Breaking News

ವಾಜಪೇಯಿ ಅವರ ಜನ್ಮ ದಿನವನ್ನು ಉತ್ತಮ ಆಡಳಿತ ದಿನವನ್ನಾಗಿ ಆಚರಿಸಲಾಗುತ್ತಿದೆ.-ರಮೇಶ ಜಾರಕಿಹೊಳಿ.!

Spread the love

ವಾಜಪೇಯಿ ಅವರ ಜನ್ಮ ದಿನವನ್ನು ಉತ್ತಮ ಆಡಳಿತ ದಿನವನ್ನಾಗಿ ಆಚರಿಸಲಾಗುತ್ತಿದೆ.-ರಮೇಶ ಜಾರಕಿಹೊಳಿ.!


ಗೋಕಾಕ: ಮಾಜಿ ಪ್ರಧಾನಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಭಾರತದ ಸ್ವಾತಂತ್ರ‍್ಯೋತ್ತರ ರಾಜಕಾರಣದಲ್ಲಿ ಸದಾ ಹಚ್ಚ ಹಸಿರಾಗಿರುವ ಹೆಸರು. ಅವರೊಬ್ಬ ನಿಷ್ಕಳಂಕ ಚಾರಿತ್ರ‍್ಯದ, ಮೇರು ವ್ಯಕ್ತಿತ್ವದ ಮಹಾನ್ ಜನನಾಯಕ. ಅಪ್ರತಿಮ ವಾಗ್ಮಿ, ಅದ್ವಿತೀಯ ಸಂಸತ್ ಪಟು ಹಾಗೂ ಕವಿ ಹೃದಯದ ಭಾವಜೀವಿಯಾಗಿದ್ದರು ಎಂದು ಮಾಜಿ ಸಚಿವ, ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಅವರು, ಶನಿವಾರದಂದು ನಗರದÀ ತಮ್ಮ ಗೃಹ ಕಚೇರಿಯಲ್ಲಿ ಶುಕ್ರವಾರ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಜಯಂತಿ ಅಂಗವಾಗಿ ವಾಜಪೇಯಿ ಅವರ ಭಾವಚಿತ್ರ ಪೂಜಿಸಿ ಪುಷ್ಪನಮನ ಸಲ್ಲಿಸಿ, ಮಾತನಾಡಿದರು.
ವಾಜಪೇಯಿ ಅಧಿಕಾರಾವಧಿಯಲ್ಲಿ ಅನೇಕ ಮಹತ್ವದ ಯೋಜನೆಗಳು ಮತ್ತು ಕಾರ್ಯಕ್ರಮಗಳು ಅನುಷ್ಠಾನಗೊಂಡವು. ವಾಜಪೇಯಿ ಅವರು ಬಿಜೆಪಿಯಲ್ಲಿ ಇದ್ದರೂ ಎಲ್ಲಾ ಪಕ್ಷಗಳಲ್ಲಿ ಉತ್ತಮ ಸ್ನೇಹಿತರನ್ನು ಹೊಂದಿದ್ದ ವಾಜಪೇಯಿ ಅವರು ಅಜಾತಶತ್ರು ಎಂಬ ಖ್ಯಾತಿ ಪಡೆದವರು.. ಪ್ರತಿಯೊಂದು ಪಕ್ಷದ ನಾಯಕರು ವಾಜಪೇಯಿ ಅವರಿಗೆ ಒಡನಾಡಿಗಳಾಗಿದ್ದರು ಎಂದರು.
ಅತ್ಯುತ್ತಮ ಆಡಳಿತದಿಂದ ಅಚ್ಚಳಿಯದ ಛಾಪು ಮೂಡಿಸಿದ್ದ ಮಾಜಿ ಪ್ರಧಾನಿ ವಾಜಪೇಯಿ ಅವರ ಜನ್ಮ ದಿನವನ್ನು ‘ಸುಶಾಸನ ದಿನ’ ಉತ್ತಮ ಆಡಳಿತ ದಿನವನ್ನಾಗಿ ಕೇಂದ್ರ ಸರಕಾರ ಆಚರಣೆ ಮಾಡುವ ಮೂಲಕ ಅವರಿಗೆ ಗೌರವ ಸಮರ್ಪಣೆ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ಮಾಜಿ ಜಿಪಂ ಸದಸ್ಯ ಟಿ ಆರ್ ಕಾಗಲ, ವಿವಿಧ ಮೋರ್ಚಾ ಅಧ್ಯಕ್ಷÄರುಗಳಾದ ಲಕ್ಷö್ಮಣ ಖಡಕಭಾಂವಿ, ರಾಜೇಶ್ವರಿ ಒಡೆಯರ, ರವಿ ಮಡ್ಡೆಪ್ಪಗೋಳ, ಮಂಜು ಪ್ರಭುನಟ್ಟಿ, ಸುಭಾಸ ಸನ್ನತಿಪ್ಪಗೋಳ, ಮಂಜುನಾಥ ಮಾವರಕರ, ಕಿರಣ ಡಮಾಮಗರ ಮುಖಂಡರುಗಳಾದ ದುರ್ಗಪ್ಪ ಶಾಸ್ತಿçಗೊಲ್ಲರ, ಲಕ್ಕಪ್ಪ ತಹಶೀಲದಾರ. ಲಕ್ಷö್ಮಣ ತಳ್ಳಿ, ಲಕ್ಕಪ್ಪ ಬಂಡಿ, ಬಸವರಾಜ ಹಿರೇಮಠ, ಪರಶುರಾಮ ಭಗತ, ಡಾ.ಸೂರ್ಯವಂಶಿ, ರವಿ ಝಂವರ, ಆನಂದ ಖಾನಪ್ಪನವರ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.


Spread the love

About Yuva Bharatha

Check Also

ವಿಕಲತೆ ಹೊಂದಿರುವ ಅಂಗವಿಕಲ ಮಕ್ಕಳನ್ನು ಸಮಾನತೆ ಹಾಗೂ ಮಾನವಿಯತೆಯಿಂದ ನೋಡಿ-ಸರ್ವೋತ್ತಮ ಜಾರಕಿಹೊಳಿ.!

Spread the loveವಿಕಲತೆ ಹೊಂದಿರುವ ಅಂಗವಿಕಲ ಮಕ್ಕಳನ್ನು ಸಮಾನತೆ ಹಾಗೂ ಮಾನವಿಯತೆಯಿಂದ ನೋಡಿ-ಸರ್ವೋತ್ತಮ ಜಾರಕಿಹೊಳಿ.! ಗೋಕಾಕ: ವಿಕಲತೆ ಹೊಂದಿರುವ ಅಂಗವಿಕಲ …

Leave a Reply

Your email address will not be published. Required fields are marked *

3 × two =