Breaking News

ತೀವ್ರ ವಿವಾದಕ್ಕೆ ಕಾರಣವಾಗಿದ್ದ ತಪಸಿಯ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ನಿವೇಶನದ ಸಮಸ್ಯೆ ಕೊನೆಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮಧ್ಯಸ್ಥಿಕೆಯಲ್ಲಿ ಸುಖಾಂತ್ಯಗೊಂಡಿದೆ..!!

Spread the love

ಬಾಲಚಂದ್ರ ಜಾರಕಿಹೊಳಿ ಅವರ ಮಧ್ಯಸ್ಥಿಕೆಯಲ್ಲಿ ಸುಖಾಂತ್..

ಕಗ್ಗಂಟಾಗಿದ್ದ ತಪಸಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ನಿವೇಶನ ಸಮಸ್ಯೆ.

ತೀವ್ರ ವಿವಾದಕ್ಕೆ ಕಾರಣವಾಗಿದ್ದ ತಪಸಿಯ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ನಿವೇಶನದ ಸಮಸ್ಯೆ ಕೊನೆಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮಧ್ಯಸ್ಥಿಕೆಯಲ್ಲಿ ಸುಖಾಂತ್ಯಗೊಂಡಿದೆ.

ತಪಸಿ-ಕೆಮ್ಮನಕೋಲ ಗ್ರಾಮಸ್ಥರ ಮಧ್ಯೆ ಯಶಸ್ವಿಯಾದ ಸಂಧಾನ..!!

