ಗೋಕಾಕ: ಗೋಕಾಕ ಮತಕ್ಷೇತ್ರದ ಶಾಸಕ ರಮೇಶ ಜಾರಕಿಹೊಳಿ ಮಾರ್ಗದರ್ಶನದಲ್ಲಿ ಬೆಳಗಾವಿ ಲೋಕಸಭಾ ಉಪಚುನಾವಣೆಯ ಬಿಜೆಪಿಯ ಅಭ್ಯರ್ಥಿ ಮಂಗಳಾ ಅಂಗಡಿಯವರು ಗೋಕಾಕ ಮತಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಶನಿವಾರದಂದು ಮತಯಾಚನೆ ನಡೆಸಲಿದ್ದಾರೆಂದು ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ ಹಾಗೂ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮಣ್ಣವರ ತಿಳಿಸಿದ್ದಾರೆ.
ಜಂಟಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ಶನಿವಾರದಂದು ಬೆಳಿಗ್ಗೆ ೯ಗಂಟೆಗೆ ಅಂಕಲಗಿ, ೧೦ಗಂಟೆಗೆ ಅಕ್ಕತಂಗೇರಹಾಳ, ೧೧ಗಂಟೆಗೆ ಖನಗಾಂವ, ೧೨ಗಂಟೆಗೆ ಮಮದಾಪುರ, ಮಧ್ಯಾಹ್ನ ೨ಗಂಟೆಗೆ ಶಿಂಧಿಕುರಬೇಟ, ೩ಗಂಟೆಗೆ ಮಲ್ಲಾಪೂರ ಪಿಜಿ (ಘಟಪ್ರಭಾ) ೪ಗಂಟೆಗೆ ಕೊಣ್ಣೂರ ಹಾಗೂ ಸಂಜೆ ೫ಗಂಟೆಗೆ ಗೋಕಾಕ ನಗರದ ಗುರುವಾರಪೇಠ, ೬ಗಂಟೆಗೆ ಬಣಗಾರ ಗಲ್ಲಿ, ೭ಗಂಟೆಗೆ ಬಸವ ನಗರ ಹಾಗೂ ವಿವೇಕಾನಂದ ನಗರಗಳಲ್ಲಿ ಮತಯಾಚನೆ ನಡೆಸಲಿದ್ದಾರೆ. ಭಾರತೀಯ ಜನತಾ ಪಾರ್ಟಿಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Check Also
ಅಂಜಲಿ ಹತ್ಯೆ ಪ್ರಕರಣ ಖಂಡಿಸಿ ಆರೋಪಿಗೆ ಕಠೀಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಗೋಕಾಕನಲ್ಲಿ ಪ್ರತಿಭಟನೆ.!
Spread the loveಅಂಜಲಿ ಹತ್ಯೆ ಪ್ರಕರಣ ಖಂಡಿಸಿ ಆರೋಪಿಗೆ ಕಠೀಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಗೋಕಾಕನಲ್ಲಿ ಪ್ರತಿಭಟನೆ.! ಗೋಕಾಕ: ಹುಬ್ಬಳ್ಳಿಯಲ್ಲಿ …