ಭಂಡಾರದಲ್ಲಿ ಮಿಂದೆದ್ದ ಭಕ್ತ ಸಾಗರ !

ಯುವ ಭಾರತ ಸುದ್ದಿ ಕೇರೂರ :
ಚಿಕ್ಕೋಡಿ ತಾಲೂಕು ಕೇರೂರ ಗ್ರಾಮದ ಶ್ರೀ ಅರಣ್ಯ ಸಿದ್ದೇಶ್ವರ ಮಲಕಾರಿಸಿದ್ದೇಶ್ವರ ದೇವರ ಜಾತ್ರೆಯಲ್ಲಿ ಸೋಮವಾರ ಭಕ್ತರು ಭಂಡಾರದಲ್ಲಿ ಮಿಂದೆದ್ದರು. ಹಂಡಕುದರಿ, ಪುಂಡ ಅರಣ್ಯಸಿದ್ದಗ, ಚಾಂಗಬಲೋ ಎಂಬ ದೇವರ ವಾಣಿಯ ಮೂಲಕ ಭಕ್ತರು ತಮ್ಮ ಭಕ್ತಿ ಸಮರ್ಪಿಸಿದರು. ಜಾತ್ರೆಯ ಕೊನೆ ದಿನ ಭಕ್ತರು ದೇವರ ಪಲ್ಲಕ್ಕಿಗೆ ಭಂಡಾರ ಮತ್ತು ಉತ್ತತ್ತಿ ಹಾರಿಸಿ ಭಕ್ತಿ ಮೆರೆದಿದ್ದಾರೆ. ಈ ಜಾತ್ರೆ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಮಹಾರಾಷ್ಟ್ರದಲ್ಲಿ ಬಹಳ ಪ್ರಸಿದ್ಧಿ ಪಡೆದಿದೆ.
YuvaBharataha Latest Kannada News