Breaking News

ಮತದಾರರೇ ನನಗೆ ಹೈಕಮಾಂಡ್, ನಿನಗೆ ನಾನೇ ಹೈಕಮಾಂಡ್ ಎಂದ ಲಖನ್ ಸಾಹುಕಾರ್!!

Spread the love

 

 

ಮತದಾರರೇ ನನಗೆ ಹೈಕಮಾಂಡ್, ನಿನಗೆ ನಾನೇ ಹೈಕಮಾಂಡ್ ಎಂದ ಲಖನ್ ಸಾಹುಕಾರ್!!


ಬೆಳಗಾವಿ: ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಕ್ಷೇತ್ರದಲ್ಲಿ ಜಾರಕಿಹೊಳಿ ಸಹೋದರರು ಶನಿವಾರ ಒಂದೇ ದಿನ ಎಂಟ್ರಿ ಕೊಟ್ಟಿದ್ದು, ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿಯಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ.

ಒಂದು ಕಡೆಗೆ ಬಿಜೆಪಿ ಪರವಾಗಿ ರಮೇಶ ಜಾರಕಿಹೊಳಿ ಪ್ರಚಾರ ನಡೆಸಿದರೆ, ಇನ್ನೊಂದು ಕಡೆಗೆ ಲಖನ್ ಜಾರಕಿಹೊಳಿ ತಮ್ಮ ಪರ ಮತ ಕೇಳಿ ಕಾಂಗ್ರೆಸ್ ಸೋಲಿಸುವ ಬಗ್ಗೆ ಸಂಕಲ್ಪ ಮಾಡಿದರು.

ಮೊದಲನೇ ಮತ ಬಿಜೆಪಿಗೆ ಹಾಕಿ ಎರಡನೇ ಮತ ಕಾಂಗ್ರೆಸ್ ಸೋಲಿಸಲು ಹಾಕಿ ಅಂತ ರಮೇಶ ಜಾರಕಿಹೊಳಿ ಹೇಳಿದರೆ, ನಂತರ ಲಖನ್ ಜಾರಕಿಹೊಳಿ ಕಾರ್ಯಕ್ರಮದಲ್ಲಿ, ಒಂದನೇ ಮತ ನನಗೆ ಹಾಕಿ, ಎರಡನೇ ಮತ ನಿಮಗೆ ಈಗಾಗಲೇ ಹೇಳಿದ್ದಾರೆ ಎಂದು ಹೇಳಿದರು.
ಮೊದಲಿನಿಂದಲೂ ನೀವು ಸಹಕಾರ ಕೊಡುತ್ತಾ ಬಂದಿದ್ದೀರಿ. ಅಭಿವೃದ್ಧಿ ಆಗಬೇಕಾದರೆ ಯಾರಿಗೆ ಮತ ಹಾಕಬೇಕು ಅನ್ನೋದು ತಿಳಿಸಿ. ಎಲೆಕ್ಷನ್ ಬಂದಾಗ ಕಾಲು ಬೀಳುತ್ತಾರೆ, ಆಮೇಲೆ ನಿಮ್ಮ ಕಾಲು ಜಗ್ಗುತ್ತಾರೆ. ನೀವೆಲ್ಲ ಬುದ್ದಿವಂತ ಮತದಾರರು ಇದ್ದೀರಿ, ಹಿರೇಬಾಗೇವಾಡಿ ಪುಣ್ಯಸ್ಥಳ. ನಾಮಪತ್ರ ವಾಪಸ್ ಪಡೀತಾರೆ ಅಂತ ಅವರೇ ಎಬ್ಬಿಸುತ್ತಾರೆ ಎಂದು ಲಖನ್ ಜಾರಕಿಹೊಳಿ ಹೇಳಿದರು.

ನೀವೇ ನಮಗೆ ಹೈಕಮಾಂಡ್, ನಾವು ನಿಮಗೆ ಹೈಕಮಾಂಡ್, ನಮಗಂತೂ ಯಾವ ಹೈಕಮಾಂಡ್ ಇಲ್ಲ. ಊಹಾಪೋಹಗಳು ಬಹಳ ಎಬ್ಬಿಸುತ್ತಾರೆ ಅದೇ ಅವರ ಬಂಡವಾಳ. ಅದಕ್ಕೆ ಯಾರು ಕಿವಿಗೊಡಬಾರದು, ಅವರದ್ದು ಮಾತೇ ಬಂಡವಾಳ. ನಮಗೆ ಹಾಗೇ ಮಾತನಾಡಲು ಬರಲ್ಲ. ನಾವು ನಿಮ್ಮ ಹಾಗೇ ಹಳ್ಳಿಯಿಂದ ಬಂದವರು ಎಂದು ಪರೋಕ್ಷವಾಗಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಲಖನ್ ಜಾರಕಿಹೊಳಿ ತಿರುಗೇಟು ನೀಡಿದರು.

ಪ್ರಥಮ ಪ್ರಾಶಸ್ತ್ಯದ ಮತ ನೀಡಿ ನನ್ನ ಆರಿಸಿ ತನ್ನಿ ಎಂದ ಲಖನ್ ಜಾರಕಿಹೊಳಿ ಹೇಳಿ ಮತಯಾಚಿಸಿದರು.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜೇಂದ್ರ ಅಂಕಲಗಿ, ಜಿಪಂ ಮಾಜಿ ಸದಸ್ಯ ಶಂಕರಗೌಡ ಪಾಟೀಲ, ದೇಸಾಯಿ ಸೇರಿದಂತೆ ಈ ಭಾಗದ ಪ್ರಮುಖ ನಾಯಕರು, ಗ್ರಾಮ‌ ಪಂಚಾಯತ್ ಸದಸ್ಯರು ಪಾಲ್ಗೊಂಡಿದ್ದರು.‌


Spread the love

About Yuva Bharatha

Check Also

ಶಾಸಕ ರಮೇಶ ಜಾರಕಿಹೊಳಿ ಅವರ ಗೃಹ ಕಚೇರಿಯಲ್ಲಿ ಭಗೀರಥ ಜಯಂತಿ ಆಚರಣೆ.!

Spread the loveಶಾಸಕ ರಮೇಶ ಜಾರಕಿಹೊಳಿ ಅವರ ಗೃಹ ಕಚೇರಿಯಲ್ಲಿ ಭಗೀರಥ ಜಯಂತಿ ಆಚರಣೆ.! ಗೋಕಾಕ: ಶಾಸಕ ರಮೇಶ ಜಾರಕಿಹೊಳಿ …

Leave a Reply

Your email address will not be published. Required fields are marked *

eleven + 15 =