Breaking News

ಆರೋಗ್ಯ ತಪಾಸಣಾ ಶಿಬಿರ ಸದ್ಭಳಕೆಗೆ ಬಿ.ಎಸ್.ಪಾಟೀಲ ಯಾಳಗಿ ಸಲಹೆ

Spread the love

ಆರೋಗ್ಯ ತಪಾಸಣಾ ಶಿಬಿರ ಸದ್ಭಳಕೆಗೆ ಬಿ.ಎಸ್.ಪಾಟೀಲ ಯಾಳಗಿ ಸಲಹೆ

ಯುವ ಭಾರತ ಸುದ್ದಿ ದೇವರಹಿಪ್ಪರಗಿ:
ಗ್ರಾಮೀಣ ಜನರ ಆರೋಗ್ಯ ಜಾಗೃತಿಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ. ಬಡ ಜನತೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದೆ ತಜ್ಞ ವೈದ್ಯರು ಲಭ್ಯವಿದ್ದಾಗ ಶಿಬಿರದಲ್ಲಿ ಪಾಲ್ಗೊಂಡು ಉಚಿತ ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಕೆಪಿಸಿಸಿ ಸದಸ್ಯರಾದ ಬಿ ಎಸ್ ಪಾಟೀಲ ಯಾಳಗಿ ಹೇಳಿದರು.

