಾಸೋಹ ರತ್ನ ಚಕ್ರವರ್ತಿ ದಾನೇಶ್ವರ ಶ್ರೀಗಳಿಂದ ಅನ್ನ ನೀಡುವ ಮಹತ್ತರ ಪುಣ್ಯದ ಕೆಲಸವನ್ನು ಲಾಕ್ ಡೌನ್ ಆದಾಗಿನಿಂದಲೂ ನಿರಂತರ ಅಲೆಮಾರಿ ಜನರಿದ್ದ ಸ್ಥಳದಲ್ಲಿಯೇ ಊಟದ ವ್ಯವಸ್ಥೆ ನಡಿತಾಯಿದೆ. ಕಳೆದ ವರ್ಷವು ಕೂಡಾ ದಾಸೋಹ ನಡಿದಿದೆ.ಲಾಕ್ ಡೌನ್ ಹಿನ್ನಲೆಯಲ್ಲಿ ಕೆಲವರಿಗೆ ನಿತ್ಯ ದುಡಿಮೆ ಮಾಡಿದ್ರೆ ಮಾತ್ರ ಹೊತ್ತಿನ ಊಟ ಸಿಗುತ್ತದೆ. ಸೆಮಿ ಲಾಕ್ ಡೌನ್ ಇರುವದರಿಂದ ಕೆಲಸವಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾನವಾಗಿದೆ.

ಲಾಕ್ ಡೌನ್ ಆದಾಗಿನಿಂದಲೂ ಬಡ ಜನರು ಹಸಿವಿನಿಂದ ಇರಬಾರದೆಂದು ದಿನಾಲು ಊಟಕ್ಕೆ ರೊಟ್ಟಿ, ಚಿತ್ರಾನ್ನ, ಚಪಾತಿ ಪಲ್ಯ, ಸೇರಿದಂತೆ ವಿವಿಧ ತರಹದ ಅಡುಗೆ ಜೊತೆ ದಿನಸಿ ಕಿಟ್ಗಳನ್ನು ಕೂಡಾ ನೀಡುತ್ತಿದ್ದಾರೆ. ಹಸಿದ ಹೊಟ್ಟೆ ತುಂಬಿಸುವ ಪುಣ್ಯದ ಕೆಲಸದಲ್ಲಿ ತೊಡಗಿರುವದಕ್ಕೆ ಸಾರ್ವಜನಿಕರಿಂದ ದಾನೇಶ್ವರ ಶ್ರೀಗಳಿಗೆ ವ್ಯಾಪಕವಾದ ಮೆಚ್ಚುಗೆ ವ್ಯಕ್ತವಾಗುತ್ತದೆ. ದಾಸೋಹದ ವ್ಯವಸ್ಥೆ ಮಾಡಿಸಿದ ದಾನೇಶ್ವರ ಶ್ರೀಗಳು ಶನಿವಾರ ದಂದು ಮಾತನಾಡಿ, ಇಂತಹ ಕಠಿಣ ಪರಿಸ್ಥಿತಿಯಲ್ಲಿ ಊಟ ನೀಡುವ ಪುಣ್ಯದ ಕೆಲಸ ಮಾಡಲು ಇದೊಂದು ಸುವರ್ಣಾವಕಾಶ ಸದುಪಯೋಗವಾಗಬೇಕು. ನಾವು ಆದ್ಯತ್ಮ ಜೀವಿಗಳು ನನ್ನ ತಾಯಿ ಹಾಗೂ ಅದೃಶ್ಯ ಗುರು ನಂದೇಶನೂ ಹೇಳಿದಂತೆ ನೀನು ದಿನಕ್ಕೆ 2000 ಸಾವಿರ ಜನರಿಗೆ ಊಟ ಮಾಡಿಸಬೇಕು ಅಂದ ಪ್ರಕಾರ ನಾವು ದಾಸೋಹ ಮಾಡುವು ಪದ್ಧತಿ ಅಳವಡಿಸಿಕೊಂಡಿದ್ದೇವೆ. ಬೇರೆಯವರ ಹಸಿವನ್ನು ಕಿವಿಯಿಂದ ಕೇಳಬಾರದು ಆದೇವ ಈದೇವ, ಹಾಗೂ ಪೂಜೆ ಗಿಂತಲೂ ಹಸಿವನ್ನು ನಿಗಿಸುವ ಕಾರ್ಯ ಶ್ರೇಷ್ಠವಾದದ್ದು. ಅಲೆಮಾರಿ, ಬುಡಕಟ್ಟು ಜನ ಸಾದು ಸಂತರಿಗೆ ಬಡವರಿಗೆ ದಾಸೋಹ ಮಾಡಲು ನಾವು ಸದಾ ಸಿದ್ದರಿದ್ದೇವೆ. ಯಾರು ಹಸಿವುನಿಂದ ಬಳಲಬಾರದು ಎಂಬ ನಮ್ಮ ಆಸೆಯಿದೆ.ನಾವು ಭಕ್ತಿಯಿಂದ ಸೇವೆ ಮಾಡಬೇಕು.

ನಾವೆಲ್ಲ ಒಂದೇ ಜಗತ್ತು ನಮ್ಮದು ಎಂಬ ಬಾವನೆವಿರಬೇಕು. ಆಸ್ತಿ ಅಂತಸ್ತು ವಿಚಾರಿಸದೆ ದೇಶಕ್ಕೆ ಆಪತ್ತು ಬಂದರೆ ಕರ್ಮದ ಕೆಲಸವನ್ನು ಬಿಟ್ಟು ಧರ್ಮದ ಕಾರ್ಯ ಸದಾ ಮಾಡಿ ಪುಣ್ಯ ಪಡೆದುಕೊಳ್ಳಬೇಕು. ಧರ್ಮದ ಕೆಲಸ ಮಾಡಿ ಮಾಡದಂತಿರಬೇಕು ಎಂದು ಬಸವಣ್ಣನವರು ಹೇಳಿದ್ದಾರೆ.ಬಡವರ ಮೇಲೆ ಪ್ರೀತಿ ತೋರುವ ಮನಸ್ಸಿದ್ದವರಲ್ಲಿ ಶಿವನ ವಾಸವಿರುತ್ತದೆ..ದೇಶದ ಎಲ್ಲಾ ಜನತೆ ಕೊರೋನಾಗೆ ಭಯಪಡದೆ ಸುಳ್ಳು ಸುದ್ದಿಗೆ ಗಮನ ಹರಿಸದೆ ದೇವರ ಧ್ಯಾನ ಮಾಡುತ್ತಾ ಮನೆಯಲ್ಲಿದ್ದು ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿರೆಂದು ಅಲೆಮಾರಿ, ಹಾಗೂ ಸಾರ್ವಜನಿಕರಲ್ಲಿ ವಿನಂತಿಸಿಕೊಂಡರು.


Spread the love

About Yuva Bharatha

Check Also

ಅಭ್ಯರ್ಥಿ ಯಾರೇ ಆದರೂ ಕಾರ್ಯಕರ್ತರು ಅವರನ್ನು ಗೆಲ್ಲಿಸಿ-ಸಂಜಯ ಪಾಟೀಲ.!

Spread the loveಅಭ್ಯರ್ಥಿ ಯಾರೇ ಆದರೂ ಕಾರ್ಯಕರ್ತರು ಅವರನ್ನು ಗೆಲ್ಲಿಸಿ-ಸಂಜಯ ಪಾಟೀಲ.! ಗೋಕಾಕ: ಬಿಜೆಪಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ಮೂರನೇ …

Leave a Reply

Your email address will not be published. Required fields are marked *

6 + 18 =