Breaking News

ಪಂಜಾಬ್ ಕಾಂಗ್ರೆಸ್ ಸರ್ಕಾರ ನಡೆ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದ್ದು ತಕ್ಷಣ ರಾಷ್ಟ್ರಪತಿ ಆಡಳಿತ ಜಾರಿಗೆ ತರಬೇಕು-ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ್ ಪಾಟೀಲ್ !!

Spread the love

 

ಪಂಜಾಬ್ ಕಾಂಗ್ರೆಸ್ ಸರ್ಕಾರ ನಡೆ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದ್ದು ತಕ್ಷಣ ರಾಷ್ಟ್ರಪತಿ ಆಡಳಿತ ಜಾರಿಗೆ ತರಬೇಕು-ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ್ ಪಾಟೀಲ್ !!

ಯುವ ಭಾರತ ಸುದ್ದಿ  ಬೆಳಗಾವಿ: ಉಗ್ರ ಸಂಘಟನೆಗಳ ಹಾವಳಿಯಿಂದ ತುತ್ತಾದ ಪ್ರದೇಶಗಳಲ್ಲಿಯೂ ಪ್ರಧಾನಿ ನರೇಂದ್ರ ಮೋದಿಯವರ ರಕ್ಷಣಾ ವ್ಯವಸ್ಥೆಗೆ ತೊಂದರೆಯಾಗಿಲ್ಲ ಆದರೆ ಕಾಂಗ್ರೆಸ್ ಆಡಳಿತದ ಪಂಜಾಬ ರಾಜ್ಯದಲ್ಲಿ ಆಗಿರುವುದು ದೇಶದ ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕಿಯಾಗಿದೆ. ಇಂತಹ ದುಸ್ಸಾಹಸಕ್ಕೆ ಕೈಹಾಕಿರುವ ಪಂಜಾಬ್ ಕಾಂಗ್ರೆಸ್ ಸರ್ಕಾರವನ್ನು ತಕ್ಷಣ ಕಿತ್ತುಹಾಕಿ ರಾಷ್ಟ್ರಪತಿ ಆಡಳಿತ ಜಾರಿಗೆ ತರಬೇಕೆಂದು ಬೆಳಗಾವಿ ಗ್ರಾಮಾಂತರ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ್ ಪಾಟೀಲ್ ರಾಷ್ಟ್ರಪತಿಗಳಿಗೆ ಆಗ್ರಹಿಸಿದರು.

