Breaking News

BIG BREAKING ರಮೇಶ ಜಾರಕಿಹೊಳಿಯವರ ವಿರುದ್ಧ ಕೊನೆಕ್ಷಣದಲ್ಲಿ ಆಡಿಯೋ-ವಿಡಿಯೋ ವೈರಲ್ ಮಾಡಲು ಭಾರೀ ಸಂಚು..?

Spread the love

BIG BREAKING ರಮೇಶ ಜಾರಕಿಹೊಳಿಯವರ ವಿರುದ್ಧ ಕೊನೆಕ್ಷಣದಲ್ಲಿ ಆಡಿಯೋ-ವಿಡಿಯೋ ವೈರಲ್ ಮಾಡಲು ಭಾರೀ ಸಂಚು..?

ಯುವ ಭಾರತ ಸುದ್ದಿ ಬೆಳಗಾವಿ :
ವಿಧಾನಸಭಾ ಚುನಾವಣೆಯಲ್ಲಿ ಹೇಗಾದರೂ ಮಾಡಿ ರಮೇಶ ಜಾರಕಿಹೊಳಿಯವರ ವರ್ಚಸ್ಸು ಕಡಿಮೆ ಮಾಡಲು ಪ್ರತಿಪಕ್ಷ ದಂಡು ಇನ್ನಿಲ್ಲದ ಷಡ್ಯಂತ್ರ ನಡೆಸಿರುವುದು ಇದೀಗ ಬಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಅತ್ಯಂತ ಪ್ರಬಲರಾಗಿರುವ ಎದುರಾಳಿಗಳನ್ನು ಹಣಿಯಲು ವಿರೋಧ ಪಕ್ಷದ ಸುಳ್ಳಿನ ಫ್ಯಾಕ್ಟರಿಯಲ್ಲಿ ವಿಡಿಯೋ- ಆಡಿಯೋಗಳ ಬಹುದೊಡ್ಡ ಸಂಗ್ರಹವೇ ಇದೆ. ಇದು ರಾಜ್ಯದ ಜನತೆಗೆ ಗೊತ್ತಿರುವ ವಿಷಯ. ಕಾಲಕಾಲಕ್ಕೆ ಇದನ್ನು ಹೊರತಂದು ತಲ್ಲಣ ಉಂಟುಮಾಡಲಾಗುತ್ತಿದೆ. ಇದೀಗ ವಿಧಾನಸಭಾ ಚುನಾವಣೆ ಕಾಲಕ್ಕೆ ರಾಜ್ಯ ರಾಜಕಾರಣದ ಗತಿಯನ್ನೇ ಬದಲಾಯಿಸಲು ಸುಳ್ಳಿನ ಸರಮಾಲೆಯ ಆಡಿಯೋ ವಿಡಿಯೋ ಸಜ್ಜುಗೊಳಿಸಿಕೊಂಡು ಇಟ್ಟುಕೊಂಡಿದ್ದಾರೆ ಎಂದು ಸುಳ್ಳಿನ ಫ್ಯಾಕ್ಟರಿಯಿಂದಲೇ ಖಚಿತ ಮೂಲಗಳು ಮಾಹಿತಿ ನೀಡಿವೆ.

