Breaking News

ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿಯವರ ಪರ ಜಯಶ್ರೀ ಪಾಟೀಲ ಮತಯಾಚನೆ.!

Spread the love

ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿಯವರ ಪರ ಜಯಶ್ರೀ ಪಾಟೀಲ ಮತಯಾಚನೆ.!

ಯುವ ಭಾರತ ಸುದ್ದಿ,ಗೋಕಾಕ್: ಗೋಕಾಕ ನಗರದ ವಿವಿಧ ನಗರ, ಗಲ್ಲಿಗಳಲ್ಲಿ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿಯವರ ಪರ ಬಿಜೆಪಿ ಚುನಾವಣಾ ವಿಶೇಷ ಅಹ್ವಾನಿತ ಸಂಪರ್ಕ ಪ್ರಮುಖರಾದ ಜಯಶ್ರೀ ಪಾಟೀಲ ಮತಯಾಚನೆ ನಡೆಸಿದರು.

ನಗರದ ಸತೀಶ ನಗರ, ದುರ್ಗಾ ನಗರ, ಬಾಂಬೆಚಾಳ, ಬಸವ ನಗರ, ಗುರುವಾರ ಪೇಠ ಸೇರಿದಂತೆ ನಗರದ ವಿವಿಧ ಬಡಾವಣೆಗಳಲ್ಲಿಯ ಮಠಾಧೀಶರು, ವಿವಿಧ ಸಮುದಾಯಗಳ ಮುಖಂಡರುಗಳನ್ನು ಭೇಟಿ ಮಾಡಿ ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರ ಕೈಗೊಂಡರು.
ನಗರದ ಮಹಿಳಾ ಸಂಘ ಹಾಗೂ ಸ್ವಸಹಾಯ ಸಂಘಗಳ ಪದಾಧಿಕಾರಿಗಳು ಹಾಗೂ ಸದಸ್ಯರ ಸಭೆ ನಡೆಸಿ, ಬಿಜೆಪಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಸಹಕರಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯರಾದ ಶಾಂತಾ ಕಂಬಿ, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜ್ಯೋತಿ ಕೋಲಾರ, ಬಿಜೆಪಿ ನಗರ ಮಂಡಲ ಉಪಾಧ್ಯಕ್ಷೆ ಕುಸುಮಾ ಖನಗಾಂವಿ, ಮಹಾನಂದ ಗುಮತಿ, ಲಕ್ಕಪ್ಪ ತಹಶೀಲದಾರ, ಸದರಜೋಶಿ, ಶಕೀಲ ಧಾರವಾಡಕರ, ಬಸವರಾಜ ಹುಳ್ಳೇರ, ಕವಿತಾ ಗುಮತಿ ಸೇರಿದಂತೆ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.


Spread the love

About Yuva Bharatha

Check Also

ಗೋಕಾಕನಲ್ಲಿ ಬಿಜೆಪಿಯಿಂದ ಕಾಂಗ್ರೇಸ್ ವಿರುದ್ಧ ಪ್ರತಿಭಟನೆ.!

Spread the loveಗೋಕಾಕನಲ್ಲಿ ಬಿಜೆಪಿಯಿಂದ ಕಾಂಗ್ರೇಸ್ ವಿರುದ್ಧ ಪ್ರತಿಭಟನೆ.! ಗೋಕಾಕ: ವಿಜಯಪುರ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯ ಹಿಂದು ಧಾರ್ಮಿಕ …

Leave a Reply

Your email address will not be published. Required fields are marked *

12 + eighteen =