Breaking News

ಅಮಾನತುಗೊಂಡಿರುವ ಪಿಡಿಒ ಹಿರೇಮಠ ಕರ್ತವ್ಯಕ್ಕೆ ಹಾಜರಾಗಲು ಲಾಭಿ..!!

Spread the love

ಅಮಾನತುಗೊಂಡಿರುವ ಪಿಡಿಒ ಹಿರೇಮಠ ಕರ್ತವ್ಯಕ್ಕೆ ಹಾಜರಾಗಲು ಲಾಭಿ..!!

ಪಿಡಿಒ ಶ್ರೀದೇವಿ ಹಿರೇಮಠ

 

ಯುವ ಭಾರತ ಸುದ್ದಿ  ಬೆಳಗಾವಿ: ಅನಧಿಕೃತ ಲೇಔಟ್‌ಗೆ ಸಂಬಂಧಿಸಿದಂತೆ ಸೇವೆಯಿಂದ ಅಮಾನತುಗೊಂಡಿರುವ ಬೆಳಗಾವಿ ತಾಲೂಕಿನ ಸುಳೇಭಾವಿ ಗ್ರಾಮದ ಪಿಡಿಒ ಶ್ರೀದೇವಿ ಹಿರೇಮಠ ಈಗ ಮತ್ತೆ ಕರ್ತವ್ಯಕ್ಕೆ ಹಾಜರಾಗಲು ಎಲ್ಲಿಲ್ಲದ ಲಾಭಿ, ಕಸರತ್ತು ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಮೋದಗಾ ಗ್ರಾಮ ಪಂಚಾಯಿತಿಯಲ್ಲಿ ಹಿರೇಮಠ ಅವರು ಪಿಡಿಒ ಆಗಿದ್ದಾಗ ಅನದಿಕೃತ ಲೇಔಟ್‌ಗಳನ್ನು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸವರಾಜ ನಂದಿಹಳ್ಳಿ ಎಂಬವರು ನೀಡಿದ ದೂರಿನ ಮೇರೆಗೆ ಹಿಂದಿನ ಜಿಪಂ ಸಿಇಒ ಡಾ. ರಾಜೇಂದ್ರ ಕೆ.ವಿ. ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದರು.

ಈಗ ಮತ್ತೆ ಸುಳೇಭಾವಿಯಲ್ಲಿಯೇ ತಮ್ಮ ಕುರ್ಚಿ ಗಟ್ಟಿಗೊಳಿಸಬೇಕೆಂಬ ಹಠಕ್ಕೆ ಬಿದ್ದಿರುವ ಪಿಡಿಒ ಹಿರೇಮಠ ಲಾಭಿ ನಡೆಸಿದ್ದಾರೆ. ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳ ಬಳಿ ಅಂಗಲಾಚುತ್ತಿದ್ದಾರೆ. ಈ ಲಾಭಿಗೆ, ತಾಕತ್ತಿಗೆ ಮಣಿದಿರುವ ಕೆಲವು ಹಿರಿಯ ಅಧಿಕಾರಿಗಳು ಮತ್ತೆ ಹಿರೇಮಠ ಅವರನ್ನು ಕೆ.ಕೆ. ಕೊಪ್ಪ ಗ್ರಾಮ ಪಂಚಾಯಿತಿ ಪಿಡಿಒ ಆಗಿ ನಿಯೋಜಿಸಿದ್ದಾರೆ. ಸುಳೇಭಾವಿಗೂ ಪಿಡಿಒ ಆಗಬೇಕೆಂಬ ಕನಸು ಕಂಡಿರುವ ಹಿರೇಮಠ ಲಾಭಿ ಜೋರು ನಡೆಸಿದ್ದಾರೆ ಎಂಬ ಮಾತುಗಳು ಸುಳೇಭಾವಿ ಮತ್ತು ತಾಲೂಕಿನ ಎಲ್ಲ ಕಡೆಗೂ ಕೇಳಿ ಬರುತ್ತಿದೆ.


Spread the love

About Yuva Bharatha

Check Also

ಮೋದಿಯವರ ಹುಟ್ಟು ಹಬ್ಬದ ನಿಮಿತ್ಯ ಹಮ್ಮಿಕೊಂಡ ಬೃಹತ್ ರಕ್ತದಾನ ಶಿಭಿರದಲ್ಲಿ ಯುವನಾಯಕ ಅಮರನಾಥ ಜಾರಕಿಹೊಳಿ ಅವರಿಂದ ರಕ್ತದಾನ.!

Spread the loveಮೋದಿಯವರ ಹುಟ್ಟು ಹಬ್ಬದ ನಿಮಿತ್ಯ ಹಮ್ಮಿಕೊಂಡ ಬೃಹತ್ ರಕ್ತದಾನ ಶಿಭಿರದಲ್ಲಿ ಯುವನಾಯಕ ಅಮರನಾಥ ಜಾರಕಿಹೊಳಿ ಅವರಿಂದ ರಕ್ತದಾನ.! …

Leave a Reply

Your email address will not be published. Required fields are marked *

thirteen + five =