Breaking News

ಡಿಕೆ ಸುರೇಶ ವಿರುದ್ಧ ಗೋಕಾಕನಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ!!

Spread the love

ಡಿಕೆ ಸುರೇಶ ವಿರುದ್ಧ ಗೋಕಾಕನಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ!!

ಯುವ ಭಾರತ ಸುುದ್ದಿ ಗೋಕಾಕ: ರಾಮನಗರ ಜಿಲ್ಲೆಯಲ್ಲಿ ನಡೆದ ಸರಕಾರಿ ಕಾರ್ಯಕ್ರಮದಲ್ಲಿ ನಡೆದ ಘಟನೆಯನ್ನು ವಿರೋಧಿಸಿ ಬಿಜೆಪಿ ಮುಖಂಡರು ಮತ್ತು ಯುವ ಮೋರ್ಚಾ ಕಾರ್ಯಕರ್ತರು ಬಸವೇಶ್ವರ ವೃತ್ತದ ಬಳಿ ಸೋಮವಾರದಂದು ಸಂಜೆ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ ಮಾತನಾಡಿ, ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಬಾರದು. ರಾಮನಗರದಲ್ಲಿ ಆಯೋಜಿಸಿದ್ದ ಸರಕಾರಿ ಕಾರ್ಯಕ್ರಮದಲ್ಲಿ ಡಿಕೆ ಡಿಕೆ ಎಂದು ಕೂಗಿದರೆ ಇದು ಪೂರ್ವನಿಯೋಜಿತ ಅಲ್ಲವೇ? ಅಶ್ವಥ ನಾರಾಯಣ ಅವರು ಘೋಷಣೆ ಕೂಗುತ್ತಿರುವರನ್ನು ಕರೇದಿದ್ದಾರೆ. ಡಿಕೆ ಸುರೇಶ ಓರ್ವ ಜನಪ್ರತಿನಿಧಿಯಾಗಿ ಇನ್ನೊರ್ವ ಜನಪ್ರತಿನಿಧಿ ಮೇಲೆ ಗೂಂಡಾ ವರ್ತನೆ ತೋರುವದು ಸರಿಯಲ್ಲ ಈ ಕೂಡಲೇ ಡಿ.ಕೆ. ಸುರೇಶ್ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಅಶ್ವಥ್ ನಾರಾಯಣ್ ಅವರು ಯಾರ ಹೆಸರನ್ನೂ ಹೇಳಿಲ್ಲ. ಕರ್ನಾಟಕದಲ್ಲಿ ಯಾವುದೇ ರೌಡಿಸಂ ನಡೆಯುವುದಿಲ್ಲ, ವೇದಿಕೆಯಲ್ಲಿ ಮುಖ್ಯಮಂತ್ರಿಗಳು ಮತ್ತು ಸಚಿವರು ಇದ್ದರು. ಅವರ ಪಕ್ಷದವರೇ ಮುಖ್ಯಮಂತ್ರಿಯಾಗಿದ್ದರೆ ಹೀಗೆ ಆಗಲು ಬಿಡುತ್ತಿದ್ದರೇ. ಸರ್ಕಾರದ ಯೋಜನೆಗೆ ಅಡ್ಡಿಯಾಗುವುದು ಎಷ್ಟು ಸರಿ ಹೀಗಾಗಿ ಡಿಕೆ ಸುರೇಶ್ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಶಿಸ್ತು ಕ್ರಮ ತೆಗೆದುಕೊಳ್ಳಬೇಕು.
ರಸ್ತೆ ತಡೆದು, ಡಿಕೆ ಸುರೇಶ್ ಫೋಟೋಗೆ ಬೆಂಕಿ ಹಚ್ಚಿ, ಡಿ.ಕೆ. ಸುರೇಶ್ ಫೋಟೋಗೆ ಚಪ್ಪಲಿಯಲ್ಲಿ ಹೊಡೆದು ಬಿಜೆಪಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು. ಡಿಕೆ ಬ್ರದರ್ಸ್ ಕಳ್ಳರು, ಗೂಂಡಾಗಳು ಎಂದು ಘೋಷಣೆ ಕೂಗಿದರು.
ಪ್ರತಿಭಟನೆಯಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳ, ನಗರಸಭೆ ಸದಸ್ಯರಾದ ಶ್ರೀಶೈಲ ಯಕ್ಕುಂಡಿ, ಹರೀಶ ಬೂದಿಹಾಳ, ಹನಮಂತ ಕಾಳಮ್ಮನಗುಡಿ, ಮುಖಂಡರಾದ ದುರ್ಗಪ್ಪ ಶಾಸ್ತಿçಗೊಲ್ಲರ, ವಿಶ್ವನಾಥ ಬಿಳ್ಳೂರ, ಒಬಿಸಿ ಮೋರ್ಚಾ ಅಧ್ಯಕ್ಷ ಲಕ್ಷö್ಮಣ ಖಡಕಭಾಂವಿ, ಮಹಿಳಾ ಮೋರ್ಚಾಧ್ಯಕ್ಷೆ ರಾಜೇಶ್ವರಿ ಒಡೆಯರ, ಯುವಮೋರ್ಚಾಧ್ಯಕ್ಷ ಮಂಜುನಾಥ ಪ್ರಭುನಟ್ಟಿ, ಅಲ್ಪಸಂಖ್ಯಾತ ಮೋರ್ಚಾಧ್ಯಕ್ಷ ಮಲ್ಲಿಕಜಾನ ತಳವಾರ, ಎಸ್.ಟಿ ಮೋರ್ಚಾಧ್ಯಕ್ಷ ರವಿ ಮಡ್ಡೆಪ್ಪಗೋಳ, ಜಿಲ್ಲಾಕಾರ್ಯದರ್ಶಿ ಬಸವರಾಜ ಹಿರೇಮಠ, ಸಾಮಾಜಿಕ ಜಾಲತಾನ ಪ್ರಮುಖ ಕಿರಣ ಡಮಾಮಗರ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಇದ್ದರು.


Spread the love

About Yuva Bharatha

Check Also

ಶ್ರೀ ಉಜ್ಜಯಿನಿ ಸದ್ಧರ್ಮ ಪೀಠದ ಪ್ರಸ್ತುತ ಪರಮ ಪೀಠಾಚಾರ್ಯರಾದ ಶ್ರೀ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರರ ಸಾನ್ನಿಧ್ಯದಲ್ಲಿ ಜಾತ್ರಾ ಮಹೋತ್ಸವ

Spread the loveಸಾಮಾಜಿಕ ಸೌಹಾರ್ದತೆ ಸಾರುವ ಶ್ರೀ ಉಜ್ಜಯಿನಿ ಮರುಳಸಿದ್ಧೇಶ್ವರ ಜಾತ್ರಾ ಮಹೋತ್ಸವ.! ಶ್ರೀ ಉಜ್ಜಯಿನಿ ಸದ್ಧರ್ಮ ಪೀಠದ ಪ್ರಸ್ತುತ …

Leave a Reply

Your email address will not be published. Required fields are marked *

4 × one =