Breaking News

Yuva Bharatha

ಜತೆಯಾಗಿ ಉತ್ತೀರ್ಣರಾದ ತಾಯಿ-ಮಗಳು !

ಜತೆಯಾಗಿ ಉತ್ತೀರ್ಣರಾದ ತಾಯಿ-ಮಗಳು ! ಯುವ ಭಾರತ ಸುದ್ದಿ ಮಂಗಳೂರು : ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ತಾಯಿ-ಮಗಳು ಪಿಯುಸಿ ಪರೀಕ್ಷೆ ಜತೆಜತೆಗೇ ಪರೀಕ್ಷೆ ಬರೆದು ಪಾಸ್ ಆಗಿದ್ದಾರೆ. ಸುಳ್ಯ ಗೃಹ ರಕ್ಷಕದಳದ ಸಿಬ್ಬಂದಿ ಗೀತಾ ಹಾಗೂ ಅವರ ಪುತ್ರಿ ತ್ರಿಷಾ ಪಾಸ್ ಆದವರು. ಖಾಸಗಿಯಾಗಿ ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದು ಬಿಡುವಿನ ವೇಳೆಯಲ್ಲಿ ಓದಿದ್ದ ಗೀತಾ ಇದೇ ರೀತಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದು ಪಾಸ್ ಆಗಿದ್ದರು.

Read More »

ಹಿಡಕಲ್ ಜಲಾಶಯದಿಂದ ಜಿಆರ್‍ಬಿಸಿ, ಜಿಎಲ್‍ಬಿಸಿ ಹಾಗೂ ಸಿಬಿಸಿ ಕಾಲುವೆಗಳಿಗೆ ನಾಳೆಯಿಂದ 7 ದಿನಗಳವರೆಗೆ ನೀರು ಬಿಡುಗಡೆ : ಶಾಸಕ ಬಾಲಚಂದ್ರ ಜಾರಕಿಹೊಳಿ

ಹಿಡಕಲ್ ಜಲಾಶಯದಿಂದ ಜಿಆರ್‍ಬಿಸಿ, ಜಿಎಲ್‍ಬಿಸಿ ಹಾಗೂ ಸಿಬಿಸಿ ಕಾಲುವೆಗಳಿಗೆ ನಾಳೆಯಿಂದ 7 ದಿನಗಳವರೆಗೆ ನೀರು ಬಿಡುಗಡೆ : ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ ಸುದ್ದಿ ಗೋಕಾಕ : ಹಿಡಕಲ್ ಜಲಾಶಯದಿಂದ ಘಟಪ್ರಭಾ ಎಡದಂಡೆ, ಬಲದಂಡೆ ಹಾಗೂ ಸಿಬಿಸಿ ಕಾಲುವೆಗಳಿಗೆ ನಾಳೆ ದಿ. 22 ರಿಂದ 7 ದಿನಗಳವರೆಗೆ ಕುಡಿಯುವ ನೀರಿನ ಉದ್ಧೇಶಕ್ಕಾಗಿ 2.963 ಟಿಎಂಸಿ ನೀರನ್ನು ಬಿಡುಗಡೆ ಮಾಡಲಾಗುವುದು ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ …

Read More »

ಮೇ ಮೊದಲ ವಾರ SSLC ಫಲಿತಾಂಶ ಸಾಧ್ಯತೆ

ಮೇ ಮೊದಲ ವಾರ SSLC ಫಲಿತಾಂಶ ಸಾಧ್ಯತೆ ಯುವ ಭಾರತ ಸುದ್ದಿ ಬೆಂಗಳೂರು : ಇಂದು ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ, ಇದೀಗ SSLC ಪರೀಕ್ಷೆಯ ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳು ಎದುರು ನೋಡುತ್ತಿದ್ದಾರೆ.ಈ ಫಲಿತಾಂಶ ಮೇ ಮೊದಲ ವಾರದಲ್ಲಿ ಘೋಷಣೆಯಾಗುವ ಸಾಧ್ಯತೆಯಿದೆ. ಮಂಡಳಿಯು ಈಗಾಗಲೇ ಎಸ್‌ಎಸ್‌ಎಲ್‌ಸಿ ಕೀ ಉತ್ತರ ಬಿಡುಗಡೆ ಮಾಡಿದೆ. 2023 ನೇ ಸಾಲಿನ SSLC ಪರೀಕ್ಷೆಯು ಮಾರ್ಚ್ 31 ನೇ ದಿನಾಂಕದಲ್ಲಿ ಶುರುವಾಗಿ ಏಪ್ರಿಲ್ 15 ನೇ …

Read More »

