Breaking News

ಬಿಜೆಪಿ ಕಾಂಗ್ರೆಸ್ ಗೆ ಲಖನ್ ಠಕ್ಕರ್!!

Spread the love

ಲಖನ್ ಜಾರಕಿಹೊಳಿಯ ಅಬ್ಬರದ ಮೆರವಣಿಗೆ

ಶಿವಾಜಿ ಮಹಾರಾಜ್, ಬಸವೇಶ್ವರರಿಗೆ ನಮಸ್ಕರಿಸಿದ ಲಖನ್

ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ

ಬಿಜೆಪಿ- ಕಾಂಗ್ರೆಸ್ ಗೆ ಲಖನ್ ಠಕ್ಕರ್!!

ಬೆಳಗಾವಿ: ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಮುಳುವಾಗಿರುವ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಅವರು ಮಂಗಳವಾರ ಛತ್ರಪತಿ ಶಿವಾಜಿ ಮಹಾರಾಜ ಹಾಗೂ ಜಗಜ್ಯೋತಿ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ನಾಮಪತ್ರ ಸಲ್ಲಿಸಲು ಮೆರವಣಿಗೆ ಮೂಲಕ ಅಪಾರ ಬೆಂಬಲಿಗರೊಂದಿಗೆ ಆಗಮಿಸಿದರು.

ನಗರದ ಶ್ರೀ ಗಣೇಶ ಮಂದಿರದಲ್ಲಿ ಪೂಜೆ ಸಲ್ಲಿಸಿ ನಂತರ ಛತ್ರಪತಿ ಶಿವಾಜಿ ಮಹಾರಾಜರು ಹಾಗೂ ಜಗಜ್ಯೋತಿ ಬಸವೇಶ್ವರ ಮೂರ್ತಿಗೆ ನಮಸ್ಕರಿಸಿ ಮೆರವಣಿಗೆ ನಡೆಸಿದರು. ಅಪಾರ ಬೆಂಬಲಿಗರೊಂದಿಗೆ ರ್ಯಾಲಿ ನಡೆಸುತ್ತಿರುವ ಲಖನ್ ಜಾರಕಿಹೊಳಿ ಶಕ್ತಿ ಪ್ರದರ್ಶಿಸಿದರು.

 

ಗ್ರಾಮ ಪಂಚಾಯತ್, ಪುರಸಭೆ, ಪಟ್ಟಣ ಪಂಚಾಯತ್, ನಗರಸಭೆ, ಮಹಾನಗರ ಪಾಲಿಕೆ ಸೇರಿದಂತೆ ವಿವಿಧ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಹಾಗೂ ಅಪಾರ ಬೆಂಬಲಿಗರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ. ಡೊಳ್ಳು ಕುಣಿತದೊಂದಿಗೆ ಅಬ್ಬರದ ಮೆರವಣಿಗೆ ನಡೆಸುತ್ತಿರುವ ಲಖನ್ ಜಾರಕಿಹೊಳಿಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.


Spread the love

About Yuva Bharatha

Check Also

 “ಪುಟ್ಟ ಹಣತೆ”

Spread the love    “ಪುಟ್ಟ ಹಣತೆ”      ಡಾ||ಶ್ರೀದೇವಿ ಆನಂದ ಪೂಜಾರಿ. ನಾಡು ನುಡಿಯ ಸೇವೆಯನ್ನು ಹರುಷದಿಂದ …

Leave a Reply

Your email address will not be published. Required fields are marked *

14 − eleven =