ಬುಧವಾರ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ ಇವರು, ಭಾರತ ದೇಶದಲ್ಲಿ ಎಂದು ನಡೆಯಲಾರದ ಘಟನೆ ಪಂಜಾಬದಲ್ಲಿ ನಡೆದಿರುವುದು ಭಾರತ ದೇಶದ ಘನತೆಗೆ ಕಳಂಕ ತಂದಿದೆ ಭಾರತ ದೇಶವನ್ನು ತಾಲಿಬಾನ್ ಮಾಡಲಿಕ್ಕೆ ಹೊರಟಿರುವ ಪಂಜಾಬ್ ಕಾಂಗ್ರೆಸ್ ಸರ್ಕಾರ ನಡೆ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದ್ದು ತಕ್ಷಣ ರಾಷ್ಟ್ರಪತಿ ಆಡಳಿತ ಜಾರಿಗೆ ತರಬೇಕು. ದೇಶದ ಅತ್ಯುನ್ನತ ಸ್ಥಾನದಲ್ಲಿರುವ ಹಾಗೂ ಉನ್ನತ ಶ್ರೇಣಿಯ ರಕ್ಷಣೆಯಲ್ಲಿರುವ ಹಾಗೂ ಅನೇಕ ವಿರೋಧ ದೇಶಗಳ ಮತ್ತು ದೇಶದ ಆಂತರಿಕ ವಿದ್ರೋಹಿ ಗಳ ಕಣ್ಣಲ್ಲಿ ಗುರಿಯಾಗಿರುವ ದೇಶಭಕ್ತ ಭಾರತವನ್ನು ಜಗದ್ವಿಖ್ಯಾತ ಮಾಡಲು ಸರ್ವಸ್ವವನ್ನು ತ್ಯಾಗ ಮಾಡಿ ದೇಶಕ್ಕಾಗಿ ಹಗಲಿರುಳು ದುಡಿಯುತ್ತಿರುವ ದೇಶದ ಪ್ರಧಾನ ಮಂತ್ರಿಗಳ ರಕ್ಷಣಾ ವ್ಯವಸ್ಥೆಯಲ್ಲಿ ಬೇಜವಾಬ್ದಾರಿತನ ತೋರಿಸಿರುವ ಪಂಜಾಬ್ ಸರ್ಕಾರ ಈ ಘಟನೆಯ ಹೊಣೆಹೊತ್ತು ತಕ್ಷಣ ಮುಖ್ಯಮಂತ್ರಿಗಳು ರಾಜೀನಾಮೆ ನೀಡಿ ಸರಕಾರವನ್ನು ವಿಸರ್ಜನೆ ಗೊಳಿಸಬೇಕು ಒಂದು ವೇಳೆ ಈ ಕ್ರಮಕ್ಕೆ ಮುಂದಾಗದಿದ್ದರೆ ತಕ್ಷಣ ರಾಷ್ಟ್ರಪತಿಗಳು ತಮ್ಮ ವಿಶೇಷ ಅಧಿಕಾರವನ್ನು ಬಳಸಿಕೊಂಡು ತಕ್ಷಣ ಪಂಜಾಬ್ ಸರ್ಕಾರವನ್ನು ಕಿತ್ತುಹಾಕಿ ಪ್ರಜಾಪ್ರಭುತ್ವವನ್ನು ಉಳಿಸುವ ಕಾರ್ಯವನ್ನು ಮಾಡಬೇಕೆಂದರು. ದೇಶದ ಪ್ರಧಾನಮಂತ್ರಿ ಒಂದು ರಾಜ್ಯದ ಅಭಿವೃದ್ಧಿಗಾಗಿ ನೂರಾರು ಕೋಟಿ ರೂಪಾಯಿಗಳ ಅನುದಾನವನ್ನು ಕೊಡುವುದರ ಜೊತೆಗೆ ಕಾರ್ಯಕ್ರಮದ ಉದ್ಘಾಟನೆಗೆ ಹೋಗುವ ದಾರಿಯಲ್ಲಿ 20 ನಿಮಿಷ ಭದ್ರತಾ ವ್ಯವಸ್ಥೆಯನ್ನು ಗಾಳಿಗೆ ತೂರಿ ಭದ್ರತೆಯಲ್ಲಿ ಲೋಪ ಎಸಗಿ ಪ್ರಧಾನಮಂತ್ರಿಗಳ ರಕ್ಷಣಾ ವ್ಯವಸ್ಥೆಯಲ್ಲಿ ಭಯವನ್ನುಂಟು ಮಾಡುವ ಪಂಜಾಬ್ ಸರ್ಕಾರ ಭಾರತದ ಘನತೆಗೆ ಕಳಂಕ ತಂದಿದೆ ಈ ಬಗ್ಗೆ ಅಲ್ಲಿಯ ಸರಕಾರ ಮತ್ತು ಕಾಂಗ್ರೆಸ್ ಪಕ್ಷದ ಅಧಿನಾಯಕರು ಈ ಬಗ್ಗೆ ಚಕಾರ ಎತ್ತಲಾರದ ಇರುವುದು ಅವರ ಮನಸ್ಥಿತಿಯನ್ನು ತಿಳಿಸುತ್ತದೆ ಅಧಿಕಾರದ ದಾಹ ದಲ್ಲಿರುವ ಕಾಂಗ್ರೆಸ್ಸಿಗರಿಗೆ ದೇಶದ ಪ್ರಧಾನ ಮಂತ್ರಿಗಳು ಭದ್ರತೆಗೆ ಭಯ ತಂದೊಡ್ಡಿ ಭಾರತದ ಅಂತರಿಕ ಭದ್ರತೆಯ ವ್ಯವಸ್ಥೆಗೆ ಧಕ್ಕೆ ತಂದಿದೆ. ದೇಶದ ಜನತೆಯ ಪರವಾಗಿ ಹಗಲಿರುಳು ಸೇವೆ ಮಾಡುವ ಪ್ರಧಾನಮಂತ್ರಿಗಳಿಗೆ ಅಸಡ್ಡೆ ತೋರಿರುವ ಪಂಜಾಬ ಪೊಲೀಸ್ ಅಧಿಕಾರಿಗಳು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಪ್ರಧಾನಮಂತ್ರಿಗಳ ಸಂಚಾರದ ರಸ್ತೆಗಳ ಬಗ್ಗೆ ಕನಿಷ್ಠ ಜ್ಞಾನವಿಲ್ಲದೆ ಪ್ರಧಾನಮಂತ್ರಿಗಳ ರಕ್ಷಣಾ ವ್ಯವಸ್ಥೆಗಳಿಗೆ ತಪ್ಪು ಮಾಹಿತಿಗಳು ನೀಡುವ ಮೂಲಕ ಘೋರ ಅಪರಾಧ ಮಾಡುವದಲ್ಲದೆ ಅಪರಾಧದಿಂದ ನುಣುಚಿಕೊಳ್ಳುವ ದುಸ್ಸಾಹಸಕ್ಕೆ ಕೈಹಾಕಿರುವ ಪಂಜಾಬ್ ರಾಜ್ಯದ ಪೊಲೀಸ್ ಅಧಿಕಾರಿಗಳನ್ನು ಹಾಗೂ ರಾಜ್ಯ ಸರಕಾರದ ಇರುವ ಅಧಿಕಾರಿಗಳನ್ನು ಬಂಧಿಸಿ ಅವರನ್ನು ತನಿಖೆಗೆ ಒಳಪಡಿಸಬೇಕು ಕ್ಷುದ್ರ ಮನಸ್ಸಿನ ಇಂತಹ ಸರ್ಕಾರವನ್ನು ಕಿತ್ತೊಗೆಯಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ಸುಭಾಷ್ ಪಾಟೀಲ್ ಸಂದೀಪ್ ದೇಶಪಾಂಡೆ ಜಿಲ್ಲಾ ಖಜಾಂಚಿ ಮಲ್ಲಿಕಾರ್ಜುನ್ ಮಾದಮ್ಮನವರ್ ಜಿಲ್ಲಾ ಮಾಧ್ಯಮ ಸಂಚಾಲಕ ಎಫ್. ಎಸ್. ಸಿದ್ದನಗೌಡರ ಕಾರ್ಯಾಲಯ ಕಾರ್ಯದರ್ಶಿ ವೀರಭದ್ರಯ್ಯ ಪೂಜಾರ್ ಉಪಸ್ಥಿತರಿದ್ದರು.


Spread the love

About Yuva Bharatha

Check Also

ಅಕ್ಕಾ ಅಂದ್ರೆ ಅವರೇ ಅಂತ ಯಾಕೆ ತಿಳ್ಕೊತೀರಿ, ಪೆಗ್ ಅಂದ್ರೆ ಎನರ್ಜಿ ಡ್ರಿಂಕ್-ಮಾಜಿ ಶಾಸಕ ಸಂಜಯ ಪಾಟೀಲ.!

Spread the loveನಾನು ಭಾಷಣದಲ್ಲಿ ಹೆಬ್ಬಾಳಕರ ಹೆಸರನ್ನೆ ತಗೊಂಡಿಲ್ಲ. -ಮಾಜಿ ಶಾಸಕ ಸಂಜಯ ಪಾಟೀಲ.! ಯುವಭಾರತ ಸುದ್ದಿ ಬೆಳಗಾವಿ: ನಾನು …

Leave a Reply

Your email address will not be published. Required fields are marked *

fifteen + 5 =