ಪ್ರೇರಣಾ ಪಿ.ಯು.ವಿದ್ಯಾರ್ಥಿಗಳ ಉತ್ತಮ ಸಾಧನೆ

ಪ್ರೇರಣಾ ಪಿ.ಯು.ವಿದ್ಯಾರ್ಥಿಗಳ ಉತ್ತಮ ಸಾಧನೆ ಯುವ ಭಾರತ ಸುದ್ದಿ ಬೆಳಗಾವಿ : ನಗರದ ಪ್ರೇರಣಾ ಪದವಿ ಪೂರ್ವ ಮಹಾವಿದ್ಯಾಲಯದ 2022 – 2023 ನೇ ಸಾಲಿನಲ್ಲಿ ದ್ವಿತೀಯ ಪಿ.ಯು ವರ್ಷದಲ್ಲಿ ಅತ್ಯುತ್ತಮ ಫಲಿತಾಂಶವನ್ನು ದಾಖಲಿಸಿದೆ. ವಿಜ್ನಾನ ವಿಭಾಗದಲ್ಲಿ ಶೇಕಡಾ 100% ಹಾಗೂ ವಾಣಿಜ್ಯ ವಿಭಾಗದಲ್ಲಿ ಶೇಕಡಾ 98% ರಷ್ಟು ಪಡೆದು ಗಣನೀಯ ಸಾಧನೆ ಮಾಡಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಭಾರ್ಗವಿ ರಾಜಪುರೋಹಿತ 570 ಅಂಕಗಳನ್ನು ( 95% ) ಪಡೆದು ಪ್ರಥಮ …

Read More »

ರಮೇಶ್ ಜಾರಕಿಹೊಳಿ ಅವರ ಗುರ್ತು ಕಮಲ ಎಂದು ತಾಯಂದಿರಿಗೆ ತಿಳಿಹೇಳಬೇಕು-ರಮೇಶ ಜಾರಕಿಹೊಳಿ.!

ರಮೇಶ್ ಜಾರಕಿಹೊಳಿ ಅವರ ಗುರ್ತು ಕಮಲ ಎಂದು ತಾಯಂದಿರಿಗೆ ತಿಳಿಹೇಳಬೇಕು-ರಮೇಶ ಜಾರಕಿಹೊಳಿ.! ಗೋಕಾಕ: ತಾಲೂಕಿನ ಬೆಣಚಿನಮರಡಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರು ೭ನೇ ಬಾರಿ ಆಯ್ಕೆ ಬಯಸಿ ತಮ್ಮ ಚುನಾವಣಾ ಪ್ರಚಾರವನ್ನು ಪಾದಯಾತ್ರೆ ಮಾಡುವ ಮೂಲಕ ಮತಯಾಚನೆ ಮಾಡಿದರು. ಶಾಸಕ ರಮೇಶ ಜಾರಕಿಹೊಳಿ ಅವರನ್ನು ನೂರಾರು ಗ್ರಾಮಸ್ಥರು ಪಾಲ್ಗೊಂಡು ಶಾಸಕರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಶಾಸಕರು ಸಂಗೋಳ್ಳಿ ರಾಯಣ್ಣ ಮೂರ್ತಿಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು. ನಂತರ …

Read More »

ಈಶ್ವರಪ್ಪಗೆ ಮೋದಿ ಕರೆ ಮಾಡಿ ಹೇಳಿದ್ದೇನು ?

ಈಶ್ವರಪ್ಪಗೆ ಮೋದಿ ಕರೆ ಮಾಡಿ ಹೇಳಿದ್ದೇನು ? ಶಿವಮೊಗ್ಗ : ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಕರ್ನಾಟಕ ಚುನಾವಣಾ ರಾಜಕೀಯಕ್ಕೆ ಸ್ವಯಂ ನಿವೃತ್ತಿ ಘೋಷಣೆ ಮಾಡಿದ್ದು , ಇದೀಗ ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶಂಶಿಸಿದ್ದಾರೆ . ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಈಶ್ವರಪ್ಪ ಅವರಿಗೆ ದೂರವಾಣಿ ಕರೆ ಮಾಡಿ ಅವರ ರಾಜಕೀಯ ಪ್ರಬುದ್ಧ ನಡೆಯನ್ನು ಪ್ರಶಂಶಿಸಿದರು. ಪಕ್ಷ ಸದಾ ನಿಮ್ಮ ಜೊತೆ ಇದೆ ಎಂದು …

Read More »

PUC ಫಲಿತಾಂಶದಲ್ಲಿ ಬೆಳಗಾವಿಗೆ ಎಷ್ಟನೇ ಸ್ಥಾನ ಗೊತ್ತೇ ?

