ಬಿಜೆಪಿ ಪಕ್ಷದಲ್ಲಿ ಕಾರ್ಯನಿರ್ವಹಿಸಲು ನನಗೆ ಹೆಮ್ಮೆಯಾಗುತ್ತಿದೆ- ಸಚಿವ ರಮೇಶ ಜಾರಕಿಹೊಳಿ..!!
ಯುವ ಭಾರತ ಸುದ್ದಿ, ಗೋಕಾಕ್ : ಬಿಜೆಪಿ ಪಕ್ಷ ಶಿಸ್ತುಬದ್ದ ಹಾಗೂ ಕಾರ್ಯಕರ್ತರ ಪಕ್ಷವಾಗಿದ್ದು,ಈ ಪಕ್ಷದಲ್ಲಿ ಕಾರ್ಯನಿರ್ವಹಿಸಲು ನನಗೆ ಹೆಮ್ಮೆಯಾಗುತ್ತಿದೆ ಎಂದು ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಹೇಳಿದರು.
ರವಿವಾರದಂದು ನಗರದ ಸಚಿವರ ಕಾರ್ಯಾಲಯದ
ಆವರಣದಲ್ಲಿ ಆಯೋಸಿದ್ದ ಭಾರತಿಯ ಜನತಾ ಪಾರ್ಟಿ ಗೋಕಾಕ ನಗರ ಹಾಗೂ ಗ್ರಾಮೀಣ ಮಂಡಲದ
ನೂತನ ಪಾದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು
ಹಿರಿಯರ ಮಾರ್ಗದರ್ಶನದಲ್ಲಿ ಕಾರ್ಯಕರ್ತರ ಪಡೆ ಶ್ರಮಿಸಿದ್ದರಿಂದ ರಾಜ್ಯ ಹಾಗೂ ದೇಶದ
ಚುಕ್ಕಾಣಿಯನ್ನು ಭಾರತಿಯ ಜನತಾ ಪಕ್ಷವು ಹಿಡಿದಿದ್ದೆ.ಪ್ರಧಾನಿ ಮೋದಿಯವರು ಹಾಗೂ
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹಲವಾರು ಜನಪರ ಯೋಜನೆಗಳ ಜಾರಿಯೊಂದಿಗೆ ದೇಶ
ಹಾಗೂ ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಕಾರ್ಯಕರ್ತರು ಆಯೋಜನೆಗಳನ್ನು ಜನರ
ಮನೆ ಮನೆಗೆ ತೆರಳಿ ತಲುಪಿಸಲು ಕಾರ್ಯಪ್ರವೃತ್ತವಾಗರಬೇಕು ಎಪಿಎಂಸಿ ಹಾಗೂ ಭೂಸುಧಾರಣೆ
ಕಾಯ್ದೆಗಳು ರೈತರಿಗೆ ವರದಾನವಾಗಿದ್ದು, ಅದನ್ನು ಕಾರ್ಯಕರ್ತರು ರೈತರಿಗೆ ಮನವರಿಕೆ
ಮಾಡುವಂತೆ ಹೇಳಿದರು.