ಬೆಳಗಾವಿಯಲ್ಲಿ ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಹಾಗೂ ಇನ್ನಿತರ ಮಹಾಪುರುಷರ ಬಗ್ಗೆ ರಮೇಶ ಜಾರಕಿಹೊಳಿಯವರು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂಬ ಆಡಿಯೋ-ವಿಡಿಯೋ ವೈರಲ್ ಮಾಡಲು ಪ್ರತಿಪಕ್ಷ ವೇದಿಕೆ ಸಜ್ಜುಗೊಳಿಸಿ ಇಟ್ಟುಕೊಂಡಿದೆ. ಚುನಾವಣೆಗೆ ಇನ್ನೇನು ಒಂದೇ ದಿನ ಬಾಕಿ ಇರುವಾಗಲೇ ಇದನ್ನು ಯಾವುದೇ ಕ್ಷಣದಲ್ಲಾದರೂ ಸ್ಫೋಟಗೊಳಿಸಲು ಮುಂದಾಗಿರುವುದು ತಿಳಿದು ಬಂದಿದ್ದು ಈ ನಿಟ್ಟಿನಲ್ಲಿ ಬೆಳಗಾವಿ ಪೊಲೀಸರು ಇದರ ಹಿಂದೆ ಯಾರು ಯಾರು ಇದ್ದಾರೆ ಎಂಬ ಬಗ್ಗೆ ನಿಖರ ಮಾಹಿತಿ ಕಲೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ.

ರಾಜ್ಯ ರಾಜಕಾರಣದಲ್ಲಿ ಪ್ರಭಾವ ಬೀರಿರುವ ಗೋಕಾಕ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರು ಈಗಾಗಲೇ ಇಂತಹ ಕುತಂತ್ರದ ಬಗ್ಗೆ ಹಲವಾರು ಕಾರ್ಯಕ್ರಮಗಳಲ್ಲಿ ಸಾರ್ವಜನಿಕರ ಮುಂದೆ ಸತ್ಯ ಬಿಚ್ಚಿಟ್ಟಿದ್ದಾರೆ. ಆದರೂ ಇದೀಗ ಚುನಾವಣೆ ಹೊತ್ತಲ್ಲಿ ಹೇಗಾದರೂ ಆಗಲಿ, ಒಟ್ಟಾರೆ ತಮಗೆ ಲಾಭವಾಗಬೇಕು ಎಂಬ ದುಃಸಾಹಸಕ್ಕಿಳಿದು ಆಡಿಯೋ-ವಿಡಿಯೋ ಬಿಡುಗಡೆಗೆ ಮುಂದಾಗಿದ್ದಾರೆ. ಆದರೆ, ರಾಜ್ಯದಲ್ಲಿ ಈಗಾಗಲೇ ಹತ್ತು ಹಲವು ಸುಳ್ಳು ಸುದ್ದಿಗಳನ್ನು ಹರಿಬಿಡುವ ಮೂಲಕ ಬಿಜೆಪಿ ಬಗ್ಗೆ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸುತ್ತಿರುವ ಪ್ರತಿಪಕ್ಷದವರ ಇಂತಹ ಯಾವುದೇ ಆಟಕ್ಕೆ ಮತದಾರ ಪ್ರಭುಗಳು ಕಿವಿಗೊಡದೆ ತಕ್ಕ ಪಾಠ ಕಲಿಸುವಂತೆ ರಮೇಶ ಜಾರಕಿಹೊಳಿ ಅಭಿಮಾನಿಗಳು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ರಮೇಶ ಜಾರಕಿಹೊಳಿಯವರು ಕಳೆದ ನಾಲ್ಕು ದಶಕಗಳಿಂದ ರಾಜ್ಯ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ಎಂದಿಗೂ ಜಾತಿ ಹಾಗೂ ಮಹಾಪುರುಷರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿಲ್ಲ. ಸರ್ವ ಜಾತಿ ಹಾಗೂ ಧರ್ಮ ಬಾಂಧವರನ್ನು ಸಮಾನವಾಗಿ ಕಾಣುತ್ತ ಬಂದಿದ್ದಾರೆ. ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಯಾರೇ ಪ್ರಯತ್ನ ನಡೆಸಿದರೂ ತಕ್ಕ ಪಾಠ ಕಲಿಸಲಾಗುತ್ತದೆ ಎಂದು ರಮೇಶ ಜಾರಕಿಹೊಳಿ ಅಭಿಮಾನಿಗಳು ಉಗ್ರ ಎಚ್ಚರಿಕೆ ರವಾನಿಸಿದ್ದಾರೆ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

four × 5 =