ಯುವ ಭಾರತ  ಸುದ್ದಿ, ಗೋಕಾಕ : ತೀವ್ರ ವಿವಾದಕ್ಕೆ ಕಾರಣವಾಗಿದ್ದ ತಪಸಿಯ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ನಿವೇಶನದ ಸಮಸ್ಯೆ ಕೊನೆಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮಧ್ಯಸ್ಥಿಕೆಯಲ್ಲಿ ಸುಖಾಂತ್ಯಗೊಂಡಿದೆ.
೧೯.೨೦ ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ತಲೆಯೆತ್ತಲಿರುವ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ನೂತನ ಕಟ್ಟಡಕ್ಕೆ ತಪಸಿಯಲ್ಲಿ ಶಿಲಾನ್ಯಾಸ ಕಾರ್ಯಕ್ರಮ ನಡೆದಿತ್ತು. ಗ್ರಾಮ ಪಂಚಾಯತ ತಪಸಿ ಅಧೀನದಲ್ಲಿ ಸರ್ವೇ ನಂ. ೧೯೩ ರಲ್ಲಿ ಈಗಾಗಲೇ ೩೯.೧೯ ಎಕರೆ ಸರ್ಕಾರಿ ಜಮೀನಿನಲ್ಲಿ ಕಟ್ಟಡದ ಕಾಮಗಾರಿಯ ಗುದ್ದಲಿ ಪೂಜೆ ನಡೆದಿದ್ದರಿಂದ ಗ್ರಾಮಸ್ಥರಲ್ಲಿ ಭಿನ್ನಾಭಿಪ್ರಾಯಗಳು ಮೂಡಿದ್ದವು. ಅಲ್ಲಿ ಈಗಾಗಲೇ ಕೆಲ ಕುಟುಂಬಗಳು ಅನಧೀಕೃತವಾಗಿ ವಾಸಿಸುತ್ತಿರುವುದರಿಂದ ಈ ಶಾಲೆ ನಿರ್ಮಾಣಕ್ಕೆ ಕೆಲವರಿಂದ ಅಪಸ್ವರಗಳು ಕೇಳಿ ಬಂದಿದ್ದವು.
ಗ್ರಾಮಸ್ಥರ ಆರೋಪ ಪ್ರತ್ಯಾರೋಪಗಳ ಮಧ್ಯ ಉಭಯ ಗುಂಪುಗಳು ಕೊನೆಗೂ ಶಾಸಕರ ಗೃಹ ಕಛೇರಿವರೆಗೆ ಇದರ ಬಗ್ಗೆ ದೂರುಗಳು ಕೇಳಿ ಬಂದಿದ್ದವು. ಉಭಯ ಗುಂಪುಗಳ ವಾದ ವಿದಾದಗಳನ್ನು ಖುದ್ದಾಗಿ ಆಲಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ಸರ್ವೇ ನಂ. ೧೯೩ ರಲ್ಲಿಯೇ ಸರ್ಕಾರಿ ಜಮೀನಿನಲ್ಲಿ ೧೦ ಎಕರೆ ಜಾಗೆಯಲ್ಲಿ ಈ ಶಾಲೆಯ ಹೊಸ ಕಟ್ಟಡವನ್ನು ನಿರ್ಮಿಸಲಾಗುವುದು. ಈ ಮೊದಲಿದ್ದ ನಿಯೋಜಿತ ಕಟ್ಟಡದ ಸ್ಥಳವನ್ನು ಬದಲಾಯಿಸಿದ್ದು, ಅದರ ಸರ್ವೇ ನಂಬರನ ಸರ್ಕಾರಿ ಭೂಮಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯನ್ನು ನಿರ್ಮಿಸಿಕೊಟ್ಟು ಪ್ರತಿಭಾನ್ವಿತ ಬಡ ಮಕ್ಕಳ ಉನ್ನತ ವ್ಯಾಸಂಗಕ್ಕೆ ಅನುಕೂಲ ಮಾಡಿಕೊಡಲಾಗುವುದು. ಗ್ರಾಮಸ್ಥರು ಪರಸ್ಪರ ಒಗ್ಗಟ್ಟಿನಿಂದ ಈ ಕಾರ್ಯಕ್ಕೆ ಸಹಕಾರ ನೀಡುವಂತೆ ಅವರು ಕೋರಿಕೊಂಡರು.
ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ತಪಸಿಯಂತಹ ಸಣ್ಣ ಗ್ರಾಮಕ್ಕೆ ಮಂಜೂರು ಮಾಡಿಸಲಾಗಿದೆ. ಸುತ್ತಮುತ್ತಲಿನ ಗ್ರಾಮಗಳ ಬಡ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ. ೬ನೇ ತರಗತಿಯಿಂದ ಎಸ್‌ಎಸ್‌ಎಲ್‌ಸಿವರೆಗೆ ಮಕ್ಕಳಿಗೆ ಉಚಿತ ಶಿಕ್ಷಣದ ಜೊತೆಗೆ ವಸತಿ ಸೌಲಭ್ಯವನ್ನೂ ಕೂಡಾ ಕಲ್ಪಿಸಿಕೊಡಲಾಗುತ್ತಿದೆ. ಈ ಕಾಮಗಾರಿಗೆ ಈಗಾಗಲೇ ಅನುದಾನವೂ ಕೂಡ ಬಿಡುಗಡೆಯಾಗಿದ್ದು, ನಿವೇಶನ ಸಮಸ್ಯೆ ಪರಿಹಾರವಾಗಿರುವುದರಿಂದ ಕಾಮಗಾರಿ ಆರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾಗಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಮೊದಲಿನಿಂದಲೂ ತಪಸಿ-ಕೆಮ್ಮನಕೋಲ ಗ್ರಾಮಸ್ಥರು ನಮ್ಮೆಲ್ಲ ಬೆಳವಣಿಗೆಗೆ ಸಾಕಷ್ಟು ಸಹಕಾರ ನೀಡುತ್ತಾ ಬರುತ್ತಿದ್ದಾರೆ. ಪ್ರತಿ ಹಂತದಲ್ಲೂ ನಮಗೆ ಬೆನ್ನೆಲುಬಾಗಿ ನಿಲ್ಲುತ್ತಿದ್ದಾರೆ. ಇದೇ ಕಾರಣಕ್ಕಾಗಿ ಸರ್ವೇ ನಂಬರ ೧೯೩ ರಲ್ಲಿ ವಾಸಿಸುತ್ತಿರುವ ಬಡ ಕುಟುಂಬಗಳ ಹಿತದೃಷ್ಟಿಯಿಂದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯನ್ನು ಅಲ್ಲಿಂದ ಸ್ಥಳ ಬದಲಾಯಿಸಿ ಅದೇ ಸರ್ವೇ ನಂಬರನಲ್ಲಿ ೧೦ ಎಕರೆ ಪ್ರದೇಶದಲ್ಲಿ ಕಟ್ಟಡವನ್ನು ನಿರ್ಮಿಸಲು ನಿರ್ಣಯ ಕೈಗೊಂಡಿದ್ದೇವೆ. ಇದಕ್ಕೆ ಗ್ರಾಮಸ್ಥರು ಸಹ ತಮ್ಮ ಒಪ್ಪಿಗೆ ಸೂಚಿಸಿದ್ದಾರೆ. ಬಡ ಕುಟುಂಬಗಳಿಗೆ ಅನುಕೂಲವಾಗಲಿ ಎನ್ನುವ ಸದುದ್ಧೇಶದಿಂದ ಕಟ್ಟಡವನ್ನು ಸ್ಥಳಾಂತರ ಮಾಡಿರುವುದಾಗಿ ಅವರು ಹೇಳಿದ್ದಾರೆ.
ಉಭಯ ಗುಂಪುಗಳ ಮಧ್ಯ ನಡೆದ ಸಂಧಾನ ಸಭೆಯಲ್ಲಿ ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ, ಎಪಿಎಂಸಿ ನಿರ್ದೇಶಕ ಬಸವರಾಜ ಸಾಯನ್ನವರ, ಗುರಪ್ಪ ಹಿಟ್ಟಣಗಿ, ಬಾಳಪ್ಪ ನಾಯಿಕ, ಮುತ್ತೆಪ್ಪ ಮನ್ನಾಪೂರ, ರಾಯಪ್ಪ ತಿರಕನ್ನವರ, ವಸಂತ ಗಲಗಲಿ, ಲಕ್ಷ್ಮಣ ಅರಬನ್ನರ, ಯಮನಪ್ಪ ವಾಳದ, ಮಾರುತಿ ಸಾಯನ್ನವರ, ಗುರುನಾಥ ಪೊಲೀಸನವರ, ಲಕ್ಕಪ್ಪ ಕುರೇರ, ಸಿದ್ದಪ್ಪ ಸುಳ್ಳನವರ, ಗುರುನಾಥ ಕುರೇರ, ಶಿವಪುತ್ರ ದಾಬೋಜಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.


Spread the love

About Yuva Bharatha

Check Also

ಅಕ್ಕಾ ಅಂದ್ರೆ ಅವರೇ ಅಂತ ಯಾಕೆ ತಿಳ್ಕೊತೀರಿ, ಪೆಗ್ ಅಂದ್ರೆ ಎನರ್ಜಿ ಡ್ರಿಂಕ್-ಮಾಜಿ ಶಾಸಕ ಸಂಜಯ ಪಾಟೀಲ.!

Spread the loveನಾನು ಭಾಷಣದಲ್ಲಿ ಹೆಬ್ಬಾಳಕರ ಹೆಸರನ್ನೆ ತಗೊಂಡಿಲ್ಲ. -ಮಾಜಿ ಶಾಸಕ ಸಂಜಯ ಪಾಟೀಲ.! ಯುವಭಾರತ ಸುದ್ದಿ ಬೆಳಗಾವಿ: ನಾನು …

Leave a Reply

Your email address will not be published. Required fields are marked *

three + 11 =