ಸುರೇಶ ಅಂಗಡಿ ಅವರ ಅಗಲಿಕೆಯಿಂದ ನಮಗೆಲ್ಲ ಅತೀವ ದುಃಖವಾಗಿದೆ. ಬರುವ ಉಪಚುನಾವಣೆಯಲ್ಲಿ
ಪಕ್ಷ ನಿಲ್ಲಿಸುವ ಅಭ್ಯರ್ಥಿಯನ್ನು 2 ಲಕ್ಷಕ್ಕಿಂತ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುವ
ಮೂಲಕ ಅಂಗಡಿ ಅವರಿಗೆ ಶೃದ್ದಾಂಜಲಿಯನ್ನು ಸಲ್ಲಿಸೋಣಾ ಎಂದು ಹೇಳಿದ ಅವರು ಕಾರ್ಯಕರ್ತರು
ಈಗಿನಿಂದಲೇ ಕಾರ್ಯಪ್ರವೃತ್ತವಾಗುವಂತೆ ಕರೆ ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಮಾತನಾಡುತ್ತಾ ನಾಡಿನ ಧರ್ಮ ಸಂಸ್ಕೃತಿಯನ್ನು ಉಳಿಸುವ
ಶಕ್ತಿ ಬಿಜೆಪಿಗೆ ಇದೆ. ಮೋದಿ ಅವರ ನೇತೃತ್ವದಲ್ಲಿ ಅದನ್ನು ಮಾಡುತ್ತಿದ್ದು, ಆ ಪಕ್ಷದ
ಪದಾಧಿಕಾರಿಗಳಾಗಿರುವುದು ನಮಗೆಲ್ಲ ಹೆಮ್ಮೆಯ ವಿಷಯವಾಗಿದೆ. ಜಾತಿ ಮತ ನೋಡದೆ
ಕಾರ್ಯಕರ್ತರನ್ನು ಬೆಳೆಸುವ ಕಾರ್ಯವನ್ನು ಪಕ್ಷ ಮಾಡುತ್ತಿದೆ. ನಾವೆಲ್ಲರೂ ಪಕ್ಷವನ್ನು
ಬಲಿಷ್ಠಗೋಳಿಸಲು ಶ್ರಮಿಸೋಣಾ ಎಂದರು
ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಮಾತನಾಡಿ ದೇಶದಲ್ಲಿ ಶೇಕಡಾ 52 ರಷ್ಟು ಜನತೆಯ ಒಲವು ಬಿಜೆಪಿ
ಪಕ್ಷದ ಮೇಲಿದೆ. ಬರುವ ಮೂರು ವರ್ಷಗಳ ಅವಧಿಯಲ್ಲಿ ಕಾರ್ಯಕರ್ತರು ಸಿಕ್ಕಿರುವ
ಅವಕಾಶದ ಸದುಪಯೋಗದಿಂದ ಪಕ್ಷವನ್ನು ಬಲಿಷ್ಠಗೋಳಿಸಬೇಕು . ಮಹಿಳೆಯರಿಗೆ , ಯುವ
ಶಕ್ತಿಗೆ ಹೆಚ್ಚಿನ ಆಧ್ಯತೆ ನೀಡಿ ಪಕ್ಷ ಸಂಘಟನೆಗೆ ಮುಂದಾಗುವಂತೆ ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ ಎಲ್ ಮುತ್ತೆನ್ನವರ , ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಷ್
ಪಾಟೀಲ, ಬಿಜೆಪಿ ಪದಾಧಿಕಾರಿಗಳಾದ. ಶಾಮಾನಂದ ಪೂಜಾರಿ, ಬಸವರಾಜ ಹಿರೇಮಠ, ಬಸವರಾಜ ಮಾಳೆದವರ,ಎಸ್.ವ್ಹಿ ದೇಮಶೆಟ್ಟಿ , ಪ್ರೇಮಾ ಭಂಡಾರಿ , ಭೀಮಶಿ ಭರಮಣ್ಣವರ ,
ರಾಜೇಂದ್ರ ಗೌಡಪ್ಪಗೋಳ , ಮಹಾಂತೇಶ ತಾವಂಶಿ , ಶಫೀ ಜಮಾದರ, ರವಿ ಪತ್ರಾವಳಿ ,
ಗಣುಶಿಂಗ ರಜಪೂತ , ಜ್ಯೋತಿ ಕೋಲಾರ , ವಿಜಯ ಝ್ವಂವರ , ಕರುಣಾ ಗರುಡಕರ ,ಯುವರಾಜ ಜಾಧವ , ಡಾ.ಜಿ.ಆರ್. ಸೂರ್ಯವಂಶಿ, ಬಸಗೊಂಡ ಶಿರಗಾಂವಿ, ಸುಭಾಷ ಸಣ್ಣತಿಪ್ಪಗೋಳ,ಪರಶುರಾಮ ಗೌಡಿ ಇದ್ದರು.