ಹೆಬ್ಬಾಳಕರ ಕ್ಷೇತ್ರದಲ್ಲಿ ಜಾರಕಿಹೊಳಿ ಸಾಹುಕಾರ್ ಎಂಟ್ರಿ
ಸ್ವಂತ ತಮ್ಮನನ್ನೇ ಸೋಲಿಸಿ, ಲಿಂಗಾಯತ ಅಭ್ಯರ್ಥಿ ಅಂಗಡಿ ಗೆಲ್ಲಿಸಿದ್ದೇನೆ: ಜಾರಕಿಹೊಳಿ!!
ಬೆಳಗಾವಿ: ನನ್ನ ಸ್ವಂತ ತಮ್ಮನನ್ನು ಲೋಕಸಭೆ ಉಪಚುನಾವಣೆಯಲ್ಲಿ ಸೋಲಿಸಿ, ಲಿಂಗಾಯತ ಸಮಾಜದ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ ಮಂಗಲಾ ಅಂಗಡಿಯನ್ನು ಗೆಲ್ಲಿಸಿದ್ದು ನಾನೇ. ಆಗ ಲಿಂಗಾಯತ ಬಗ್ಗೆ ಅಭಿಮಾನ ಎಲ್ಲಿ ಹೋಗಿತ್ತು ಎಂದು ಮಾಜಿ ಸಚಿವ, ಸಾಹುಕಾರ ರಮೇಶ ಜಾರಕಿಹೊಳಿ ಅವರು ಶಾಸಕಿ ಲಕ್ಷ್ಮೀ ಹೆಬ್ಬಾಳಕರಗೆ ತಿರುಗೇಟು ನೀಡಿದರು.
ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಮಿಂಚಿನ ಪ್ರಚಾರ ನಡೆಸುತ್ತಿರುವ ಸಾಹುಕಾರ್ ರಮೇಶ ಜಾರಕಿಹೊಳಿ ಅವರು ಗ್ರಾಪಂ ಸದಸ್ಯರೊಂದಿಗೆ ಸುದೀರ್ಘವಾಗಿ ಮಾತುಕತೆ ನಡೆಸಿ ಹೆಬ್ಬಾಳಕರ ಹೆಸರು ಹೇಳದೇ ಪ್ರತಿಕ್ರಿಯೆ ನೀಡಿದರು.
ಲೋಕಸಭೆ ಉಪಚುನಾವಣೆಯಲ್ಲಿ ನನ್ನ ಸ್ವಂತ ತಮ್ಮನನ್ನು ಸೋಲಿಸಿ, ಲಿಂಗಾಯತ ಸಮಾಜದ ದಿವಗಂತ ಸುರೇಶ ಅಂಗಡಿ ಅವರ ಪತ್ನಿ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿಯನ್ನು ಗೆಲ್ಲಿಸಿದ್ದೇನೆ. ವಿರೋಧಿಗಳು ಲಿಂಗಾಯತ ಈಗೇಕೆ ಬಳಸುತ್ತಿದ್ದಾರೆ. ನನ್ನ ತಮ್ಮನನ್ನು ಸೋಲಿಸುವಾಗ ಲಿಂಗಾಯತ ಸಿಂಪಥಿ ಎಲ್ಲಿ ಹೋಗಿತ್ತು. ಸತೀಶ ಗೆದ್ದಿದ್ದರೆ ಸಂಸದನಾಗಿರುತ್ತಿದ್ದ. ಈಗ ಲಿಂಗಾಯತ ಕಾರ್ಡ್ ಬಳಸಿಕೊಂಡು ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಇದನ್ನು ಮತದಾರರು ಅರ್ಥ ಮಾಡಿಕೊಳ್ಳಬೇಕು. ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸಿದ್ದು ನನ್ನ ತಪ್ಪು ಎಂದು ಜಾರಕಿಹೊಳಿ ಹೇಳಿದರು.
YuvaBharataha Latest Kannada News