ಸಿಡಿ ಪ್ರಕರಣ- ಎಸ್ ಐಟಿ ವರದಿ ಸಲ್ಲಿಸಲು ಆದೇಶ: ರಮೇಶ ಸಾಹುಕಾರ್ ಗೆ ರಿಲೀಫ್!!
ಸಚಿವ ಸ್ಥಾನ ಸಿಗುವುದು ಗ್ಯಾರಂಟಿ?
ಯುವ ಭಾರತ ಸುದ್ದಿ ಬೆಳಗಾವಿ: ನಕಲಿ ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಧಿಸಿದಂತೆ ಗೋಕಾಕ ಶಾಸಕ, ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ಎಸ್ಐಟಿ ತನಿಖಾ ವರದಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲು ಹೈಕೋರ್ಟ್ ಅನುಮತಿ ನೀಡಿದೆ.
ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿ.ಡಿ ಬಹಿರಂಗ ಪ್ರಕರಣದಲ್ಲಿ ಸಂತ್ರಸ್ತ ಯುವತಿ ಬೆಂಗಳೂರಿನ ಕಬ್ಬನಪಾಕ್೯ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದ ದೂರು ಆಧರಿಸಿ ನಡೆಸಲಾದ ಕೊನೆಯ ತಬಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಆದೇಶ ಹೊರಡಿಸಲಾಗಿದೆ.ಇದರಿಂದ ರಮೇಶ ಸಾಹುಕರ್ ಮತ್ತು ಬಂಬಲಿಗರಲ್ಲಿ ಸಂತಸಕ್ಕೆ ಕರಣವಾಗಿದೆ. ಸಾಹುಕಾರ ಬೆಂಬಲಿಗರಲ್ಲಿ ಸಂತಸ ಗರಿಗೆದೆಇದೆ.ಸಚಿವ ಸ್ಥಾನಸಿಗುವುದು ಪಕ್ಕಾ ಆಗಿದೆ.
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ ಸರ್ಕಾರ ಎಸ್ ಐಟಿ ರಚನೆ ಮಾಡಿತ್ತು. ಜಾರಕಿಹೊಳಿ ಪತ್ರದ ಮೂಲಕ ಮನವಿ ಹಿನ್ನಲೆಯಲ್ಲಿ ಅಂದಿನ ಗೃಹ ಸಚಿವ ಬಸವರಾಜ ಬೊಮ್ಮಾಯಿ ಎಸ್ ಐ ಟಿ ರಚನೆ ಮಾಡಿತು. ಇದನ್ನು ಪ್ರಶ್ನಿಸಿ ಯುವತಿ ಪರ ನ್ಯಾಯವಾದಿಗಳು ಆಕ್ಷೇಪಣೆ ಸಲ್ಲಿಕೆ ಮಾಡಿದ್ದರು. ಇದರಿಂದ ಎಸ್ ಐಟಿ ವರದಿ ಸಲ್ಲಿಕೆಗೆ ತಡೆಯಾಜ್ಞೆ ನೀಡಲಾಗಿತ್ತು.
ಇಂದು ಸಂಬಂಧಿಸಿದ ಕೋರ್ಟ್ ವರದಿ ಸಲ್ಲಿಕೆಗೆ ಹೈಕೋರ್ಟ್ ಅನುಮತಿ ನೀಡಿದೆ. ಮಾರ್ಚ್ 9ರಂದು ಮುಂದಿನ ವಿಚಾರಣೆ ನಡಲಿದೆ.
ವರದಿ ಸಲ್ಲಿಕೆಯಾದ ಬಳಿಕ ಎನಿದೆ ಎಂಬುದು ಬಹಿರಂಗ ಆಗಲಿದೆ. ಬಹುತೇಕ ರಮೇಶ ಜಾರಕಿಹೊಳಿ ಕ್ಲಿನ್ ಚಿಟ್ ಸಿಗಲಿದೆ ಎಂಬುದು ಹೇಳಲಾಗುತ್ತಿದೆ.