Breaking News

ಹಳೆ ಸೇಡಿಗಾಗಿ ಎರಡು ಗುಂಪಿನ ಮಧ್ಯೆ ಪರಸ್ಪರ ಮಾರಕಾಸ್ತ್ರಗಳಿಂದ ದಾಳಿ ಹಲವರಿಗೆ ಗಾಯ ಓರ್ವ ಆಸ್ಪತ್ರೆಯಲ್ಲಿ ಸಾವು!!

Spread the love

ಹಳೆ ಸೇಡಿಗಾಗಿ ಎರಡು ಗುಂಪಿನ ಮಧ್ಯೆ ಪರಸ್ಪರ ಮಾರಕಾಸ್ತ್ರಗಳಿಂದ ದಾಳಿ ಹಲವರಿಗೆ ಗಾಯ ಓರ್ವ ಆಸ್ಪತ್ರೆಯಲ್ಲಿ ಸಾವು!!

ಯುವ ಭಾರತ ಸುದ್ದಿ ಬೆಳಗಾವಿ : ಬೆಳಗಾವಿ ತಾಲೂಕಿನ ಕರಡಿಗುದ್ದಿ ಗ್ರಾಮದಲ್ಲಿ ಹಳೆ ಸೇಡಿಗಾಗಿ ಎರಡು ಗುಂಪಿನ ಮಧ್ಯೆ ಪರಸ್ಪರ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಪರಿಣಾಮ ಹಲವರು ಗಾಯಗೊಂಡಿದ್ದು, ಅಲ್ಲದೇ ಗಂಭೀರವಾಗಿ ಗಾಯಗೊಂಡ ಓರ್ವ ಆಸ್ಪತ್ರೆಯಲ್ಲಿ ಅಸುನೀಗಿರುವ ಘಟನೆ ಇಂದು ಸಂಜೆ ನಡೆದಿದೆ.

ಬೆಳಗಾವಿ ತಾಲೂಕಿನ ಸುನಕುಂಪಿ ಗ್ರಾಮದ 25 ವರ್ಷದ ಮುದಕಪ್ಪ ಅಂಗಡಿ ಎಂಬಾತ ಮೃತನಾಗಿದ್ದಾನೆ.

ಕರಡಿಗುದ್ದಿ ಗ್ರಾಮದ ಬರಮೋಜಿ ಅರಬಳ್ಳಿ,
ವಿಠ್ಠಲ ಅರಬಳ್ಳಿ, ಲಕ್ಕಪ್ಪ ಹಳ್ಳಿ, ಸುನೀಲ ಅರಬಳ್ಳಿ, ವಿಶಾಲ ಬಾಗಡಿ ಹಾಗೂ ಸ್ನೇಹಿತರು ನಡೆಸಿದ ಹಲ್ಲೆಯಲ್ಲಿ ಮುದಕಪ್ಪ ಸಾವನ್ನಪ್ಪಿದ್ದಾಗಿ ತಿಳಿದು ಬಂದಿದೆ.

ಘಟನೆ ನಡೆದ ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾದಿ, ಎಸಿಪಿ ಗುಡಾಜೀ, ಪಿಐ, ಪಿಎಸ್‌ಐ ಲಕ್ಷ್ಮಣ ಕರಿಗೌಡರ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಕೊಂಡಿದ್ದಾರೆ.

ಈ ಗ್ಯಾಂಗ್ ವಾರಿನಲ್ಲಿ ಸುಮಾರು 10 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ.


Spread the love

About Yuva Bharatha

Check Also

ವಿಬಿ- ಜೀ ರಾಮ್ ಜೀ ಯೋಜನೆಯನ್ನು ಜಾರಿ ಮಾಡಿದ್ದರಿಂದ ಕಾಂಗ್ರೆಸ್ಸಿಗರು ಅಪಪ್ರಚಾರ ಮಾಡುತ್ತಿದ್ದಾರೆ.- ಸುಭಾಸ ಪಾಟೀಲ

Spread the love ಗೋಕಾಕ: ವಿಕಸಿತ ಭಾರತ ನಿರ್ಮಾಣಕ್ಕೆ ಪಣ ತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿಯವರು ವಿಬಿ- ಜೀ ರಾಮ್ …

Leave a Reply

Your email address will not be published. Required fields are marked *

fourteen − 3 =