ಖಾಕಿಗೆ ಬಾಯ್ ಖಾದಿಗೆ ಜೈ ಹೇಳಿದ ಬಸವರಾಜ ಬೀಸನಕೊಪ್ಪ !
ಯುವ ಭಾರತ ಸುದ್ದಿ ಬೆಳಗಾವಿ :
ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚುನಾವಣೆಗೆ ಸ್ಪರ್ಧೆ ನಡೆಸುತ್ತಾರೆ ಎಂಬ ಊಹಾಪೋಹಾ ಹರಡಿತ್ತು. ಅದೀಗ ನಿಜವಾಗಿದೆ. ಅಥಣಿ ಮತಕ್ಷೇತ್ರದಲ್ಲಿ ಈ ಬಾರಿ ಅಧಿಕಾರಿಯೊಬ್ಬರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.
ಖಾಕಿಗೆ ಬಾಯ್ ಹೇಳಿ ಖಾದಿಗೆ ಜೈ ಹೇಳಿದ್ದಾರೆ ಡಾಕ್ಟರ್ ಬಸವರಾಜ ಬೀಸನಕೊಪ್ಪ. ಇವರು ಮೂಲತಃ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸವಸುದ್ದಿ ಗ್ರಾಮದವರು. ಇವರ ತಂದೆ ಭೀಮಪ್ಪ. ತಾಯಿ ಸರೋಜನಿ. ಇವರ ತಂದೆ-ತಾಯಿಗೆ ಮೊದಲನೇ ಮಗನಾಗಿದ್ದು ಇವರಿಗೆ ಇಬ್ಬರು ಸಹೋದರಿಯರು ಕೂಡಾ ಇದ್ದಾರೆ. ಇವರು ಒಂದು ಸಾಮಾನ್ಯ ಬಡ ಕುಟುಂಬದಿಂದ ಬಂದವರಾಗಿದ್ದಾರೆ. ಇವರಿಗೆ ಜನರ ಸೇವೆ ಮಾಡುವುದರಲ್ಲಿ ಹೆಚ್ಚಿನ ಆಸಕ್ತಿ ಇರುವುದರಿಂದ ಇವರ ಖಾಕಿಗೆ ಬಾಯ್ ಹೇಳಿದ್ದಾರೆ.
ಇವರು ವಿಜಯಪುರನಲ್ಲಿನ ಠಾಣೆಯೊಂದರಲ್ಲಿ ಸಿಪಿಐ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಆದರೆ ಜನಸೇವೆಯಲ್ಲಿ ತೊಡಗಲು ಸಿಪಿಐ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ರಾಜಕೀಯಕ್ಕೆ ಇಳಿಯಲು ನಿರ್ಧರಿಸಿದ ನಂತರ ಅವರು ತಮ್ಮ ಮೆಚ್ಚಿನ ಪಕ್ಷದ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಆ ರಾಜಕೀಯ ಪಕ್ಷದ ಜೊತೆ ಈಗಾಗಲೇ ಸಂಪರ್ಕ ಸಾಧಿಸಿರುವ ಇವರು ಬಹುತೇಕ ಆ ರಾಜಕೀಯ ಪಕ್ಷದಿಂದ ಸ್ಪರ್ಧೆ ನಡೆಸುವುದು ಬಹುತೇಕ ಖಚಿತ.
ಇವರ ಸ್ಪರ್ಧೆ ಇದೀಗ ಅಥಣಿ ಮತಕ್ಷೇತ್ರದಲ್ಲಿ ಬಾರಿ ಕುತೂಹಲಕ್ಕೆ ಕಾರಣವಾಗಿದೆ.