ಕಾರ್ಖಾನೆ ಕಲುಷಿತ ನೀರು ಹಳ್ಳಕ್ಕೆ ಬಿಡುತ್ತಿರುವವರ ಮೇಲೆ ಸೂಕ್ತ ಕ್ರಮ- ಸಚಿವ ಶಂಕರ ಮಣೇನಕೊಪ್ಪ!!
ಯುವ ಭಾರತ ಸುದ್ದಿ ಬೆಳಗಾವಿ: ಸಚಿವ ಉಮೇಶ್ ಕತ್ತಿ ಒಡೆತನದ ಸಕ್ಕರೆ ಕಾರ್ಖಾನೆ ವಿರುದ್ಧ ಗೋಕಾಕ ತಾಲೂಕಿನ ಪಾಮಲದಿನ್ನಿ ಗ್ರಾಮದ ಗ್ರಾಮಸ್ಥರು ಬೆಳಗಾವಿಯ ಸುವರ್ಣ ಗಾರ್ಡನ್ ಟೆಂಟನಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸ್ಥಳಕ್ಕೆ ದೌಡಾಯಿಸಿದ ಸಕ್ಕರೆ ಖಾತರ ಸಚಿವ ಶಂಕರ ಪಾಟೀಲ ಮೇಣನಕೊಪ್ಪ ಅವರ ಮುಂದೆ ಆಹಾರ ಸಚಿವ ಉಮೇಶ್ ಕತ್ತಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಇರುವ ವಿಶ್ವರಾಜ ಶುಗರ್ಸ್ ಹಳ್ಳಕ್ಕೆ ಕಾರ್ಖಾನೆ ತ್ಯಾಜ್ಯ ನೀರು ಸೇರಿ ಜಾನುವಾರುಗಳಿಗೆ ಚರ್ಮ ರೋಗ ಬರ್ತಿದೆ. ಕಳೆದ ನಾಲ್ಕು ವರ್ಷಗಳಿಂದ ಎಲ್ಲ ಅಧಿಕಾರಿಗಳ ಗಮನಕ್ಕೆ ತಂದರು ಸಹ ಯಾವುದೇ ಪ್ರಯೋಜನವಾಗಿಲ್ಲ. ಸಚಿವ ಕತ್ತಿ ಅಧಿಕಾರಿಗಳ ಮೇಲೆ ತಮ್ಮ ಪ್ರಭಾವ ಬೀರಿ ನಮ್ಮ ಕುಟುಂಬಗಳಿಗೆ ವಿಷಪೂರಿತ ನೀರು ಕುಡಿಸುತ್ತಿದ್ದಾರೆ ಎಂದು ಸಚಿವ ಉಮೇಶ್ ಕತ್ತಿ ವಿರುದ್ಧ ಜಾಗನೂರು, ಪಾಮಲದಿನ್ನಿ, ಬಡಿಗವಾಡ, ರಾಜಾಪುರ ಗ್ರಾಮಸ್ಥರು ಸಕ್ಕರೆ ಸಚಿವರ ಮುಂದೆ ತಮ್ಮ ಅಳಲು ತೊಡಗಿಕೊಂಡರು.
ಸಕ್ಕರೆ ಖಾತೆ ಸಚಿವ ಶಂಕರ್ ಪಾಟೀಲ ಮಣೇನಕೊಪ್ಪ ಮಾತನಾಡಿ, ಈಗಾಗಲೇ ಪತ್ರಿಕೆಗಳು ಹಾಗೂ ಮಾಧ್ಯಮಗಳ ಮೂಲಕ ಕಾರ್ಖಾನೆಯಿಂದ ವಿಷಪೂರಿತ ನೀರು ಹರಿಬಿಡುತ್ತಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಸಕ್ಕರೆ ಕಾರ್ಖಾನೆ ನಮ್ಮ ಪಕ್ಷದ ನಾಯಕರದ್ದೇ ಇರಲಿ ಬೇರೆಯಾರದ್ದೇ ಇರಲಿ. ಕಾರ್ಖಾನೆಯ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ನಿರ್ದೇಶನ ನೀಡಲಾಗುವದು ಎಂದು ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ನ್ಯಾಯವಾದಿ ವಿಠ್ಠಲ ಮೆಳವಂಕಿ, ಕಲ್ಲಪ್ಪ ನಿರ್ವಾಣಿ, ಸದಾಶಿವ ಸಂಪಗಾರ, ಭೀಮಶಿ ನಿಲಜಗಿ, ದೀಪಕ ಹಂಜಿ, ಮಲ್ಲಪ್ಪ ಕೌಜಲಗಿ, ಬಸವರಾಜ ಹಂಜಿ ವಿಠ್ಠಲ ಬಂಗಿ, ಲಕ್ಕಪ್ಪ ರಾಜಾಪೂರೆ, ಭೀಮಪ್ಪ ಕಂಗನೊಳಿ, ರಾಜಪ್ಪ ಹುಲಿಕಟ್ಟಿ, ಸಿದ್ದಪ್ಪ ಸಂಪಗಾರ, ಭೀಮಪ್ಪ ನಾಯ್ಕ, ಬಸು ಕವಲಿ, ರಾಮಪ್ಪ ಸಂಪಗಾರ ಸೇರಿದಂತೆ ಅನೇಕರು ಇದ್ದರು.
YuvaBharataha Latest Kannada News