ಮತಕ್ಷೇತ್ರದ ಕಲಕೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ರವಿವಾರದಂದು ಆಯೋಜಿಸಲಾಗಿದ್ದ ಡಾ.ಶಂಕರಗೌಡ ಪಾಟೀಲ ಯಾಳಗಿ ಆರೋಗ್ಯ ಟ್ರಸ್ಟ್ ವಿಜಯಪುರ, ಬಿ ಎಸ್ ಪಾಟೀಲ ಯಾಳಗಿ ಅವರ ಅಭಿಮಾನಿ ಬಳಗ ದೇವರಹಿಪ್ಪರಗಿ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ವಿಜಯಪುರದ ಹೆಸರಾಂತ ವೈದ್ಯರಿಂದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಉಚಿತ ಔಷಧಿ ವಿತರಣೆ ಹಾಗೂ ಪ್ರಸಾದ ವ್ಯವಸ್ಥೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕಳೆದ ಬಾರಿ ಚುನಾವಣೆಯಲ್ಲಿ ನನಗೆ ನೀಡಿದ ಅಭೂತಪೂರ್ವ ಬೆಂಬಲಕ್ಕೆ ಋಣಿಯಾಗಿದ್ದೇನೆ. ಪರಾಬವಗೊಂಡರು ನಿರಂತರ ಕ್ಷೇತ್ರದ ಜನರ ಸಂಪರ್ಕ ಸೇವೆಯಲ್ಲಿ ನಿರತನಾಗಿದ್ದೇನೆ ಹಾಗೂ ನಮ್ಮ ಚಿರಂಜೀವಿಯಾದ ಡಾ ಶಂಕರಗೌಡ ನೇತೃತ್ವದಲ್ಲಿ ಕೋವಿಡ್ ಸಮಯದಲ್ಲಿ ಹಾಗೂ ಬೇಸಿಗೆ ಸಮಯದಲ್ಲಿ ಹಲವಾರು ಜನರಿಗೆ ಅನುಕೂಲ ಕಲ್ಪಿಸಿದ್ದಾರೆ, ಹೆಸರಾಂತ ವೈದ್ಯರ ತಂಡದ ಜೊತೆ ಈ ಭಾಗದ ಜನರಿಗೆ ಆರೋಗ್ಯ ಶಿಬಿರದ ಮೂಲಕ ಸೇವೆ ಕಲ್ಪಿಸುವ ಉದ್ದೇಶ ಹೊರತು ಇದರಲ್ಲಿ ರಾಜಕೀಯ ಇಲ್ಲ, ಮುಂಬರುವ ದಿನಗಳಲ್ಲಿ ನಿಮ್ಮ ಬೆಂಬಲವಿದ್ದರೆ ಇನ್ನು ಹೆಚ್ಚಿನ ಸೇವೆ ಮಾಡಲು ಬಯಸುತ್ತೇನೆ ಎಂದು ಹೇಳಿದರು.
ಶಿಬಿರದ ನೇತೃತ್ವ ವಹಿಸಿ ಮಾತನಾಡಿದ ಖ್ಯಾತ ಹೃದಯ ರೋಗ ತಜ್ಞರಾದ ಡಾ ಶಂಕರಗೌಡ ಪಾಟೀಲ ಯಾಳಗಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಬಿಪಿ, ಶುಗರ್‌ ಹಾಗೂ ಹೃದ್ರೋಗ ಕಾಯಿಲೆಗಳು ಸಾಮಾನ್ಯವಾಗಿವೆ. ಇವು ಶ್ರೀಮಂತ ಖಾಯಿಲೆಗಳಾಗಿದ್ದು, ಬಡಜನರು ಆರ್ಥಿಕವಾಗಿ ಭರಿಸಲು ಅಸಾಧ್ಯ. ಗ್ರಾಮೀಣ ಭಾಗದ ಹಾಗೂ ನಗರ ಪ್ರದೇಶದ ಬಡ ಜನರಿಗೆ ಇಂತಹ ಉಚಿತ ಶಿಬಿರಗಳ ಮೂಲಕವೇ ಚಿಕಿತ್ಸೆಗೊಳಪಡಿಸಿದಾಗ ಮಾತ್ರ ಅವರನ್ನು ಸಂಕಷ್ಟದಿಂದ ಪಾರು ಮಾಡಲು ಸಾಧ್ಯ. ನಾನು ಕೂಡ ಗ್ರಾಮೀಣ ಹಳ್ಳಿ ಹಿನ್ನೆಲೆಯಿಂದ ಬಂದಿದ್ದೇನೆ. ಬಡತನದ ಪರಿಚಯವೂ ನನಗೆ ಇದ್ದು ಒಂದು ಉನ್ನತ ಸ್ಥಾನದ ಹೊಣೆ ಹೊಂದಿದ ಮೇಲೆ ತಂದೆಯವರ ಮಾರ್ಗದರ್ಶನದಲ್ಲಿ ಬಡ ಜನರ ಸೇವೆಯನ್ನು ಅವರ ಋಣವನ್ನು ಈ ರೀತಿಯ ಆರೋಗ್ಯ ಶಿಬಿರಗಳ ಮೂಲಕವೇ ತೀರಿಸಲು ಸಾಧ್ಯ ಎಂಬುದನ್ನು ಅರಿತಿದದೇನೆ, ಶಿಬಿರದಲ್ಲಿ ಸುಮಾರು 1300ಕ್ಕೂ ಹೆಚ್ಚು ಜನ ಭಾಗವಹಿಸಿ ಶಿಬಿರದ ಸದುಪಯೋಗ ಪಡಿಸಿಕೊಂಡರು ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ಷ ಬ್ರ ಪಂಚರಂಗಿ ಸಂಸ್ಥಾನ ಗದ್ದಗಿ ಮಠದ ಮಡಿವಾಳ ಶಿವಾಚಾರ್ಯರು ಮಾತನಾಡಿ ಸರಳ ಸಜ್ಜನಿಕೆಯ ರಾಜಕಾರಣಿಗಳಾದ ಬಿ.ಎಸ್. ಪಾಟೀಲ್ ಯಾಳಗಿ ದಂಪತಿಗಳು ಹಾಗೂ ಡಾ ಶಂಕರಗೌಡರು ತಂದೆಯವರಂತೆ ಸಾಮಾಜಿಕ ಕಳಕಳಿ ಬೆಳೆಸಿಕೊಂಡು ಸಮಾಜ ಸೇವೆ ಮಾಡುತ್ತಿದ್ದಾರೆ ಅವರ ಕಾರ್ಯ ಶ್ಲಾಘನೀಯ ಎಂದರು.
ಸಾನಿಧ್ಯ ಧರ್ಮ ಗುರುಗಳಾದ ಅಮ್ರಾ ಮದರಸ ಶಿಕ್ಷಕರಾದ ನಾಶಿರಹುಸೇನ ಇನಾಂದಾರ ಉಮ್ಮರಿ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಡಾ.ವ್ಹಿ.ಕೆ ಜಾಲಹಳ್ಳಿಮಠ,ಮುಖಂಡರುಗಳಾದ ದೇವಿಂದ್ರ ಜಂಬಗಿ, ಅರವಿಂದ ಬೇನಾಳ, ಕೆ.ಎಸ್.ವಲ್ಲಿಬಾವಿ,ದರಸಮಹ್ಮದ ಮುಲ್ಲಾ, ಡಾ.ಎಂ.ಎಂ. ಗುಡ್ನಾಳ,ಯಮನೂರಿ ಕುಲಕರ್ಣಿ,ಜಾಹಾಂಗೀರ ಶಿರಸಗಿ, ಬಾಪು ದೇಸಾಯಿ, ದಾವಲಸಾಬ ನಾಯ್ಕೋಡಿ, ಪ್ರಕಾಶ ಪೂಜಾರಿ, ಬಾಬು ಮೇಲಿನಮನಿ, ದೇವೇಂದ್ರ ಎಸ್ ತಳ್ಳೊಳ್ಳಿ, ಶಂಕ್ರಪ್ಪ ಬಂಗರ ಗೊಂಡ, ಸಿದ್ದಲಿಂಗಯ್ಯ ಬಡಿಗೇರ,ಇಂತಿಯಾಜ ಮುಲ್ಲಾ, ಮೈನುದ್ದೀನ್ ಮನಿಯರ್, ಡಾ.ಹಸನ್ ನಾಗಾವಿ, ಶಫೀಕ್ ಸಿಪಾಯಿ ಸೇರಿದಂತೆ ಶಿಬಿರದಲ್ಲಿ ಭಾಗವಹಿಸಿದ ವೈದ್ಯರ ತಂಡ, ಗ್ರಾಮದ ಪ್ರಮುಖರು ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಇತರರು ಉಪಸ್ಥಿತರಿದ್ದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

7 − 3 =