PUC ಫಲಿತಾಂಶದಲ್ಲಿ ಬೆಳಗಾವಿಗೆ ಎಷ್ಟನೇ ಸ್ಥಾನ ಗೊತ್ತೇ ? ಯುವ ಭಾರತ ಸುದ್ದಿ ಬೆಂಗಳೂರು: 2022-23ನೇ ಸಾಲಿನ ದ್ವಿತೀಯ ಪಿಯು ಫಲಿತಾಂಶ ಪ್ರಕಟವಾಗಿದ್ದು ಈ ಸಲ ಬೆಳಗಾವಿ ಜಿಲ್ಲೆ 25 ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಇದು ಜಿಲ್ಲೆಯ ಶೈಕ್ಷಣಿಕ ಹಿನ್ನಡೆಯನ್ನು ಎತ್ತಿ ತೋರಿಸಿದೆ. ರಾಜ್ಯದ ಒಟ್ಟು 32 ಜಿಲ್ಲೆಗಳಲ್ಲಿ ಬೆಳಗಾವಿಯ ಈ ಕಳಪೆ ಸಾಧನೆ ಶಿಕ್ಷಣ ಪ್ರೇಮಿಗಳಿಗೆ ಆತಂಕ ಮಾಡಿಸಿದೆ. ರಾಜ್ಯದಲ್ಲಿ ಈ ಬಾರಿ ಒಟ್ಟು 7,02,067 ವಿದ್ಯಾರ್ಥಿಗಳು ಪರೀಕ್ಷೆಗೆ …

Read More »

ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟ : ದ.ಕ. ಪ್ರಥಮ

ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟ : ದ.ಕ. ಪ್ರಥಮ ಯುವ ಭಾರತ ಸುದ್ದಿ ಬೆಂಗಳೂರು : ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದೆ.ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ಯಾದಗಿರಿ ಜಿಲ್ಲೆ ಕೊನೆಯ ಸ್ಥಾನ ಪಡೆದುಕೊಂಡಿದೆ. ಉಡುಪಿ ದ್ವಿತೀಯ, ಕೊಡಗು ತೃತೀಯ, ಉತ್ತರ ಕನ್ನಡ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.

Read More »

ಪಕ್ಷ ವಹಿಸುವ ಯಾವುದೇ ಕೆಲಸವನ್ನು ನಿಷ್ಠೆಯಿಂದ ಮಾಡುತ್ತೇನೆ – ಡಾ.ಸೋನಾಲಿ ಸರ್ನೋಬತ್

ಪಕ್ಷ ವಹಿಸುವ ಯಾವುದೇ ಕೆಲಸವನ್ನು ನಿಷ್ಠೆಯಿಂದ ಮಾಡುತ್ತೇನೆ – ಡಾ.ಸೋನಾಲಿ ಸರ್ನೋಬತ್ ಬೆಳಗಾವಿ: ಮೇ 10ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ವಹಿಸುವ ಯಾವುದೇ ಕೆಲಸವನ್ನು ನಿಷ್ಠೆಯಿಂದ ಮಾಡುವುದಾಗಿ ಖಾನಾಪುರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಬಿಜೆಪಿ ಬೆಳಗಾವಿ ಜಿಲ್ಲಾ ಗ್ರಾಮೀಣ ಮಹಿಳಾ ಮೋರ್ಚಾ ಉಪಾಧ್ಯಕ್ಷೆ, ಹಿರಿಯ ಸಾಮಾಜಿಕ ಕಾರ್ಯಕರ್ತೆ ಡಾ.ಸೋನಾಲಿ ಸರ್ನೋಬತ್ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ನಾನು ಖಾನಾಪುರ ಕ್ಷೇತ್ರದಿಂದ ಸ್ಪರ್ಧಿಸಲು ಟೆಕೆಟ್ ಕೇಳಿದ್ದೆ. ಇಡೀ …

Read More »

ಭೀಕರ ಅಪಘಾತಕ್ಕೆ ರೈತರಿಬ್ಬರ ಬಲಿ

ಭೀಕರ ಅಪಘಾತಕ್ಕೆ ರೈತರಿಬ್ಬರ ಬಲಿ ಯುವ ಭಾರತ ಸುದ್ದಿ ಖಾನಾಪುರ : ಗುರುವಾರ ಮಧ್ಯರಾತ್ರಿ ವಾಹನ ಹರಿದು ಇಬ್ಬರು ರೈತರು ಬಲಿಯಾದ ಘಟನೆ ಗೋದೊಳ್ಳಿ ಗ್ರಾಮದ ಬಳಿ ಸಂಭವಿಸಿದೆ. ಗೋಧೋಳಿ ಗ್ರಾಮದ ಮಹಾಬಲೇಶ್ವರ ಶಿಂಧೆ( 65), ಪುಂಡಲಿಕ್ ರೆಡೇಕಾರ (72 ) ಮೃತಪಟ್ಟಿದ್ದಾರೆ. ಪುಂಡಲಿಕ್ ಅವರ ಹಿರಿಯ ಸಹೋದರ ಕೃಷ್ಣರೇಡೆಕರ (74)ಗಾಯಗೊಂಡು ಬೆಳಗಾವಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನೊಬ್ಬರು ಮಂಜುನಾಥ (47) ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಗೋದೊಳ್ಳಿ ಗ್ರಾಮದ ನಾಲ್ವರು ರೈತರು …

Read More »