Breaking News

ಬೆಳಗಾವಿ ಪೊಲೀಸರ ಕಾರ್ಯಾಚರಣೆ : ಅಂತರರಾಜ್ಯ ವಂಚಕರ ಬಂಧನ

Spread the love

ಬೆಳಗಾವಿ ಪೊಲೀಸರ ಕಾರ್ಯಾಚರಣೆ : ಅಂತರರಾಜ್ಯ
ವಂಚಕರ ಬಂಧನ

ಯುವ ಭಾರತ ಸುದ್ದಿ,  ಬೆಳಗಾವಿ :
ಬೆಳಗಾವಿ ಪೊಲೀಸರು ಅಂತರರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಯಶಸ್ಸು ಸಾಧಿಸಿದ್ದಾರೆ.
ಬೆಳಗಾವಿ ಎಪಿಎಂಸಿ ಪೊಲೀಸ್‌ ಕಾರ್ಯಾಚರಣೆ ಕುಖ್ಯಾತ ಅಂತರರಾಜ್ಯ ವಂಚಕರ ಬಂಧನ ಒಟ್ಟು ರೂ .6,09,000 ಮೌಲ್ಯದ ಬಂಗಾರ , ನಗದು, ಮೋಟರ್‌ ಸೈಕಲ್‌ಗಳ ಜಪ್ತಿ
ಮಾಡಿಕೊಂಡಿದ್ದಾರೆ.
ದಿನಾಂಕ . 29/11/2022 ಎ.ಪಿ.ಎಂ.ಸಿ ಪೊಲೀಸ್ ಠಾಣೆಯ ಹದ್ದಿಯ ಮುರಳೀಧರ ಕಾಲನಿಯ ಸೋಮಲಿಂಗ ಅಮ್ಮಣಗಿ , ರವರ ಎ.ಟಿ.ಎಮ್ ಕಾರ್ಡನ್ನು ಬದಲಾಯಸಿಕೊಂಡು ಅವರ ಎ.ಟಿ.ಎಮ್ ಕಾರ್ಡದಿಂದ 4,03,789 / – ರೂಗಳನ್ನು ತೆಗೆದುಕೊಂಡ ಮೋಸ ಮಾಡಿದ ಬಗ್ಗೆ ಎ.ಪಿ.ಎಮ್.ಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನ ಹಾಗೂ ಎಸಿಪಿ ಮಾರ್ಕೆಟ್ ಉಪವಿಭಾಗ ಬೆಳಗಾವಿ ಇವರ ಮಾರ್ಗದರ್ಶದಲ್ಲಿ ಹಾಗೂ ರಮೇಶ ಸಿ ಅವಜಿ , ಪಿಐ ರವರ ನೇತೃತ್ವದಲ್ಲಿ ಸಿಬ್ಬಂದಿಯವರ ತಂಡ ದಿನಾಂಕ : 09-03-2023 ರಂದು ಇಬ್ಬರು ಆರೋಪಿತರ ಪತ್ತೆ ಮಾಡಿದ್ದು . 1 ) ಅಮೋಲ್ ಭಗವನ್ ಶೆಂಡೆ , ಸಾ : ನೇಸರಿ , ತಾ : ಗಡಹಿಂಗ್ಲಜ್ ಜಿಲ್ಲಾ : ಕೊಲ್ಲಾಪುರ 2 ) ಶ್ರವಣ ಸತೀಶ ಮಿನಜಗಿ , ಸಾನ ಕೇದಾರನಾಥ ನಗರ , ಎಮ್‌ಐಡಿಸಿ ತಾ : ಜಿ : ಸೊಲ್ಲಾಪುರ ಇವರನ್ನು ದಸ್ತಗಿರಿ ಮಾಡಿ ಅವರಿಂದ 1 ) 1,10,00 / – ರೂ ಮೌಲ್ಯದ 20 ಗ್ರಾಂ ಬಂಗಾರದ ಆಭರಣಗಳು , 2 ) ನಗದು ಹಣ 1.39,000 / – 3 ) 3 ] ಒಟ್ಟು ರೂ .3.60.000 ಮೌಲ್ಯದ 02 ಮೋಟಾರು ಸೈಕಲ್‌ ಹೀಗೆ ಒಟ್ಟು 6,09,000 / – ರೂ ಕಿಮ್ಮತ್ತಿನವುಗಳನ್ನು ವಶಪಡಿಸಿಕೊಂಡು ಆರೋಪಿತರ ವಿರುದ್ಧ ಕ್ರಮ ಕೈಗೊಂಡಿದ್ದು , ತನಿಖೆ ಮುಂದುವರೆದಿದೆ.

ಈ ಪ್ರಕರಣವನ್ನು ಪತ್ತೆ ಮಾಡಿ ಆರೋಪಿತರನ್ನು ಬಂಧಿಸುವಲ್ಲಿ ಶ್ರಮಿಸಿದ ಪಿಐ ಎಪಿಎಂಸಿ ಸಿಬ್ಬಂದಿಯವರ ತಂಡಕ್ಕೆ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿ ಶ್ಲಾಘಿಸಿದ್ದಾರೆ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

1 × two =